ಐಪಿಎಲ್‌ನಲ್ಲಿ ಸದ್ದು ಮಾಡಿದರೆ, ಆ ಆಟಗಾರನ ವೃತ್ತಿಜೀವನ ಬೇರೆಯೇ ಹಂತಕ್ಕೆ ಹೋಗುತ್ತದೆ. ಇದಲ್ಲದೆ, ಐಪಿಎಲ್ ಬ್ಯಾಟರ್ಸ್ ತಮ್ಮ ಪರಾಕ್ರಮವನ್ನು ಪ್ರದರ್ಶಿಸುವ ವೇದಿಕೆಯಾಗಿದ್ದು, ಟಿ20 ಕ್ರಿಕೆಟ್‌ನಲ್ಲಿ ಕೆಲವು ಸ್ಫೋಟಕ ಇನ್ನಿಂಗ್ಸ್‌ಗಳನ್ನು ನೀಡಿದೆ. ಚುಟುಕು ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸುವುದು ನಿಜಕ್ಕೂ ಬ್ಯಾಟರ್ಸ್‌ಗೆ ಸವಾಲಾಗಿದ್ದರೂ, ಕೆಲವು ಬ್ಯಾಟರ್ಸ್ ಈ ದಾಖಲೆಗಳನ್ನು ಮಾಡುವಲ್ಲಿ ಯಶ್ವಸಯಾಗಿದ್ದಾರೆ.
ಐಪಿಎಲ್‌ನಲ್ಲಿ ಭರ್ಜರಿ ಶತಕಗಳಿಂದ ಹಿಡಿದು, ಒಬ್ಬನೇ ಬ್ಯಾಟರ್ ಕ್ರೀಸ್‌ನಲ್ಲಿ ನಿಂತು ಪಂದ್ಯದ ದಿಕ್ಕನ್ನು ತಿರುಗಿಸಿದ ಇನ್ನಿಂಗ್ಸ್‌ಗಳವರೆಗೆ ಎಲ್ಲವೂ ದಾಖಲಾಗಿದೆ. ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್ ಒಂದರಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ ಸ್ಫೋಟಕ ಬ್ಯಾಟರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

ಐಪಿಎಲ್ ಇತಿಹಾಸದಲ್ಲಿ ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯದ ಕ್ಷಣ ಎಂದರೆ, ಐಪಿಎಲ್ 2013ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕ್ರಿಸ್ ಗೇಲ್ 66 ಎಸೆತಗಳಲ್ಲಿ ಅಜೇಯ 175 ರನ್ ಗಳಿಸಿದರು. ಈ ಸ್ಮರಣೀಯ ಇನ್ನಿಂಗ್ಸ್ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿ ಉಳಿದಿದೆ.
ಇದಲ್ಲದೆ, 2008 ರಲ್ಲಿ ನಡೆದ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಅವರ ಸ್ಫೋಟಕ 158* ರನ್‌ಗಳು ಲೀಗ್‌ನ ಭವಿಷ್ಯದ ಗತಿಯನ್ನು ರೂಪಿಸಿತ್ತು. ಇದು ಐಪಿಎಲ್‌ನಲ್ಲಿ ಬ್ಯಾಟರ್ಸ್‌ಗೆ ಹೆಚ್ಚಿನ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ನೀಡಿತು.
ಕ್ರಿಸ್ ಗೇಲ್ (ಆರ್‌ಸಿಬಿ) vs ಪುಣೆ ವಾರಿಯರ್ಸ್ ಇಂಡಿಯಾ, ಐಪಿಎಲ್ 2013: 66 ಎಸೆತಗಳಲ್ಲಿ ಅಜೇಯ 175 ರನ್
ಬ್ರೆಂಡನ್ ಮೆಕಲಮ್ (ಕೆಕೆಆರ್) vs ಆರ್‌ಸಿಬಿ, ಐಪಿಎಲ್ 2008: 73 ಎಸೆತಗಳಲ್ಲಿ ಅಜೇಯ 158 ರನ್
ಕ್ವಿಂಟನ್ ಡಿ ಕಾಕ್ (ಎಲ್‌ಎಸ್‌ಜಿ) vs ಕೆಕೆಆರ್, ಐಪಿಎಲ್ 2022: 70 ಎಸೆತಗಳಲ್ಲಿ ಅಜೇಯ 140 ರನ್
ಎಬಿ ಡಿವಿಲಿಯರ್ಸ್ (ಆರ್‌ಸಿಬಿ) vs ಎಂಐ, ಐಪಿಎಲ್ 2015: 59 ಎಸೆತಗಳಲ್ಲಿ ಅಜೇಯ 133 ರನ್
ಕೆಎಲ್ ರಾಹುಲ್ (ಪಿಬಿಕೆಎಸ್) vs ಆರ್‌ಸಿಬಿ, ಐಪಿಎಲ್ 2020: 69 ಎಸೆತಗಳಲ್ಲಿ ಅಜೇಯ 132 ರನ್
ಎಬಿ ಡಿವಿಲಿಯರ್ಸ್ (ಆರ್‌ಸಿಬಿ) vs ಗುಜರಾತ್ ಲಯನ್ಸ್, ಐಪಿಎಲ್ 2016: 52 ಎಸೆತಗಳಲ್ಲಿ ಅಜೇಯ 129 ರನ್
ಶುಭಮನ್ ಗಿಲ್ (ಜಿಟಿ) vs ಎಂಐ, ಐಪಿಎಲ್ 2023: 60 ಎಸೆತಗಳಲ್ಲಿ 129 ರನ್
ಕ್ರಿಸ್ ಗೇಲ್ (ಆರ್‌ಸಿಬಿ) vs ಡೆಲ್ಲಿ ಡೇರ್‌ಡೆವಿಲ್ಸ್, ಐಪಿಎಲ್ 2012: 62 ಎಸೆತಗಳಲ್ಲಿ ಅಜೇಯ 128 ರನ್
ರಿಷಭ್ ಪಂತ್ (ಡೆಲ್ಲಿ ಡೇರ್‌ಡೆವಿಲ್ಸ್) vs ಎಸ್‌ಆರ್‌ಹೆಚ್ ಐಪಿಎಲ್ 2018: 63 ಎಸೆತಗಳಲ್ಲಿ ಅಜೇಯ 128 ರನ್
ಮುರಳಿ ವಿಜಯ್ (ಸಿಎಸ್‌ಕೆ) vs ಆರ್‌ಆರ್, ಐಪಿಎಲ್ 2010: 56 ಎಸೆತಗಳಲ್ಲಿ 127 ರನ್
ಡೇವಿಡ್ ವಾರ್ನರ್ (ಎಸ್‌ಆರ್‌ಹೆಚ್) vs ಕೆಕೆಆರ್, ಐಪಿಎಲ್ 2017: 59 ಎಸೆತಗಳಲ್ಲಿ 126 ರನ್
ಮಾರ್ಕಸ್ ಸ್ಟೊಯಿನಿಸ್ (ಎಲ್‌ಎಸ್‌ಜಿ) vs ಸಿಎಸ್‌ಕೆ, ಐಪಿಎಲ್ 2024: 63 ಎಸೆತಗಳಲ್ಲಿ ಅಜೇಯ 124 ರನ್
ಜೋಸ್ ಬಟ್ಲರ್ (ಆರ್‌ಆರ್) vs ಎಸ್‌ಆರ್‌ಹೆಚ್, ಐಪಿಎಲ್ 2021: 64 ಎಸೆತಗಳಲ್ಲಿ 124 ರನ್
ಯಶಸ್ವಿ ಜೈಸ್ವಾಲ್ (ಆರ್‌ಆರ್) vs ಎಂಐ, ಐಪಿಎಲ್ 2023: 62 ಎಸೆತಗಳಲ್ಲಿ 124 ರನ್
ವೀರೇಂದ್ರ ಸೆಹ್ವಾಗ್ (ಕಿಂಗ್ಸ್ ಇಲೆವೆನ್ ಪಂಜಾಬ್) vs ಸಿಎಸ್‌ಕೆ, ಐಪಿಎಲ್ 2014: 58 ಎಸೆತಗಳಲ್ಲಿ 122 ರನ್