ಐಪಿಎಲ್ 18ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಕಾದಾಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಈಗಾಗಲೇ ಈಡನ್ ಗಾರ್ಡ್‌ನಲ್ಲಿ ಅಭ್ಯಾಸ ನಡೆಸಿವೆ. ಈ ಆವೃತ್ತಿಯ ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಮಾರ್ಚ್ 20 ರಂದು ಮುಂಬೈನಲ್ಲಿ ಬಿಸಿಸಿಐ ಎಲ್ಲ ನಾಯಕರೊಂದಿಗೆ ಸಭೆಯನ್ನು ನಡೆಸಿತು. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಈ ಬಾರಿಯ ಐಪಿಎಲ್ ನಲ್ಲಿ 2 ಹೊಸ ನಿಯಮಗಳನ್ನು ಅಳವಡಿಸಲಾಗಿದೆ. ಈ ನಿಯಮಗಳು ಈ ಬಾರಿಯ ಐಪಿಎಲ್‌ನಲ್ಲಿ ಜಾರಿಯಾಗಲಿವೆ. ಇನ್ನು ಇದೇ ಸಭೆಯಲ್ಲಿ ಬಿಸಿಸಿಐ ನಿಧಾನಗತಿಯ ಓವರ್ ದರ ನಿಯಮವನ್ನು ಉಲ್ಲಂಘಿಸಿದರೆ ನಾಯಕರ ಮೇಲಿನ ನಿಷೇಧದ ನಿಯಮವನ್ನು ಬದಲಾಯಿಸಲು ನಿರ್ಧರಿಸಿದೆ.

ನಿಧಾನಗತಿಯ ಓವರ್ ದರ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ತಂಡಗಳ ನಾಯಕ ನಿಧಾನಗತಿಯ ಓವರ್ ರೇಟ್ ನಿಯಮವನ್ನು ಈ ಬಾರಿ ಉಲ್ಲಂಘಸಿದ್ದೇ ಆದಲ್ಲಿ ಆತ ಖಾತೆಗೆ ಡಿಮೆರಿಟ್ ಅಂಕಗಳನ್ನು ಸೇರಿಸಲು ಬಿಸಿಸಿಐ ನಿರ್ಧರಿಸಿದೆ. ನಿಧಾನಗತಿಯ ಓವರ್‌ಗಳನ್ನು ಮಾಡಿದ ತಂಡಗಳ ನಾಯಕರಿಗೆ ಇನ್ನು ಡಿಮೆರಿಟ್ ಅಂಕವನ್ನು ನೀಡಲಾಗುತ್ತದೆ ಎಂದು ಕ್ರಿಕ್ ಬಜ್ ವರದಿಯನ್ನು ಮಾಡಿದೆ. ಈ ಹೊಸ ನಿಯಮದಿಂದ ನಾಯಕರು ನಿಷೇಧಕ್ಕೆ ಒಳಗಾಗುವುದು ಕಡಿಮೆ ಆಗುತ್ತದೆ.
ಒಂದು ವೇಳೆ ಐಪಿಎಲ್ ತಂಡಗಳ ನಾಯಕ ಲೆವೆಲ್ 1 ರಲ್ಲಿ ನಿಯಮವನ್ನು ಉಲ್ಲಂಘನೆ ಮಾಡಿದ್ದೇ ಆದಲ್ಲಿ ಶೇಕಡಾ 25 ರಿಂದ 75ರ ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಅಲ್ಲದೆ ನಾಯಕನ ಖಾತೆಗೆ ಒಂದು ಡಿಮೆರಿಟ್ ಅಂಕವನ್ನು ಸಹ ಸೇರಿಸಲಾಗುತ್ತದೆ. ಇನ್ನು ಒಬ್ಬ ನಾಯಕ ಲೇವಲ್ 2ರ ನಿಯಮವನ್ನು ಉಲ್ಲಂಘಿಸಿದರೆ ಆತನ ಖಾತೆಗೆ 4 ಡಿಮೆರಿಟ್ ಅಂಕಗಳನ್ನು ಸೇರಿಸಲಾಗುತ್ತದೆ. ಇದರಿಂದ ಮ್ಯಾಚ್ ರೆಫ್ರರಿ ಆ ನಾಯಕನ ಮೇಲೆ ದಂಡ ವಿಧಿಸಬಹುದಾಗಿದೆ. ಇದರಿಂದ ಆ ನಾಯಕನಿಗೆ ಭವಿಷ್ಯದಲ್ಲಿ ಅಪಾಯ ಎದುರಾಗಲಿದೆ.
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ನಿಧಾನ ಓವರ್ ದರ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಒಂದು ಪಂದ್ಯದ ನಿಷೇಧವನ್ನು ಎದುರಿಸಿದ್ದಾರೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ.