Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Bhuvneshwar Kumar: ಎಸ್‌ಆರ್‌ಹೆಚ್‌ ಜೊತೆಗಿನ 11 ವರ್ಷಗಳ ಪಯಣವನ್ನು ನೆನಪಿಸಿಕೊಂಡ ಭುವಿ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ಹಳೆಯ ಸ್ಟಾರ್ ವೇಗದ ಬೌಲರ್‌ ಅನ್ನು ಮರಳಿ ತಂಡಕ್ಕೆ ಕರೆ ತಂದಿದೆ. ಕಳೆದ 11 ವರ್ಷಗಳಿಂದ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡದ ಪ್ರಮುಖ ಭಾಗವಾಗಿದ್ದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಮೆಗಾ ಹರಾಜಿನಲ್ಲಿ ಆರ್‌ಸಿಬಿ 10.75 ಕೋಟಿಗೆ ಖರೀದಿಸಿದೆ. ಈ ಮೂಲಕ ಭುವನೇಶ್ವರ್ ಕುಮಾರ ಅವರು ಎಸ್‌ಆರ್‌ಹೆಚ್ ಜೊತೆಗಿನ 11 ವರ್ಷಗಳ ಪಯಣವನ್ನು ಮುಕ್ತಾಯಗೊಳಿಸಿದ್ದಾರೆ.

ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಪಾಲಾಗಿರುವ ಭುವನೇಶ್ವರ್ ಕುಮಾರ್ ಎಸ್‌ಆರ್‌ಹೆಚ್ ತಂಡಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಭುವನೇಶ್ವರ್ ಕುಮಾರ್ ಎಸ್‌ಆರ್‌ಹೆಚ್‌ ಜೊತೆಗೆ ಕಳೆದ ಅದ್ಭುತ ಕ್ಷಣಗಳನ್ನು ನೆನದಿದ್ದಾರೆ. ಎಸ್‌ಆರ್‌ಹೆಚ್ ತಂಡದೊಂದಿಗೆ ಭುವನೇಶ್ವರ್ ಕುಮಾರ್ ಉತ್ತಮ ಸಂಬಂಧವನ್ನು ಹೊಂದಿದ್ದರು.

IPL 2025 Bhuvneshwar Kumar Says Goodbye to Sunrisers Hyderabad

ಮರೆಯಲಾಗದ ನೆನಪುಗಳು

ಭುವನೇಶ್ವರ್ ಕುಮಾರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ 'ಸತತ 11 ವರ್ಷಗಳು ಕಳೆದಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ವಿದಾಯ ಹೇಳುತ್ತೇನೆ. ಹೈದರಾಬಾದ್ ತಂಡದೊಂದಿಗೆ ನನಗೆ ಅನೇಕ ಮರೆಯಲಾಗದ ನೆನಪುಗಳಿವೆ. ನಾನು ಎಂದಿಗೂ ಮರೆಯಲಾಗದ ಒಂದು ವಿಷಯವೆಂದರೆ ಅಭಿಮಾನಿಗಳ ಪ್ರೀತಿ. ನಿಮ್ಮ ಬೆಂಬಲ ನಿರಂತರವಾಗಿರಲಿ. ಈ ಪ್ರೀತಿ ಮತ್ತು ಬೆಂಬಲವನ್ನು ನಾನು ಯಾವಾಗಲೂ ನನ್ನೊಂದಿಗೆ ಇಟ್ಟುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಐಪಿಎಲ್ ಪಯಣ

ಭುವನೇಶ್ವರ್ ಕುಮಾರ್ 2009ರಲ್ಲಿ ಆರ್‌ಸಿಬಿ ಯೊಂದಿಗೆ ತಮ್ಮ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ ಪುಣೆ ವಾರಿಯರ್ಸ್‌ಗೆ ತೆರಳಲಿದ್ದರು. ಆದರೆ ಅವರು ಮೊದಲೆರಡು ಐಪಿಎಲ್‌ ಆವೃತ್ತಿಗಳಲ್ಲಿ ಆಡಲಿಲ್ಲ. ಪುಣೆ ವಾರಿಯರ್ಸ್‌ನೊಂದಿಗೆ ಮೂರು ಆವೃತ್ತಿಗಳನ್ನು ಕಳೆದ ನಂತರ, ಭುವನೇಶ್ವರ್ ಕುಮಾರ್ 2014 ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಸೇರಿದರು. ಅಲ್ಲಿಂದ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಎಸ್‌ಆರ್‌ಹೆಚ್‌ ತಂಡವನ್ನು ಪ್ರತಿನಿಧಿಸಿದರು. ಜೊತೆಗೆ ತಂಡದ ಪ್ರಮುಖ ವಿಕೆಟ್ ಟೇಕರ್ ಬೌಲರ್‌ ಆಗಿದ್ದರು. ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ 176 ಪಂದ್ಯಗಳನ್ನು ಆಡಿದ್ದು, 181 ವಿಕೆಟ್ ಪಡೆದಿದ್ದಾರೆ.

ಭುವಿ ದಾಖಲೆಗಳು

ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾ ಪರ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ನ್ಯೂಜಿಲೆಂಡ್ ವಿರುದ್ಧ ಅದೇ ವರ್ಷ ತಮ್ಮ ಕೊನೆಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕೀಳಿದಿದ್ದರು. ಆದರೆ, ಅವರು 2018 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಭುವನೇಶ್ವರ್ ಕುಮಾರ್ ಭಾರತ ಪರ 121 ಏಕದಿನ ಪಂದ್ಯಗಳಲ್ಲಿ 141 ವಿಕೆಟ್ ಪಡೆದಿದ್ದರೆ, 21 ಟೆಸ್ಟ್ ಪಂದ್ಯಗಳಲ್ಲಿ 63 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೆ, 87 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 90 ವಿಕೆಟ್ ಉರುಳಿಸಿದ್ದಾರೆ

Story first published: Thursday, November 28, 2024, 17:40 [IST]
Other articles published on Nov 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+