IPL 2025: ಅತಿ ಹೆಚ್ಚು ಮೇಡನ್ ಓವರ್ ಹಾಕಿ ಸೈ ಎನಿಸಿಕೊಂಡ ಬೌಲರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬ್ಯಾಟರ್ಸ್‌ಗೆ ಹೇಳಿ ಮಾಡಿಸಿರುವ ವೇದಿಕೆಯಾಗಿದೆ. ಇಲ್ಲಿಂದ ಸಾಕಷ್ಟು ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿವೆ. ಬ್ಯಾಟರ್ಸ್ ಪ್ರಾಬಲ್ಯ ಸಾಧಿಸಿರುವ ಐಪಿಎಲ್‌ನಲ್ಲಿ ಬೌಲರ್ಸ್ ಕೂಡ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬೌಲರ್ಸ್ ಯಶಸ್ವಿಯಾಗುವುದು ಸುಲಭವಲ್ಲ. ಬೌಲಿಂಗ್ ಮಾಡುವಾಗ ಬೌಲರ್ಸ್ ಸ್ವಲ್ಪ ಎಡವಟ್ಟು ಮಾಡಿದರೂ, ಬ್ಯಾಟರ್ಸ್ ಚೆಂಡನ್ನು ಬೌಂಡರಿ, ಸಿಕ್ಸರ್ ಕಡೆಗೆ ಕಳುಹಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಸಹ, ಕೆಲವು ಸ್ಟಾರ್ ಬೌಲರ್ಸ್ ಬ್ಯಾಟರ್ಸ್ ಮೇಲೆ ಒತ್ತಡ ಹೇರಿದ್ದು, ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಬ್ಯಾಟರ್ಸ್ ಮೇಲೆ ಒತ್ತಡ ಹೇರಿರುವುದು ಮಾತ್ರವಲ್ಲದೆ, ಸ್ಟಾರ್ ಬೌಲರ್ಸ್ ಹೆಚ್ಚು ಮೇಡನ್ ಓವರ್‌ಗಳನ್ನು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕೌಶಲ್ಯ, ನಿಖರತೆ ಮತ್ತು ಒತ್ತಡವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೇಡನ್ ಓವರ್‌ಗಳನ್ನು ಮಾಡಿದ ಟಾಪ್ 10 ಬೌಲರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ ತಿಳಿಯಿರಿ.

ಭುವನೇಶ್ವರ್ ಕುಮಾರ್- 14 ಮೇಡನ್ ಓವರ್
ತಂಡಗಳು: ಪುಣೆ ವಾರಿಯರ್ಸ್ ಇಂಡಿಯಾ, ಸನ್‌ರೈಸರ್ಸ್ ಹೈದರಾಬಾದ್
ಪಂದ್ಯಗಳು: 176
ವಿಕೆಟ್‌ಗಳು: 181
ಎಕಾನಮಿ: 7.56
ಅತ್ಯುತ್ತಮ ಪ್ರದರ್ಶನ: 5/19
ಪ್ರವೀಣ್ ಕುಮಾರ್ - 14 ಮೇಡನ್ ಓವರ್
ತಂಡಗಳು: ಆರ್‌ಸಿಬಿ, ಕೆಎಕ್ಸ್‌ಐಪಿ, ಎಂಐ, ಎಸ್‌ಆರ್‌ಹೆಚ್, ಗುಜರಾತ್ ಲಯನ್ಸ್
ಪಂದ್ಯಗಳು: 119
ವಿಕೆಟ್‌ಗಳು: 90
ಎಕಾನಮಿ: 7.72
ಅತ್ಯುತ್ತಮ ಪ್ರದರ್ಶನ: 3/18
ಟ್ರೆಂಟ್ ಬೌಲ್ಟ್ - 11 ಮೇಡನ್ ಓವರ್
ತಂಡಗಳು: ಡಿಸಿ, ಕೆಕೆಆರ್, ಎಂಐ, ಆರ್‌ಆರ್, ಎಸ್‌ಆರ್‌ಹೆಚ್
ಪಂದ್ಯಗಳು: 104
ವಿಕೆಟ್‌ಗಳು: 121
ಎಕಾನಮಿ: 8.29
ಅತ್ಯುತ್ತಮ ಪ್ರದರ್ಶನ: 4/18
ಇರ್ಫಾನ್ ಪಠಾಣ್ - 10 ಮೇಡನ್ ಓವರ್
ತಂಡಗಳು: ಡಿಸಿ, ಜಿಎಲ್, ಕೆಎಕ್ಸ್‌ಐಪಿ, ಡಿಸಿ, ಆರ್‌ಪಿಎಸ್, ಎಸ್‌ಆರ್‌ಹೆಚ್
ಪಂದ್ಯಗಳು: 103
ವಿಕೆಟ್‌ಗಳು: 80
ಎಕಾನಮಿ: 7.77
ಅತ್ಯುತ್ತಮ ಪ್ರದರ್ಶನ: 3/24
ಜಸ್ಪ್ರೀತ್ ಬುಮ್ರಾ - 8 ಮೇಡನ್ ಓವರ್
ತಂಡಗಳು: ಮುಂಬೈ ಇಂಡಿಯನ್
ಪಂದ್ಯಗಳು: 133
ವಿಕೆಟ್‌ಗಳು: 165
ಎಕಾನಮಿ: 7.30
ಅತ್ಯುತ್ತಮ ಪ್ರದರ್ಶನ: 5/10
ಲಸಿತ್ ಮಾಲಿಂಗ - 8 ಮೇಡನ್ ಓವರ್
ತಂಡಗಳು: ಮುಂಬೈ ಇಂಡಿಯನ್ಸ್
ಪಂದ್ಯಗಳು: 122
ವಿಕೆಟ್‌ಗಳು: 170
ಎಕಾನಮಿ: 7.14
ಅತ್ಯುತ್ತಮ ಪ್ರದರ್ಶನ: 5/13
ಸಂದೀಪ್ ಶರ್ಮಾ - 8 ಮೇಡನ್ ಓವರ್
ತಂಡಗಳು: ಕೆಎಕ್ಸ್‌ಐಪಿ, ಪಿಬಿಕೆಎಸ್, ಆರ್‌ಆರ್, ಎಸ್‌ಆರ್‌ಹೆಚ್
ಪಂದ್ಯಗಳು: 127
ವಿಕೆಟ್‌ಗಳು: 137
ಎಕಾನಮಿ: 7.88
ಅತ್ಯುತ್ತಮ ಪ್ರದರ್ಶನ: 5/18
ಡೇಲ್ ಸ್ಟೇನ್ - 7 ಮೇಡನ್ ಓವರ್
ತಂಡಗಳು: ಡಿಸಿಎಚ್, ಜಿಎಲ್, ಆರ್‌ಸಿಬಿ, ಎಸ್‌ಆರ್‌ಹೆಚ್
ಪಂದ್ಯಗಳು: 95
ವಿಕೆಟ್‌ಗಳು: 97
ಎಕಾನಮಿ: 6.91
ಅತ್ಯುತ್ತಮ ಪ್ರದರ್ಶನ: 3/8
ಅಮಿತ್ ಮಿಶ್ರಾ - 6 ಮೇಡನ್ ಓವರ್
ತಂಡಗಳು: ಡಿಸಿ, ಡಿಸಿಎಚ್, ಎಲ್‌ಎಸ್‌ಜಿ, ಎಸ್‌ಆರ್‌ಎಚ್
ಪಂದ್ಯಗಳು: 162
ವಿಕೆಟ್‌ಗಳು: 174
ಎಕಾನಮಿ: 7.37
ಅತ್ಯುತ್ತಮ ಪ್ರದರ್ಶನ: 5/17
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications