ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೌಲರ್‌ಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಬೌಲರ್‌ಗಳು ತಮ್ಮ ತಂತ್ರಗಳಿಂದ ಪಂದ್ಯಗಳ ಗತಿಯನ್ನು ಬದಲಾಯಿಸಬಲ್ಲರು. ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಹಲವು ಬೌಲರ್ಸ್ ಯಶಸ್ಸು ಕಂಡಿದ್ದಾರೆ. ಈ ಬೌಲರ್ಸ್ ತಮ್ಮ ತಂಡದ ಪರ ಸತತವಾಗಿ ವಿಕೆಟ್ ಪಡೆಯುವ ಮೂಲಕ ಪಂದ್ಯಗಳನ್ನು ಗೆಲ್ಲಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ.
ಐಪಿಎಲ್ 2008 ರ ಆರಂಭದಿಂದ 2025 ರವರೆಗೆ ಬೌಲರ್ಸ್ ಐಪಿಎಲ್ ಇತಿಹಾಸದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಇದುವರೆಗೆ ಐಪಿಎಲ್ ಇತಿಹಾಸದಲ್ಲಿ ಇಲ್ಲಿವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 15 ಬೌಲರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

ಐಪಿಎಲ್‌ನಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಚಹಾಲ್ ಐಪಿಎಲ್ ಪಯಾಣ ಶುರು ಮಾಡಿದರು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸೇರಿದ ಚಹಾಲ್ ಮಿಂಚಿದರು. ಇದಾದ ಬಳಿಕ ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಅವರು ತಮ್ಮ ಐಪಿಎಲ್ ಪಯಾಣ ಮುಂದುವರೆಸಿದರು. ಐಪಿಎಲ್ 2024ರವರಗೆ ಚಹಾಲ್ 160 ಪಂದ್ಯಗಳಲ್ಲಿ 205 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರೊಂದಿಗೆ ಅವರು ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ 40 ರನ್‌ಗಳಿಗೆ 5 ವಿಕೆಟ್.
ಪಿಯೂಷ್ ಚಾವ್ಲಾ, ತಮ್ಮ ಲೆಗ್ ಸ್ಪಿನ್ ಬೌಲಿಂಗ್ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಸೇರಿದಂತೆ ವಿವಿಧ ಫ್ರಾಂಚೈಸಿಗಳ ಪರ ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ. ಅವರು 192 ಪಂದ್ಯಗಳಲ್ಲಿ 192 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನ 17 ರನ್‌ಗಳಿಗೆ 4 ವಿಕೆಟ್ ಪಡೆದಿರುವುದು.
ಯುಜುವೇಂದ್ರ ಚಹಾಲ್ (ಎಂಐ, ಆರ್‌ಸಿಬಿ, ಆರ್‌ಆರ್)- ಐಪಿಎಲ್ 2013-2024: 160 ಪಂದ್ಯ, 205 ವಿಕೆಟ್
ಪಿಯೂಷ್ ಚಾವ್ಲಾ (ಸಿಎಸ್‌ಕೆ, ಕೆಕೆಆರ್, ಕೆಎಕ್ಸ್‌ಐಪಿ, ಎಂಐ)- ಐಪಿಎಲ್ 2008-2024: 192 ಪಂದ್ಯ, 192 ವಿಕೆಟ್
ಡ್ವೇನ್ ಬ್ರಾವೋ (ಸಿಎಸ್‌ಕೆ, ಜಿಎಲ್, ಎಂಐ)- ಐಪಿಎಲ್ 2008-2022: 161 ಪಂದ್ಯ, 183 ವಿಕೆಟ್
ಭುವನೇಶ್ವರ್ ಕುಮಾರ್ (ಆರ್‌ಸಿಬಿ, ಪಿಡಬ್ಲ್ಯೂಐ, ಎಸ್‌ಆರ್‌ಹೆಚ್)- ಐಪಿಎಲ್ 2011-2024: 176 ಪಂದ್ಯ, 181 ವಿಕೆಟ್
ಸುನಿಲ್ ನರೈನ್ (ಕೆಕೆಆರ್)- ಐಪಿಎಲ್ 2012-2024: 177 ಪಂದ್ಯ, 180 ವಿಕೆಟ್
ರವಿಚಂದ್ರನ್ ಅಶ್ವಿನ್ (ಸಿಎಸ್‌ಕೆ, ಡಿಸಿ, ಕೆಎಕ್ಸ್‌ಐಪಿ, ಆರ್‌ಪಿಎಸ್, ಆರ್‌ಆರ್) ಐಪಿಎಲ್ 2009-2024: 212 ಪಂದ್ಯ, 180 ವಿಕೆಟ್
ಅಮಿತ್ ಮಿಶ್ರಾ (ಡಿಸಿ, ಡಿಸಿಎಚ್, ಎಲ್‌ಎಸ್‌ಜಿ, ಎಸ್‌ಆರ್‌ಹೆಚ್) ಐಪಿಎಲ್ 2008-2024: 162 ಪಂದ್ಯ, 174 ವಿಕೆಟ್
ಲಸಿತ್ ಮಾಲಿಂಗ (ಎಂಐ) ಐಪಿಎಲ್ 2009-2019: 122 ಪಂದ್ಯ, 170 ವಿಕೆಟ್
ಜಸ್ಪ್ರೀತ್ ಬುಮ್ರಾ (ಎಂಐ) ಐಪಿಎಲ್ 2013-2024: 133 ಪಂದ್ಯ, 165 ವಿಕೆಟ್
ರವೀಂದ್ರ ಜಡೇಜಾ (ಸಿಎಸ್‌ಕೆ, ಜಿಎಲ್, ಕೊಚ್ಚಿ, ಆರ್‌ಆರ್) ಐಪಿಎಲ್ 2008-2024: 240 ಪಂದ್ಯ, 160 ವಿಕೆಟ್
ಹರ್ಭಜನ್ ಸಿಂಗ್ (ಸಿಎಸ್‌ಕೆ, ಕೆಕೆಆರ್, ಎಂಐ) ಐಪಿಎಲ್ 2008-2021: 163 ಪಂದ್ಯ, 150 ವಿಕೆಟ್
ರಶೀದ್ ಖಾನ್ (ಜಿಟಿ, ಎಸ್‌ಆರ್‌ಹೆಚ್) ಐಪಿಎಲ್ 2017-2024: 121 ಪಂದ್ಯ, 149 ವಿಕೆಟ್
ಉಮೇಶ್ ಯಾದವ್ (ಡಿಸಿ, ಜಿಟಿ, ಕೆಕೆಆರ್, ಆರ್‌ಸಿಬಿ) ಐಪಿಎಲ್ 2010-2024: 148 ಪಂದ್ಯ, 144 ವಿಕೆಟ್
ಸಂದೀಪ್ ಶರ್ಮಾ (ಕೆಎಕ್ಸ್‌ಐಪಿ, ಪಿಬಿಕೆಎಸ್, ಆರ್‌ಆರ್, ಎಸ್‌ಆರ್‌ಹೆಚ್) ಐಪಿಎಲ್ 2013-2024: 127 ಪಂದ್ಯ, 137 ವಿಕೆಟ್
ಹರ್ಷಲ್ ಪಟೇಲ್ (ಡಿಸಿ, ಪಿಬಿಕೆಎಸ್, ಆರ್‌ಸಿಬಿ) ಐಪಿಎಲ್ 2012-2024: 106 ಪಂದ್ಯ, 135 ವಿಕೆಟ್