Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಅಂದು ಟೀಮ್ ಇಂಡಿಯಾ ವೇಗಿ; ಇಂದು ಕೆಕೆಆರ್ ನೆಟ್ ಬೌಲರ್

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)ನಲ್ಲಿ ಹಲವು ಪ್ರತಿಭೆಗಳು ಮಿಂಚಿ ಮರೆಯಾಗಿದ್ದಾರೆ. ಒಂದಷ್ಟು ಆಟಗಾರರಿಗೆ ಪ್ರತಿಭೆಯಿದ್ದರೂ ಅದೃಷ್ಟ ಕೈ ಹಿಡಿದಿಲ್ಲ. ಹೀಗಾಗಿ ಐಪಿಎಲ್‌ನಲ್ಲಿ ಆಡಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ಈ ಪಟ್ಟಿಗೆ ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಕೂಡ ಸೇರಿದ್ದಾರೆ. ದುಬೈನಲ್ಲಿ ನಡೆದ ಐಪಿಎಲ್ 2025ರ ಹರಾಜಿನಲ್ಲಿ ಈ ವೇಗದ ಬೌಲರ್‌ಗೆ ಯಾವ ಫ್ರಾಂಚೈಸಿಯೂ ಮಣೆ ಹಾಕಿಲ್ಲ.

ಐಪಿಎಲ್‌ನಲ್ಲಿ ಅಂದು ತನ್ನ ವೇಗದ ಬೌಲಿಂಗ್‌ನಿಂದಲ್ಲೂ ಭಾರೀ ಸದ್ದು ಮಾಡಿದ್ದ ಈ ವೇಗದ ಬೌಲರ್ ಬೇರೆ ಯಾರು ಅಲ್ಲ, ಚೇತನ್ ಸಕಾರಿಯಾ. ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಚೇತನ್ ಸಕಾರಿಯಾ ಅವರನ್ನು ಬಿಡ್ ಮಾಡಲು ಯಾವ ಫ್ರಾಂಚೈಸಿಯೂ ಮುಂದೆ ಬರಲಿಲ್ಲ. ಹೀಗಾಗಿ ಅವರು ಮಾರಾಟವಾಗದೆ ಉಳಿದಿದ್ದಾರೆ. ಆದರೂ ಈ ಬಾರಿ ಐಪಿಎಲ್ 2025ರಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

IPL 2025 Chetan Sakaria net bowler for Kolkata Knight Riders

ಐಪಿಎಲ್ 2025ರಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಪರ ನೆಟ್ ಬೌಲರ್ ಆಗಿ ಚೇತನ್ ಸಕಾರಿಯಾ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ 2024ರಲ್ಲಿ ಸಕಾರಿಯಾ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. ಇದಾದ ನಂತರ ಅವರನ್ನು ಕೆಕೆಆರ್ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಉಳಿಸಿಕೊಳ್ಳಿಲ್ಲ.

ಐಪಿಎಲ್ 2025ರಲ್ಲಿ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಚೇತನ್ ಸಕಾರಿಯಾ ಕೆಕೆಆರ್ ತಂಡಕ್ಕೆ ನೆಟ್ ಬೌಲರ್ ಆಗಿದ್ದಾರೆ. ಇತ್ತೀಚೆಗೆ ಮಣಿಕಟ್ಟಿನ ಗಾಯದಿಂದ ಬಳಲುತ್ತಿದ್ದ ಚೇತನ್ ಸಕಾರಿಯಾ ಚೇತರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಟಿ20 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಕೆಕೆಆರ್ ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಗಮನ ಸೆಳೆದಿದ್ದಾರೆ. ಹೀಗಾಗಿ ಅವರನ್ನು ಕೆಕೆಆರ್ ನೆಟ್ ಬೌಲರ್ ಆಗಿ ಸೇರಿಸಿಕೊಳ್ಳಲಾಗಿದೆ.

ಚೇತನ್ ಸಕಾರಿಯಾ ಟೀಮ್ ಇಂಡಿಯಾ ಪರ ಕೇವಲ ಮೂರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಸಕಾರಿಯಾ 2021ರಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಪಾದರ್ಪಣೆ ಮಾಡಿದ್ದರು. ಎರಡು ಟಿ20 ಮತ್ತು ಒಂದು ಏಕದಿನ ಪಂದ್ಯಗಳನ್ನು ಸಕಾರಿಯಾ ಆಡಿದ್ದಾರೆ. ಐಪಿಎಲ್‌ನಲ್ಲಿ ಸಕಾರಿಯಾ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಕೆಕೆಆರ್ ಪರ ಆಡಿದ್ದಾರೆ. ಐಪಿಎಲ್ 2021ರಲ್ಲಿ ಸಕಾರಿಯಾ ರಾಜಸ್ಥಾನ ರಾಯಲ್ಸ್ ಪರ 14 ವಿಕೆಟ್ ಕಬಳಿಸಿದ್ದರು. ಇದುವರೆಗೆ ಐಪಿಎಲ್‌ನಲ್ಲಿ 19 ಪಂದ್ಯಗಳನ್ನು ಆಡಿರುವ ಸಕಾರಿಯಾ 20 ವಿಕೆಟ್ ಪಡೆದಿದ್ದಾರೆ.

Story first published: Saturday, March 15, 2025, 15:56 [IST]
Other articles published on Mar 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+