Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 KKR: ಕೆಕೆಆರ್ ತಂಡದಿಂದ ಉಮ್ರಾನ್ ಮಲಿಕ್ ಔಟ್; ನೆಟ್ ಬೌಲರ್‌ಗೆ ಅವಕಾಶ

ಐಪಿಎಲ್ 18ನೇ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಎಲ್ಲಾ 10 ತಂಡಗಳು ಅಭ್ಯಾಸ ಶಿಬಿರಗಳನ್ನು ತೆರೆದಿದ್ದು, ಆಟಗಾರರು ಕೂಡ ಸೇರಿಕೊಳ್ಳುತ್ತಿದ್ದಾರೆ. ಐಪಿಎಲ್ 2025 ರ ಉದ್ಘಾಟನಾ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ನಡೆಯಲಿದೆ. ಆದರೆ ಇದಕ್ಕೂ ಮುನ್ನ ಕೆಕೆಆರ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಬಲಗೈ ವೇಗದ ಬೌಲರ್ ಉಮ್ರಾನ್ ಮಲಿಕ್ ಐಪಿಎಲ್ 2025ರಿಂದ ಹೊರಗುಳಿದಿದ್ದಾರೆ.

ಐಪಿಎಲ್ 2025 ರ ಕೆಕೆಆರ್ ತಂಡದಿಂದ ಗಾಯಗೊಂಡು ಉಮ್ರಾನ್ ಮಲಿಕ್ ಹೊರಬಿದ್ದಿದ್ದು, ಅಜಿಂಕ್ಯ ರಹಾನೆ ನೇತೃತ್ವದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬದಲಿಗೆ ವೇಗದ ಬೌಲರ್ ಸೇರಿಕೊಂಡಿದ್ದಾರೆ. ಈ ಬದಲಿಗೆ ವೇಗದ ಬೌಲರ್ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದರು. ಬಳಿಕೆ ಕೆಕೆಆರ್ ತಂಡದ ನೆಟ್ ಬೌಲರ್ ಆಗಿದ್ದರು. ಈಗ ನೆಟ್ ಬೌಲರ್‌ಗೆ ತಂಡದ ಒಳಗೆ ಆಡುವ ಅವಕಾಶ ಸಿಕ್ಕಿದೆ.

IPL 2025 Chetan Sakaria replaces Umran Malik who was dropped from Kolkata Knight Riders

ಉಮ್ರಾನ್ ಮಲಿಕ್ ಬದಲಿಗೆ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಎಡಗೈ ವೇಗಿ ಚೇತನ್ ಸಕಾರಿಯಾ ಕೆಕೆಆರ್ ತಂಡವನ್ನು ಸೇರಿದ್ದಾರೆ.ಸಕರಿಯಾ 75 ಲಕ್ಷ ರೂ.ಗೆ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ. ಉಮ್ರಾನ್ ಮಲಿಕ್ ಅವರನ್ನೂ ಮೆಗಾ ಹರಾಜಿನಲ್ಲಿ ಕೆಕೆಆರ್ 75 ಲಕ್ಷ ರೂ.ಗೆ ಬಿಡ್ ಮಾಡಿತ್ತು.

ಚೇತನ್ ಸಕರಿಯಾ ಭಾರತ ತಂಡದ ಪರ ಒಂದು ಏಕದಿನ ಮತ್ತು ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿಯೂ 19 ಪಂದ್ಯಗಳಲ್ಲಿ ವಿವಿಧ ಫ್ರಾಂಚೈಸಿಗಳ ಪರ ಕಾಣಿಸಿಕೊಂಡಿದ್ದು, 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್‌ನಲ್ಲಿ ಸಕಾರಿಯಾ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಕೆಕೆಆರ್ ಪರ ಆಡಿದ್ದಾರೆ. ಐಪಿಎಲ್ 2021ರಲ್ಲಿ ಸಕಾರಿಯಾ ರಾಜಸ್ಥಾನ ರಾಯಲ್ಸ್ ಪರ 14 ವಿಕೆಟ್ ಕಬಳಿಸಿದ್ದರು.

ಮತ್ತೊಂದೆಡೆ, ದೇಶೀಯ ಕ್ರಿಕೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡುವ ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವ ಮೂಲಕ ಅವರು ಟೀಮ್ ಇಂಡಿಯಾಗೂ ಆಡುವ ಅವಕಾಶವನ್ನು ಪಡೆದಿದ್ದಾರೆ.

ಕೆಕೆಆರ್ ತಂಡ: ರಿಂಕು ಸಿಂಗ್, ರೋವ್ಮನ್ ಪೊವೆಲ್, ಅಂಗ್ಕ್ರಿಶ್ ರಘುವಂಶಿ, ಮನೀಶ್ ಪಾಂಡೆ, ಲವನಿತ್ ಸಿಸೋಡಿಯಾ, ಅಜಿಂಕ್ಯ ರಹಾನೆ (ನಾಯಕ), ಕ್ವಿಂಟನ್ ಡಿ ಕಾಕ್, ರಹಮಾನಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ಮೊಯೀನ್ ಅಲಿ, ವರುಣ್ ಚಕ್ರವರ್ತಿ, ಮಯಾಂಕ್ ಮಾರ್ಕಂಡೆ, ಹರ್ಷಿತ್ ರಾಣಾ, ವೈಭವ್ ಅರೋರಾ, ಅನ್ರಿಚ್ ನಾರ್ಟ್ಜೆ, ಸ್ಪೆನ್ಸರ್ ಜಾನ್ಸನ್, ಚೇತನ್ ಸಕರಿಯಾ

Story first published: Monday, March 17, 2025, 12:48 [IST]
Other articles published on Mar 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+