For Quick Alerts
ALLOW NOTIFICATIONS  
For Daily Alerts
 

IPL 2025: ದೇಶೀಯ ಕೋಚ್‌ಗೆ ಮಣೆ ಹಾಕಿ ಟ್ರೋಫಿ ಗೆಲ್ಲುತ್ತಾ ಆರ್‌ಸಿಬಿ?

ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಟೂರ್ನಿಗೆ ಎಲ್ಲಾ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿಗಳನ್ನು ಆರಂಭಿಸಿವೆ. ಐಪಿಎಲ್ ಫ್ರಾಂಚೈಸಿ ತಂಡಗಳು ಉಳಿಸಿಕೊಳ್ಳುವ ಮತ್ತು ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಆಕ್ಟೋಬರ್ 31 ರಂದು ಸಲ್ಲಿಸಲುವಂತೆ ಬಿಸಿಸಿಐ ಗಡುವು ನೀಡಿದೆ.

ಐಪಿಎಲ್ 2025ರ ಟೂರ್ನಿಗಾಗಿ ಬಲಿಷ್ಠ ತಂಡ ಕಟ್ಟಲು ತೆರೆ ಮರೆಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಕಾರ್ಯಗಳು ಗರಿಗೆದರಿವೆ. ಆರ್‌ಸಿಬಿ ಹೊಸ ನಾಯಕನ ಹುಡುಕಾಟದಲ್ಲಿದ್ದು, ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಮೇಲೆ ಕಣ್ಣಿಟ್ಟಿದೆ ಎಂದು ವರದಿಗಳು ತಿಳಿಸಿವೆ. ಇದರ ಮಧ್ಯೆ ಆರ್‌ಸಿಬಿ ದೇಶೀಯ ಕೋಚ್ ನೇಮಕವಾಗಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

IPL 2025 Could an Indian Coach Lead RCB to Winning the IPL 2025 Trophy

ಐಪಿಎಲ್ ಇತಿಹಾಸದಲ್ಲಿ ದೇಶೀಯ ಕೋಚ್‌ಗಳ ಪಾತ್ರ ಪ್ರಮುಖವಾಗಿದೆ. ಪ್ರತಿಯೊಂದು ಯಶಸ್ವಿ ತಂಡದ ಹಿಂದೆ ದೇಶೀಯ ಕೋಚ್‌ಗಳ ತಂತ್ರಗಾರಿಕೆ ಕಾಣಿಸುತ್ತಿದೆ. ಆದ್ದರಿಂದ, ಆರ್‌ಸಿಬಿಗೆ ದೇಶೀಯ ಕೋಚ್‌ ಅವಶ್ಯಕತೆಯಿದೆ. ಒಂದು ಬಾರಿಯೂ ಐಪಿಎಲ್ ಪ್ರಶಸ್ತಿ ಗೆಲ್ಲದ ಆರ್‌ಸಿಬಿ ದೇಶೀಯ ಕೋಚ್‌ ಅನ್ನು ನೇಮಕ ಮಾಡಿಕೊಂಡರೆ ಚಾಂಪಿಯನ್ ಪಟ್ಟಕ್ಕೇರುತ್ತಾ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇಶೀಯ ಕೋಚ್‌ಗೆ ಮಣೆ?

ಆರ್‌ಸಿಬಿ ಇದುವರಗೆ ಯಾವುದೇ ದೇಶೀಯ ಹೆಡ್‌ ಕೋಚ್‌ಗಳನ್ನು ಹೊಂದಿಲ್ಲ. ಆದರೆ ಕೋಚಿಂಗ್ ಸ್ಟಾಫ್‌ನಲ್ಲಿ ದೇಶೀಯ ಕೋಚ್‌ ಅನ್ನು ಹೊಂದಿದೆ. ಭಾರತದ ಮಾಜಿ ಆಲ್‌ರೌಂಡರ್ ಶ್ರೀಧರನ್ ಶ್ರೀರಾಮ್ ಅವರು 2019 ರಿಂದ ಆರ್‌ಸಿಬಿಯ ಬ್ಯಾಟಿಂಗ್ ಮತ್ತು ಸ್ಪಿನ್-ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರಲ್ಲದೆ, ಆರ್‌ಸಿಬಿ ಫೀಲ್ಡಿಂಗ್ ಕೋಚ್ ಆಗಿ ಮಲೋಲನ್ ರಂಗರಾಜನ್ ಅವರನ್ನು ಹೊಂದಿದೆ. ಇದರೊಂದಿಗೆ ದೇಶೀಯ ಹೆಡ್‌ ಕೋಚ್ ಅನ್ನು ಆರ್‌ಸಿಬಿ ನೇಮಿಸಿಕೊಂಡರೆ ತಂಡ ಚಾಂಪಿಯನ್ ಪಕ್ಕ ಎನ್ನುತ್ತಿದ್ದಾರೆ ಅಭಿಮಾನಿಗಳು.

ಐಪಿಎಲ್ 2025ರ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ದೇಶೀಯ ಕೋಚ್‌ಗಳಿಗೆ ಮಣೆ ಹಾಕಬೇಕು ಎಂಬ ಕೂಗು ಕೇಳಿ ಬರುತ್ತಿದೆ. ದೇಶೀಯ ಕೋಚ್‌ ಸೇರ್ಪಡೆಯಿಂದ ಆರ್‌ಸಿಬಿ ಇನ್ನಷ್ಟು ಬಲಿಷ್ಠವಾಗಲಿದೆ. ಭಾರತದಲ್ಲಿ ಐಪಿಎಲ್ ನಡೆಯುವುದರಿಂದ ಇಲ್ಲಿನ ಪಿಚ್‌ಗಳ ಸಂಪೂರ್ಣ ಮಾಹಿತಿ ದೇಶೀಯ ಕೋಚ್‌ಗಳಿಗೆ ಇರುತ್ತದೆ. ಜೊತೆಗೆ ದೇಶೀಯ ಕ್ರಿಕೆಟ್‌ನಲ್ಲಿರುವ ಅದ್ಭುತ ಪ್ರತಿಭೆಗಳ ಬಗ್ಗೆಯೂ ಅವರಿಗೆ ತಿಳಿದಿದೆ.

ಅಂತಹ ದೇಶೀಯ ಕೋಚ್‌ಗಳಿಗೆ ಆರ್‌ಸಿಬಿ ಮಣೆ ಹಾಕುವುದರಿಂದ ತಂಡದ ಸಂಯೋಜನೆ ಸಮತೋಲನದ ಮೇಲೆ ಎಚ್ಚರಿಕೆ ವಹಿಸಲಿದ್ದಾರೆ. ಜೊತೆಗೆ ತಂಡದಿಂದ ನಿರೀಕ್ಷಿತ ಅದ್ಭುತ ಪ್ರದರ್ಶನ ಬರಲಿದೆ. ಅಲ್ಲದೆ, ಸ್ಥಳೀಯ ಯುವ ಆಟಗಾರರ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಕ ತಂಡವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಬಹುದು.

ಹೀಗಾಗಿ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ಆರ್‌ಸಿಬಿ ದೇಶೀಯ ಕೋಚ್‌ ಮೋರೆ ಹೋಗುವುದು ಉತ್ತಮ. ಈ ನಿಟ್ಟಿನಲ್ಲಿ ಆರ್‌ಸಿಬಿ ಅಭಿಮಾನಿಗಳು ದೇಶೀಯ ಕೋಚ್‌ಗಳನ್ನು ತಂಡಕ್ಕೆ ಕರೆತರುವಂತೆ ಫ್ರಾಂಚೈಸಿಗೆ ಒತ್ತಾಯಿಸುತ್ತಿದ್ದಾರೆ.

ಪ್ರಸ್ತುತ ಆರ್‌ಸಿಬಿ ಜವಾಬ್ದಾರಿಯನ್ನು ಜಿಂಬಾಬ್ವೆ ಕ್ರಿಕೆಟಿಗ ಮತ್ತು ಇಂಗ್ಲೆಂಡ್‌ನ ಮಾಜಿ ಹೆಡ್‌ ಕೋಚ್ ಆಂಡಿ ಫ್ಲವರ್ ಅವರು ಹೊತ್ತಿಕೊಂಡಿದ್ದಾರೆ. ಕಳೆದ ವರ್ಷ ಐಪಿಎಲ್ 2024ರಲ್ಲಿ ಆಂಡಿ ಫ್ಲವರ್ ಆರ್‌ಸಿಬಿಗೆ ಹೆಡ್‌ ಕೋಚ್‌ ಆಗಿ ನೇಮಕಗೊಂಡಿದ್ದರು.

ಅದಕ್ಕೂ ಮೊದಲು ಅವರು ಲಕ್ನೋ ಸೂಪರ್ ಜೈಂಟ್ಸ್‌ಗೆ ಎರಡು ಆವೃತ್ತಿಗಳಲ್ಲಿ ಹೆಡ್ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಲಕ್ನೋ ತಂಡ ಪ್ಲೇ-ಆಫ್‌ಗೆ ಪ್ರವೇಶ ಪಡೆದಿತ್ತು. ಕಳೆದ ಬಾರಿಯೂ ಆರ್‌ಸಿಬಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿತ್ತು. ಆದರೂ ಆರ್‌ಸಿಬಿಗೆ ದೇಶೀಯ ಕೋಚ್ ಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

Story first published: Monday, October 28, 2024, 16:30 [IST]
Other articles published on Oct 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+