IPL 2025: ಕೋಟಿ ಕೋಟಿ ರೂ. ಪಡೆದು ಬೆಂಚ್ ಕಾಯುತ್ತಿರುವ ಸ್ಟಾರ್ ಪ್ಲೇಯರ್ಸ್
ಐಪಿಎಲ್ ಈಗ ದಿನ ಕಳೆದಂತೆ ದೇಶದಲ್ಲಿ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಎಲ್ಲ ತಂಡಗಳು ಈಗ ಕನಿಷ್ಠ 5 ಪಂದ್ಯಗಳನ್ನು ಆಡಿವೆ. ಈ ಹಂತದಲ್ಲಿ ಹಲವು ತಂಡಗಳು ತಮ್ಮ ತಂಡದಲ್ಲಿ ಬದಲಾವಣೆ ಮಾಡುತ್ತಿವೆ. ಆದರೆ ಇನ್ನು ಹಲವು ತಂಡಗಳು ಗೆಲುವಿನ ತಂಡವನ್ನೇ ಮುನ್ನಡೆಸುತ್ತಿವೆ. ಆದರೆ ಹಲವು ತಂಡಗಳು ಕೋಟಿ ಕೋಟಿ ಹಣವನ್ನು ಸುರಿದು ಹರಾಜಿನಲ್ಲಿ ಪಡೆದ ಆಟಗಾರರನ್ನು ಇನ್ನು ಅಂಗಳಕ್ಕೆ ಇಳಿಸಿಲ್ಲ. ಈ ಬಗ್ಗೆ ವರದಿ ಇಲ್ಲಿದೆ.
ಈ ಪಟ್ಟಿಯಲ್ಲಿ ಎದ್ದು ಕಾಣುವ ಆಟಗಾರರಲ್ಲಿ ಎದ್ದು ಕಾಣುವರು ಮುಂಬೈ ತಂಡವನ್ನು ಸೇರಿರುವ ಅಲ್ಲಾ ಗಜನ್‌ಫರ್. ಇವರನ್ನು ಮುಂಬೈ ಹರಾಜಿನಲ್ಲಿ 4.80 ಕೋಟಿ ನೀಡಿ ಖರೀದಿಸಿತು. ಅಫ್ಘಾನಿಸ್ತಾನದ ತಂಡದ ಸ್ಟಾರ್ ಆಟಗಾರನನ್ನು ಮುಂಬೈ ಖರೀದಿಸಿತು. ಇವರ ಮೂಲ ಬೆಲೆ 75 ಲಕ್ಷ ಇತ್ತು. ಇವರ ಮೂಲ ಬೆಲೆಗಿಂತ ಹೆಚ್ಚಿನ ಹಣವನ್ನು ನೀಡಿತ್ತು. 19 ವರ್ಷದ ಯುವ ಆಟಗಾರ ಬಲಗೈ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವ ಕಲೆಯನ್ನು ಹೊಂದಿದ್ದಾರೆ.

ನಾಲ್ಕು ಆರ್‌ಸಿಬಿ ಆಟಗಾರರು ಬೆಂಚ್ ಮೇಲೆ
ಇನ್ನು ಆರ್‌ಸಿಬಿ ತಂಡ ಕೋಟಿ ಕೋಟಿ ಕೊಟ್ಟು ತಂಡಕ್ಕೆ ಬರಮಾಡಿಕೊಂಡು ಬೆಂಚ್ ಕಾಯಿಸುತ್ತಿರುವ ಆಟಗಾರರ ಪಟ್ಟಿಯೂ ದೊಡ್ಡದಿದೆ. ಈ ಪಟ್ಟಿಯಲ್ಲಿ ಎದ್ದು ಕಾಣುವ ಆಟಗಾರ ಇಂಗ್ಲೆಂಡ್ ತಂಡದ ಜಾಕಬ್ ಬೆತೆಲ್. ಇವರ ಮೂಲ ಬೆಲೆಗಿಂತ ಹೆಚ್ಚಿನ ಹಣ ನೀಡಿದ್ದ ಆರ್‌ಸಿಬಿ ಇವರಿಗೆ ಮಣೆ ಹಾಕಿತ್ತು. ಬೆತೆಲ್ 2.60 ಕೋಟಿ ಪಡೆದರೂ ಇನ್ನು ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಈ ಯುವ ಆಟಗಾರ ಮೊದಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಉಳಿದಂತೆ ಶ್ರೀಲಂಕಾ ತಂಡದ ನುವಾನ್ ತುಷಾರ ಅವರಿಗೆ ಆರ್‌ಸಿಬಿ 1.60 ಕೋಟಿ ನೀಡಿದರೆ, ವೆಸ್ಟ್ ಇಂಡೀಸ್ ತಂಡದ ರೊಮಾರಿಯೋ ಶೆಫರ್ಡ್ 1.50 ಕೋಟಿ ನೀಡಿದರೆ, ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿಡಿ ಸಹ ಇನ್ನು ಬೆಂಚ್ ಮೇಲೆ ಕುಳಿತಿದ್ದಾರೆ.
ಐಪಿಎಲ್‌ನಲ್ಲಿ ಅಪಾರ ಅನುಭವ ಹೊಂದಿರುವ ರಾಹುಲ್ ಚಹಾರ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಕೋಟಿ ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಇವರನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ರಾಹುಲ್ ಚಹಾರ್ ಐಪಿಎಲ್‌ನಲ್ಲಿ 78 ಪಂದ್ಯಗಳನ್ನು ಆಡಿದ್ದು, 75 ವಿಕೆಟ್ ಕಬಳಿಸಿದ್ದಾರೆ. ಇವರು ಇನ್ನು ಮೊದಲ ಪಂದ್ಯವನ್ನು ಆಡಲು ಎದುರು ನೋಡ್ತಾ ಇದ್ದಾರೆ.

ಐಪಿಎಲ್ ತಂಡಗಳಲ್ಲಿ ಕೋಟಿ ಪಡೆದು ಬೆಂಚ್ ಕಾಯುತ್ತಿರುವ ಪ್ಲೇಯರ್ಸ್
ಜೋಶ್ ಇಂಗ್ಲಿಸ್ (ಪಂಜಾಬ್ ಕಿಂಗ್ಸ್), 2.60 ಕೋಟಿ ರೂ.
ಜೆರಾಲ್ಡ್ ಕೋಟ್ಜಿ (ಗುಜರಾಟ್ ಜೈಂಟ್ಸ್) 2.40 ಕೋಟಿ ರೂ.
ಗುರ್ಜಪ್ನೀತ್ ಸಿಂಗ್ (ಸಿಎಸ್‌ಕೆ), 2.20 ಕೋಟಿ ರೂ.
ಗ್ಲೆನ್ ಫಿಲಿಪ್ಸ್ (ಗುಜರಾತ್ ಟೈಟನ್ಸ್) 2.00 ಕೋಟಿ ರೂ.
ರಹಮಾನುಲ್ಲಾ ಗುರ್ಬಾಜ್ (ಕೆಕೆಆರ್) 2.00 ಕೋಟಿ ರೂ.
ಹರ್‌ಪ್ರೀತ್ ಬ್ರಾರ್(ಪಂಜಾಬ್ ಕಿಂಗ್ಸ್) 1.50 ಕೋಟಿ ರೂ.
ರೋವ್ಮನ್ ಪೊವೆಲ್ (ಕೆಕೆಆರ್) 1.50 ಕೋಟಿ ರೂ.
ಕ್ವೇನಾ ಮಾಫಕ (ರಾಜಸ್ಥಾನ ರಾಯಲ್ಸ್), 1.50 ಕೋಟಿ ರೂ.
ಆರನ್ ಹಾರ್ಡಿ (ಪಂಜಾಬ್ ಕಿಂಗ್ಸ್) 1.50 ಕೋಟಿ ರೂ.
ಕ್ವೆನಾ ಮಫಕಾ (ರಾಜಸ್ಥಾನ ರಾಯಲ್ಸ್) 1.50 ಕೋಟಿ ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications