IPL 2025: ಮುಂದಿನ ಮೂರು ವರ್ಷಗಳ ಐಪಿಎಲ್ ವೇಳಾ ಪಟ್ಟಿ ಬಿಡುಗಡೆ: 2025ರಂದು ಈ ದಿನ ಆರಂಭ
ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು ನಡೆಯಲಿದೆ. ಈ ಹರಾಜಿಗಾಗಿ ತಂಡಗಳು ಭರದ ಸಿದ್ದತೆಯನ್ನು ನಡೆಸಿವೆ. ಇದಕ್ಕೂ ಮೊದಲು ಬಂದಿರುವ ಸುದ್ಧಿ ನಿಜಕ್ಕೂ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮಾಧ್ಯಮದ ವರದಿ ಪ್ರಕಾರ, ಮುಂದಿನ ಮೂರು ಸೀಸನ್‌ಗಳ ದಿನಾಂಕಗಳನ್ನು ಬಹಿರಂಗಪಡಿಸಲಾಗಿದೆ. ಈ ಬಾರಿಯ ಐಪಿಎಲ್ ವೇಳಾ ಪಟ್ಟಿಯ ಜೊತೆಗೆ ಮುಂದಿನ ಆವೃತ್ತಿಗಳ ದಿನಾಂಕಗಳು ಸಹ ಹೊರ ಬಿದ್ದಿವೆ.
ಈ ಬಾರಿಯ ಐಪಿಎಲ್ ಪಂದ್ಯಗಳು ಮಾರ್ಚ್ 14 ರಿಂದ ಮೇ 25 ರವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ. 19ನೇ ಆವೃತ್ತಿಯ ಐಪಿಎಲ್ ಮಾರ್ಚ್ 15 ರಂದು ಪ್ರಾರಂಭವಾಗಿ ಮತ್ತು ಪ್ರಶಸ್ತಿ ಸುತ್ತಿನ ಕಾದಾಟ ಮೇ 31 ರಂದು ನಡೆಯಲಿದೆ. ಐಪಿಎಲ್ 2027 ರಂದು ಮಾರ್ಚ್ 14 ರಂದು ಆರಂಭವಾಗಿ, ಮೇ 30 ರವರೆಗೆ ನಡೆಯಲಿದೆ.

ಐಪಿಎಲ್ ವೇಳಾ ಪಟ್ಟಿ
ಮುಂದಿನ ಮೂರು ವರ್ಷಗಳ ವೇಳಾ ಪಟ್ಟಿಯ ಬಗ್ಗೆ ಎಲ್ಲ ಫ್ರಾಂಚೈಸಿಗಳಿಗೆ ಇ-ಮೇಲ್ ಮೂಲಕ ತಿಳಿಸಲಾಗಿದೆ ಎಂದು ಇಎಸ್‌ಪಿನ್ ಕ್ರಿಕ್‌ಇನ್ಫೋ ವರದಿ ಮಾಡಿದೆ. ಶೀಘ್ರದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವ ನಿರೀಕ್ಷೆ ಇದೆ. ಕಳೆದ ಕೆಲವು ಆವೃತ್ತಿಗಳಂತೆ 18ನೇ ಆವೃತ್ತಿಯ ಐಪಿಎಲ್‌ನಲ್ಲಿ 74 ಪಂದ್ಯಗಳು ನಡೆಯಲಿವೆ. ಇನ್ನು 19ನೇ ಆವೃತ್ತಿಯ ಪಂದ್ಯಗಳ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಈ ಆವೃತ್ತಿಯಲ್ಲಿ 84 ಪಂದ್ಯಗಳು ನಡೆಯುವ ಸಾಧ್ಯತೆ ಇದೆ.
ಐಪಿಎಲ್ 2027ರ ಆವೃತ್ತಿಯಲ್ಲಿ ನಿಶ್ಚಿತವಾಗಿ ಪಂದ್ಯಗಳ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು. ಈ ಆವೃತ್ತಿಯಲ್ಲಿ ಪಂದ್ಯಗಳ ಸಂಖ್ಯೆ 94ಕ್ಕೆ ಹೆಚ್ಚಿಸಬಹುದು. ಪಂದ್ಯಗಳ ಸಂಖ್ಯೆ ಹೆಚ್ಚಾಗಲು ಮಾಧ್ಯಮ ಹಕ್ಕುಗಳು ಕಾರಣ ಎಂದು ತಿಳಿದು ಬಂದಿದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೆಕೆಆರ್ ಫೈನಲ್ ಪಂದ್ಯದಲ್ಲಿ, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
ವಿದೇಶಿ ಆಟಗಾರರ ಒಪ್ಪಿಗೆ
ಐಪಿಎಲ್ ಮುಂದಿನ ಮೂರು ಸೀಸನ್‌ಗಳಿಗೆ ವಿದೇಶಿ ಅಟಗಾರರು ತಾವುಗಳು ಉಪಲಬ್ಧರಿರುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಈ ಲೀಗ್‌ನಲ್ಲಿ ಆಡಲು ವಿದೇಶಿ ಆಟಗಾರರು ತಮ್ಮ ತಮ್ಮ ಕ್ರಿಕೆಟ್ ಮಂಡಳಿಯಿಂದ ಅನುಮತಿ ಪಡೆದಿದ್ದಾರೆ. ಐಪಿಎಲ್ 2025ರಲ್ಲಿ ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ದೇಶೀಯ ಹಾಗೂ ರಾಷ್ಟ್ರೀಯ ತಂಡದ ಆಟಗಾರರಿಗೆ ಅನುಮತಿ ನೀಡಿದೆ. 2027ರಲ್ಲಿ ಟೆಸ್ಟ್ ಕ್ರಿಕೆಟ್ ಆರಂಭವಾಗಿ 150 ವರ್ಷ ಸಂದಿದ ಸವಿ ನೆನಪಿನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಆಟಗಾರರು ಮಾರ್ಚ್‌ನಲ್ಲಿ ಏಕೈಕ ಟೆಸ್ಟ್ ಆಡಲಿದ್ದಾರೆ. ಆ ಬಳಿಕ ಉಭಯ ತಂಡಗಳ ಆಟಗಾರರು ಐಪಿಎಲ್‌ಗೆ ಲಭ್ಯರಿರಲಿದ್ದಾರೆ ಎಂದು ತಿಳಿದು ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications