For Quick Alerts
ALLOW NOTIFICATIONS  
For Daily Alerts
 

T Natarajan: ಟಿ ನಟರಾಜನ್‌ ಆಡಿಸದಿರಲು ಅಸಲಿ ಕಾರಣ ಬಿಚ್ಚಿಟ್ಟ ಡೆಲ್ಲಿ ಮೆಂಟರ್

ಎಡಗೈ ವೇಗದ ಬೌಲರ್ ಟಿ ನಟರಾಜನ್ ಅವರಿಗೆ ಐಪಿಎಲ್ 2025 ರಲ್ಲಿ ಆಡುಲು ಇನ್ನೂ ಅವಕಾಶ ಸಿಕ್ಕಿಲ್ಲ. ಕಳೆದ ವರ್ಷ ನಡೆದ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಟರಾಜನ್ ಅವರನ್ನು 10 ಕೋಟಿ ರೂ.ಗೂ ಹೆಚ್ಚು ಬೆಲೆಗೆ ಬಿಡ್ ಮಾಡಿತು. ಆರಂಭದಿಂದಲೂ ನಟರಾಜನ್ ಅವರಿಗೆ ಆಡಲು ಅವಲಾಶ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಆಗಲಿಲ್ಲ. ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ಪಂದ್ಯಗಳನ್ನು ಆಡಿದೆ. ಆದರೆ ಇನ್ನೂ ನಟರಾಜನ್ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ.

ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡಿತು. ಈ ಸೋಲಿನ ನಂತರ ನಟರಾಜನ್ ಆಡುವ ಬಗ್ಗೆ ಡೆಲ್ಲಿ ಮೆಂಟರ್ ಕೆವಿನ್ ಪೀಟರ್ಸಮ್ ಅವರನ್ನು ಕೇಳಲಾಯಿತು. ಈ ವೇಳೆ ಅವರು ಸ್ವಲ್ಪ ಕೋಪದಿಂದ ಉತ್ತರಿಸಿದರು.

IPL 2025 Delhi Capitals mentor reveals the real reason behind T Natarajan not playing

ಐಪಿಎಲ್ 2025 ರ ಮೆಗಾ ಹರಾಜಿಗೂ ಮುನ್ನ ಟಿ ನಟರಾಜನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಬಿಡುಗಡೆ ಮಾಡಿತು. ಅವರು ಐಪಿಎಲ್ 2024 ರಲ್ಲಿ ಹೈದರಾಬಾದ್ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದರು. ಐಪಿಎಲ್ 2024 ರಲ್ಲಿ ನಟರಾಜನ್ ಒಟ್ಟು 19 ವಿಕೆಟ್ ಪಡೆದಿದ್ದರು. ಆದರೂ ಕಾವ್ಯ ಮಾರನ್ ಒಡೆತನದ ಹೈದರಾಬಾದ್ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿರಲಿಲ್ಲ. ಇದಾದ ನಂತರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಟರಾಜನ್ ಅವರನ್ನು 10.75 ಕೋಟಿ ರೂ.ಗೆ ತಂಡ ಸೇರಿಸಿಕೊಂಡಿತು. ಆದರೆ ಈ ವೇಗದ ಬೌಲರ್ ಇಲ್ಲುವರೆ ಕೇವಲ ಬೆಂಚ್ ಕಾಯುವುದಕ್ಕಷ್ಟೇ ಸೀಮಿತವಾಗಿದ್ದಾರೆ.

ಡೆಲ್ಲಿ ಮತ್ತು ಬೆಂಗಳೂರು ಪಂದ್ಯದ ಬಳಿಕ ಮೆಂಟರ್ ಕೆವಿನ್ ಪೀಟರ್ಸನ್ ಪತ್ರಿಕಾಗೋಷ್ಠಿಗೆ ಬಂದಿದ್ದರು. ಈ ವೇಳೆ ಪೀಟರ್ಸನ್ ಅವರಿಗೆ ಪತ್ರಕರ್ತರೊಬ್ಬರು ಟಿ ನಟರಾಜನ್ ಅವರನ್ನು ಇಲ್ಲಿವರೆಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಂಡಿಲ್ಲ ಏಕೆ? ಎಂದು ಕೇಳಿದರು. ಇದಕ್ಕೆ ಉತ್ತರಿಸುವಾಗ ಪೀಟರ್ಸನ್ ಕೋಪಗೊಂಡರು.

ನಾವು ಇಂಪ್ಯಾಕ್ಟ್ ಆಟಗಾರನನ್ನು ಒಳಗೊಂಡಂತೆ 12 ಆಟಗಾರರನ್ನು ಮಾತ್ರ ಆಡಿಸಬಹುದು. ಈ ಸಮಯದಲ್ಲಿ ಅವರು ಎಲ್ಲಿ ಹೊಂದಿಕೊಳ್ಳುತ್ತಾರೆಂದು ನೀವು ನನಗೆ ಹೇಳಿದರೆ, ನೀವು ನಮಗೆ ಸಹಾಯ ಮಾಡಿದಂತಾಗುತ್ತದೆ. 13 ರಿಂದ 14 ಆಟಗಾರರನ್ನು ಆಡಿಸುವ ಮಾರ್ಗವನ್ನು ನೀವು ನಮಗೆ ಹೇಳಿದರೆ, ಅದು ನಮಗೆ ಸಹಾಯ ಮಾಡುತ್ತದೆ. ನಟರಾಜನ್ ಬಗ್ಗೆ ನಾನು ಹೇಳಬಹುದಾದ ಒಂದು ವಿಷಯವೆಂದರೆ, ನಮ್ಮ ಎಲ್ಲಾ ಆಟಗಾರರು ಮಾಡುತ್ತಿರುವಂತೆ, ಅವರು ತಮಗೆ ಕೇಳಲಾದ ಎಲ್ಲವನ್ನೂ ಮಾಡುತ್ತಿದ್ದಾರೆ. ನಮ್ಮ ಸೆಟಪ್‌ನಲ್ಲಿ ಆಡದ ಆಟಗಾರರು ಬಹಳ ಒಳ್ಳೆಯವರು. ಅವರಿಗೆ ಆಡುವ ಅವಕಾಶ ಬಂದೆ ಬರುತ್ತದೆ ಎಂದು ಅವರಿಗೆ ತಿಳಿದಿದೆ ಎಂದು ಪೀಟರ್ಸನ್ ಹೇಳಿದ್ದಾರೆ.

Story first published: Monday, April 28, 2025, 19:00 [IST]
Other articles published on Apr 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+