Parth Jindal: ರಿಷಬ್ ಪಂತ್‌ಗೆ ಭಾವನಾತ್ಮಕ ವಿದಾಯ ಹೇಳಿದ ಜಿಂದಾಲ್; ಪೋಸ್ಟ್ ವೈರಲ್!
ಟೀಮ್ ಇಂಡಿಯಾ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರು ಐಪಿಎಲ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಪರ ಕಣಕ್ಕೀಳಿಯಲಿದ್ದಾರೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯೊಂದಿಗೆ ರಿಷಬ್ ಪಂತ್ ಅವರ ಸುದೀರ್ಘ ಪಯಣ ಅಂತ್ಯಗೊಂಡಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಅವರನ್ನು ದಾಖಲೆ ಬೆಲೆಗೆ ಖರೀದಿಸುವ ಮೂಲಕ ಎಲ್‌ಎಸ್‌ಜಿ ದಾಖಲೆ ಮಾಡಿದೆ. ಪಂತ್ ಅವರಿಗೆ ಎಲ್‌ಎಸ್‌ಜಿ 27 ಕೋಟಿ ರೂ. ಅನ್ನು ನೀಡಿದೆ.
ಎಲ್‌ಎಸ್‌ಜಿ ಪಂತ್ ಅವರಿಗೆ ಗರಿಷ್ಠ 20.75 ಕೋಟಿ ರೂ.ಗೆ ಬಿಡ್ ಮಾಡಿತ್ತು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ನಾಯಕನನ್ನು ಮರಳಿ ಪಡೆಯಲು ಆರ್‌ಟಿಎಂ ಬಳಸಿತು. ಆಗ ಲಕ್ನೋದಿಂದ ಅಂತಿಮ ಬೆಲೆ ಕೇಳಿದಾಗ ಮಾಲೀಕ ಸಂಜೀವ್ ಗೋಯೆಂಕಾ ನೇರವಾಗಿ 27 ಕೋಟಿ ರೂ. ಎಂದು ಹೇಳಿದರು. ಹೀಗಾಗಿ ಡೆಲ್ಲಿ ತನ್ನ ಆರ್‌ಟಿಎಂ ಅನ್ನು ಹಿಂತೆಗೆದುಕೊಂಡಿತು. ಇದರೊಂದಿಗೆ ಪಂತ್ ಡೆಲ್ಲಿ ತಂಡವನ್ನು ತೊರೆದರು. ಇದೀಗ ಪಂತ್ ನಿರ್ಗಮನದ ಬಗ್ಗೆ ಡೆಲ್ಲಿ ತಂಡದ ಸಹ-ಮಾಲೀಕ ಪಾರ್ಥ್ ಜಿಂದಾಲ್ ಭಾವುಕರಾಗಿದ್ದು, ವಿದಾಯ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾರ್ಥ್ ಜಿಂದಾಲ್ ಅವರು, "ದಾದ (ಸೌರವ್ ಗಂಗೂಲಿ) ನಂತರ ನನ್ನ ನೆಚ್ಚಿನ ಕ್ರಿಕೆಟಿಗ ರಿಷಬ್ ಪಂತ್. ಅವನು ನನ್ನ ಹೃದಯದಲ್ಲಿದ್ದಾನೆ. ನಾನು ನಿಜವಾಗಿಯೂ ದುಃಖಿತನಾಗಿದ್ದೇನೆ. ನನ್ನ ನೆಚ್ಚಿನ ಕ್ರಿಕೆಟಿಗನನ್ನು ಕಳೆದುಕೊಂಡೆ. ಅವರು ನನ್ನ ನೆಚ್ಚಿನವರಾಗಿ ಉಳಿಯುತ್ತಾರೆ. ಆದರೆ ಹರಾಜಿನಲ್ಲಿ ದುಬಾರಿ ಬೆಲೆ ಬಿಡ್ ಆದ ನಂತರ ತುಂಬಾ ಸಂತೋಷವಾಗಿದ್ದಾರೆ ಎಂದಿದ್ದಾರೆ.
ಭಾವನಾತ್ಮಕ ಪೋಸ್ಟ್
ಇದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿರುವ ಪಾರ್ಥ್ ಜಿಂದಾಲ್ ಅವರು ರಿಷಬ್ ಪಂತ್ ಅವರನ್ನು ಹೊಗಳಿದ್ದಾರೆ. 'ನೀವು ಯಾವಾಗಲೂ ನನ್ನ ಕಿರಿಯ ಸಹೋದರನಾಗಿರುತ್ತೀರಿ' ನನ್ನ ಹೃದಯದಿಂದ ನಿನ್ನನ್ನು ಪ್ರೀತಿಸುತ್ತೇನೆ. ನಿಮ್ಮನ್ನು ನನ್ನ ಕುಟುಂಬದಂತೆ ಪರಿಗಣಿಸಿದ್ದೇನೆ. ನೀವು ಹೋಗುವುದನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ. ಅದರ ಬಗ್ಗೆ ತುಂಬಾ ಭಾವುಕನಾಗಿದ್ದೇನೆ. ನೀವು ಯಾವಾಗಲೂ ಡೆಲ್ಲಿ ಕ್ಯಾಪಿಟಲ್ಸ್ ಭಾಗವಾಗಿರುತ್ತೀರಾ. ಒಂದು ದಿನ ನಾವು ಮತ್ತೆ ಒಂದಾಗಬಹುದು ಎಂದು ನಾನು ಭಾವಿಸುತ್ತೇನೆ. ಎಲ್ಲದಕ್ಕೂ ಧನ್ಯವಾದಗಳು ರಿಷಬ್. ನಮ್ಮೆಲ್ಲರಿಂದ ನಿಮಗೆ ಶುಭ ಹಾರೈಕೆಗಳು ಎಂದು ಪೋಸ್ಟ್ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications