IPL 2025: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಕ್ತಿ-ದೌರ್ಬಲ್ಯಗಳೇನು?
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಕಹಳೆ ಊದಲು ಕೆಲವೇ ದಿನಗಳು ಬಾಕಿ ಉಳಿದಿವೆ. ಐಪಿಎಲ್ 2025ರ ಟೂರ್ನಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಮೆಗಾ ಟಿ20 ಲೀಗ್‌ಗಾಗಿ ಎಲ್ಲಾ ತಂಡಗಳು ಸಜ್ಜಾಗುತ್ತಿವೆ. ಅದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಲು ಹೊಸ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ.
ಐಪಿಎಲ್ ಇತಿಹಾಸಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಮ್ಮೆಯೂ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಈ ಬಾರಿ ಡೆಲ್ಲಿ ಪರ ಸ್ಟಾರ್ ಆಟಗಾರರ ದಂಡೆ ಆಡಲು ಸಜ್ಜಾಗಿದ್ದಾರೆ.

ಕೆಎಲ್ ರಾಹುಲ್, ಫಾಫ್ ಡು ಪ್ಲೆಸಿಸ್, ಮಿಚೆಲ್ ಸ್ಟಾರ್ಕ್ ಅವರಂತಹ ಸ್ಟಾರ್ ಆಟಗಾರರು ಡೆಲ್ಲಿ ಪರ ಆಡಲಿದ್ದಾರೆ. ಇವರಲ್ಲದೆ, ಅಕ್ಸರ್ ಪಟೇಲ್, ಕುಲದೀಪ್ ಯಾದವ್ ಅವರಂತಹ ಸ್ಟಾರ್ ಆಟಗಾರರು ಕೂಡ ತಂಡದಲ್ಲಿದ್ದಾರೆ. ಈ ಆಟಗಾರರ ಬಲದಿಂದ ಡೆಲ್ಲಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
ಐಪಿಎಲ್ 2025ರ ತಯಾರಿಯಲ್ಲಿರುವ ಎಲ್ಲಾ ತಂಡಗಳು ಈಗಾಗಲೇ ನಾಯಕರ ಹೆಸರುಗಳನ್ನು ಘೋಷಣೆ ಮಾಡಿವೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ನಾಯಕನ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿ ಕೆಲವೇ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಕೆಲವು ಅನುಭವಿ ಕ್ರಿಕೆಟ್ ತಜ್ಞರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ನಾಯಕ, ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, ಡೆಲ್ಲಿ ಫ್ರಾಂಚೈಸಿ ಅಕ್ಸರ್ ಪಟೇಲ್ ಅವರನ್ನು ನಾಯಕನ್ನಾಗಿ ಮಾಡಬೇಕು. ಅವರು ನಾಯಕನಿಗೆ ಉತ್ತಮ ಆಯ್ಕೆ. ಡೆಲ್ಲಿಗೆ ಸ್ವಲ್ಪ ಉನ್ನತ ಮಟ್ಟದಲ್ಲಿ ನಾಯಕನ ಅಗತ್ಯವಿದ್ದರೆ, ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಬಹುದು ಎಂದಿದ್ದಾರೆ.
ರಾಹುಲ್ ಸಾರ್ವಕಾಲಿಕ ಆಟಗಾರ
ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಐಪಿಎಲ್‌ನ ಸಾರ್ವಕಾಲಿಕ ಆಟಗಾರರಲ್ಲಿ ಒಬ್ಬರು. ಡೆಲ್ಲಿ ತಂಡದಲ್ಲಿ ಸಾಕಷ್ಟಯ ಬದಲಾವಣೆಗಳಾಗಿರುವುದರಿಂದ ರಾಹುಲ್ ಅವರನ್ನು ತಂಡದ ನಾಯಕನ್ನಾಗಿ ಮಾಡುವ ಆಲೋಚನೆ ಒಳ್ಳೆಯದು ಎಂದು ಮಾಜಿ ವೇಗಿ ವರುಣ್ ಆರನ್ ಹೇಳಿದ್ದಾರೆ.
ಟೀಮ್ ಇಂಡಿಯಾ ಮಾಜಿ ವಿಕೆಟ್‌ಕೀಪರ್ ದೀಪ್ ದಾಸ್‌ಗುಪ್ತಾ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಮಾತನಾಡಿದ್ದಾರೆ. ಡೆಲ್ಲಿ ಉತ್ತಮ ಬ್ಯಾಟಂಗ್ ತಂಡವಾಗಿದ್ದು, ಅವರು ತಮ್ಮ ಫಿನಿಶರ್‌ಗಳನ್ನು ಸಹಾ ಸುಧಾರಿಸಿದ್ದಾರೆ. ಇದರ ಹೊರತಾಗಿ ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ಜೋಡಿ ಡೆಲ್ಲಿ ತಂಡದ ಬಲವಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಕೆಎಲ್ ರಾಹುಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕರುಣ್ ನಾಯರ್, ಅಭಿಷೇಕ್ ಪೊರೆಲ್, ಟ್ರಿಸ್ಟಿಯನ್ ಸ್ಟಬ್ಸ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಟಿ ನಟರಾಜನ್, ಮಿಚೆಲ್ ಸ್ಟಾರ್ಕ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಮುಖೇಶ್ ಕುಮಾರ್, ದರ್ಶನ್ ನಲ್ಕಂದೆ, ದರ್ಶನ್ ನಲ್ಕಂದೆ, ದರ್ಶನ್ ನಲ್ಕಂದೆ ಫೆರೇರಾ, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾಣ ವಿಜಯ್, ಮಾಧವ್ ತಿವಾರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications