IPL 2025: ಪಂದ್ಯದ ನಂತರ ಕೆಎಲ್ ರಾಹುಲ್‌ನನ್ನು ರಜತ್ ಪಾಟಿದಾರ್ ಕಡೆಗಣಿಸಿದ್ದಾರಾ?
ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಗೆಲುವಿನ ಓಟವನ್ನು ಮುಂದುವರೆಸಿತು. ಡೆಲ್ಲಿ ಸತತ ನಾಲ್ಕನೇ ಪಂದ್ಯವನ್ನು ಗೆದ್ದಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತವರಿನಲ್ಲಿ ಅಕ್ಸರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿತು. ಆರ್‌ಸಿಬಿಯಿಂದ ಕೆಎಲ್ ರಾಹುಲ್ ಗೆಲುವು ಕಸಿದುಕೊಂಡರು. ರಾಹುಲ್ 93 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಆರ್‌ಸಿಬಿ ನೀಡಿದ್ದ 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು 13 ಎಸೆತಗಳು ಬಾಕಿ ಇರುವಾಗ 169 ರನ್‌ಗಳನ್ನು ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಈ ಪಂದ್ಯದ ನಂತರ ವಿಡಿಯೋವೊಂದು ವೈರಲ್ ಆಗುತ್ತಿದೆ. ಪಂದ್ಯದ ಬಳಿಕ ಕೆಎಲ್ ರಾಹುಲ್ ಅವರನ್ನು ಆರ್‌ಸಿಬಿ ನಾಯಕ ರಜತ್ ಪಟಿದಾರ್ ಕಡೆಗಣಿಸಿ ಕೈಕುಲುಕದೆ ಮುಂದೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಸಾಂಪ್ರದಾಯಿಕ ರೀತಿಯಲ್ಲಿ ಕೈಕುಲುಕಿದರು. ಕೆಎಲ್ ರಾಹುಲ್ ಅವರಿಗೆ ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಅಭಿನಂದನೆ ಹೇಳಿದರು. ಈ ವೇಳೆ ರಾಹುಲ್ ಸಾಲ್ಟ್ ಜೊತೆ ಕೈಕುಲುಕುತ್ತಿದ್ದಾಗ, ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಕೂಡ ಇದ್ದರು.
ಆದರೆ ರಾಹುಲ್ ಅವರಿಗೆ ಅವರು ಅಭಿನಂದನೆ ಹೇಳದೆ ನೇರವಾಗಿ ಮುಂದೆ ಹೋದರು. ಇದಾದ ನಂತರ ರಾಹುಲ್ ಕೃನಾಲ್ ಪಾಂಡ್ಯ ಮತ್ತು ಟಿಮ್ ಡೇವಿಡ್ ಅವರೊಂದಿಗೆ ಕೈಕುಲುಕಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಆರ್‍ಸಿಬಿ ನಾಯಕ ರಜತ್ ಪಾಟಿದಾರ್ ಅವರಿಗೆ ಬೆಂಬಲ ನೀಡಿದ್ದಾರೆ. ಇನ್ನೂ ಕೆಲವು ರಜತ್ ಪಾಟಿದಾರ್ ಮಾಡಿರುವುದು ಸರಿಯಲ್ಲ. ಪಾಟಿದಾರ್ ಕೆಲವು ಶಿಷ್ಟಾಚಾರಗಳನ್ನು ಕಲಿಯಬೇಕು ಎಂದು ಕಮೆಂಟ್‌ಗಳ ಮೂಲಕ ಹೇಳಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್‍ಸಿಬಿ ತಂಡ ನಿಗದಿಯ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್‍ಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ಡೆಲ್ಲಿ ತಂಡ ಗೆಲುವಿನಲ್ಲಿ ಕೆಎಲ್ ರಾಹುಲ್ ಪ್ರಮುಖ ಪಾತ್ರವಹಿಸಿದರು. ಏಕಾಂಗಿ ಹೋರಾಟ ನಡೆಸಿದ ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 93 ರನ್ ಕಲೆ ಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications