For Quick Alerts
ALLOW NOTIFICATIONS  
For Daily Alerts
 

Turning point: ರಾಜಸ್ಥಾನ ವಿರುದ್ಧ ಪಂದ್ಯ ತಿರುಗಿಸಿದ ಮೊಯಿನ್-ವರುಣ್

ಗುವಾಹಟಿಯದ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಐಪಿಎಲ್‌ 2025ರ ಆರನೇ ಪಂದ್ಯದಲ್ಲಿ ನಡೆಯಿತು. ಐಪಿಎಲ್ 2025ರಲ್ಲಿ ಉಭಯ ತಂಡಗಳು ಮೊದಲ ಗೆಲುವಿನ ಹುಡುಕಾಟದಲ್ಲಿದ್ದವು. ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲು ಗೆಲುವು ಸಾಧಿಸಿತು. ರಾಜಸ್ಥಾನ ವಿರುದ್ಧ ಹಾಲಿ ಚಾಂಪಿಯನ್‌ ಕೋಲ್ಕತ್ತಾ 8 ವಿಕೆಟ್‌ಗಳ ಸುಲಭ ಜಯ ಸಾಧಿಸುವ ಮೂಲಕ ಟೂರ್ನಿಗೆ ಮರಳಿತು.

ಟಾಸ್ ಗೆದ್ದ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ನಾಯಕ ಅಜಿಂಕ್ಯಾ ರಹಾನೆ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್‌ಗಳಿಗೆ ಸೀಮಿತವಾಯಿತು. ರಾಜಸ್ಥಾನ ನೀಡಿದ 152 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 17.3 ಓವರ್‌ನಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 153 ರನ್‌ಗಳನ್ನು ಗಳಿಸಿ ಗೆಲುವಿ ನಗೆ ಬೀರಿತು.

IPL 2025 Do you know the turning point of Rajasthan Royals vs Kolkata Knight Riders match

ಕೆಕೆಆರ್ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಆರ್‌ಆರ್ ಬ್ಯಾಟಿಂಗ್‌ ಅಬ್ಬರಕ್ಕೆ ಬ್ರೇಕ್ ಹಾಕಿದರು. ವರುಣ್ ಚಕ್ರವರ್ತಿ, ಮೊಯೀನ್ ಅಲಿ, ಹರ್ಷಿತ್ ರಾಣಾ ಮತ್ತು ವೈಭವ್ ಅರೋರಾ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಆರ್‍‌ಆರ್‍‌ ಪರ, ಧ್ರುವ್ ಜುರೆಲ್ 33 ರನ್‌ ಗಳಿಸಿ ಗರಿಷ್ಠ ಸ್ಕೋರರ್ ಆದರು.

ಗುರಿ ಬೆನ್ನಟ್ಟಿದ ಕೆಕೆಆರ್ ಪರ ಸ್ಪೋಟಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅಮೋಘ ಪ್ರದರ್ಶನ ನೀಡಿದರು. ಗುವಾಹಟಿಯಲ್ಲಿ ರಾಜಸ್ಥಾನ ಬೌಲರ್‍‌ಗಳ ಬೆವರಿಳಿಸಿದ ಡಿ ಕಾಕ್ ಅಜೇಯ 97 ರನ್ ಗಳಿಸಿ ಕೆಕೆಆರ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಅಜಿಂಕ್ಯ ರಹಾನೆ (15 ಎಸೆತಗಳಲ್ಲಿ 18) ಮತ್ತು ಅಂಗ್‌ಕ್ರಿಶ್ ರಘುವಂಶಿ (17 ಎಸೆತಗಳಲ್ಲಿ 22*) ಕೂಡ ಪ್ರಮುಖ ಪಾತ್ರ ವಹಿಸಿದರು.

ಟರ್ನಿಂಗ್ ಪಾಯಿಂಟ್

ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಕೆಕೆಆರ್ ಸ್ಪಿನ್ನರ್ಸ್ ಮಿಂಚಿದರು. ಅನಾರೋಗ್ಯದ ಕಾರಣ ಸುನಿಲ್ ನರೈನ್ ಈ ಪಂದ್ಯದಿಂದ ಹೊರಗುಳಿಯಬೇಕಾಯಿತು. ಬದಲಿ ಆಟಗಾರನಾಗಿ ಕಣಕ್ಕಿಳಿದ ಮೊಯಿನ್ ಅಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡರು. ಮೊಯಿನ್ ಅಲಿ ಮತ್ತು ವರುಣ್ ಚಕ್ರವರ್ತಿ ಒಟ್ಟಾಗಿ ರಾಜಸ್ಥಾನ ಬ್ಯಾಟರ್ಸ್ ಅನ್ನು ಕಟ್ಟಿ ಹಾಕಿದರು. ಈ ಜೋಡಿ ತಮ್ಮ ಎಂಟು ಓವರ್‌ಗಳಲ್ಲಿ ಒಟ್ಟು ನಾಲ್ಕು ವಿಕೆಟ್‌ಗಳೊಂದಿಗೆ ಕೇವಲ 40 ರನ್‌ಗಳನ್ನು ಬಿಟ್ಟುಕೊಟ್ಟರು. ಪವರ್ ಪ್ಲೇ ಅಂತ್ಯದಲ್ಲಿ ಓವರ್‌ಗೆ ಒಂಬತ್ತು ರನ್‌ಗಳಂತೆ ಗಳಿಸುತ್ತಿದ್ದ ರಾಜಸ್ಥಾನ ವೇಗಕ್ಕೆ ಇದು ಬ್ರೇಕ್ ಹಾಕಿತು.

ಪಿಚ್ ನಿಧಾನಗತಿಯಲ್ಲಿದ್ದರೂ, ರಾಜಸ್ಥಾನ ಆಟಗಾರರ ಮೇಲೆ ಮೊಯಿನ್ ಅಲಿ ಮತ್ತು ವರುಣ್ ಚಕ್ರವರ್ತಿ ಪರಿಣಾಮ ಬೀರಿದರು. ಈ ಪ್ರದರ್ಶನದಿಂದಾಗಿ ಕೆಕೆಆರ್ ಪರ ಪಂದ್ಯ ತಿರುಗಿತು. ರಾಜಸ್ಥಾನ ತಂಡದ ನಾಲ್ಕು ಪ್ರಮುಖ ಬ್ಯಾಟಿಂಗ್ ಆಧಾರಸ್ತಂಭಗಳಾದ ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್, ವನಿಂದು ಹಸರಂಗ ಮತ್ತು ನಿತೀಶ್ ರಾಣಾ ವಿಕೆಟ್ ಕಬಳಿಸುವಲ್ಲಿ ಮೊಯಿನ್ ಅಲಿ ಮತ್ತು ವರುಣ್ ಚಕ್ರವರ್ತಿ ಯಶಸ್ವಿಯಾದರು.

Story first published: Thursday, March 27, 2025, 0:21 [IST]
Other articles published on Mar 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+