ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಟೂರ್ನಿ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸುತ್ತಿದೆ. ಐಪಿಎಲ್‌ನ 10 ಫ್ರಾಂಚೈಸಿ ತಂಡಗಳು 2025ರ ಆವೃತ್ತಿಗಾಗಿ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಪ್ಲಾನ್ ಎ, ಬಿ, ಸಿ ರೆಡಿ ಮಾಡಿಕೊಂಡಿದೆ. ಎ ಪ್ಲಾನ್‌ನಲ್ಲಿ ಕೆಎಲ್ ರಾಹುಲ್ ಅವರನ್ನು ನಾಯಕನ್ನಾಗಿ ಮಾಡಲು ತಂತ್ರ ರೂಪಿಸಿದೆ. ಇದು ಸಾಧ್ಯವಾಗದೆ ಇದ್ದರೆ, ಪ್ಲಾನ್ ಬಿ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರನ್ನು ಮೆಗಾ ಹರಾಜಿನಲ್ಲಿ ಬಿಡ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಎರಡು ಪ್ಲಾನ್ ವರ್ಕ್‌ಔಟ್ ಆಗದಿದ್ದರೆ, ಪ್ಲಾನ್ ಸಿ ಅನ್ನು ಕಾರ್ಯರೂಪಕ್ಕೆ ತರಲು ಆರ್‌ಸಿಬಿ ಸನ್ನದ್ಧವಾಗಿದೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.

ಕಳೆದ ಮೂರು ಆವೃತ್ತಿಗಳಿಂದ ಆರ್‌ಸಿಬಿಗೆ ಫಾಪ್ ಡುಪ್ಲೆಸಿಸ್ ನಾಯಕರಾಗದ್ದಾರೆ. ಫಾಪ್ ನಾಯಕತ್ವದಲ್ಲೂ ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿದೆ. ಸದ್ಯ ಫಾಪ್ ಅವರಿಗೆ 40 ವರ್ಷ ವಯಸ್ಸಾಗಿದ್ದು, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅವರನ್ನು ಆರ್‌ಸಿಬಿ ಉಳಿಸಿಕೊಳ್ಳುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ ಆರ್‌ಸಿಬಿ ಮುಂದಿನ ನಾಯಕನ ಹುಡುಕಾಟದಲ್ಲಿದೆ.
ಐಪಿಎಲ್ 2024ರ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆರ್‌ಸಿಬಿ ಎಲಿಮಿನೇಟರ್‌ಗೆ ಆರ್ಹತೆ ಪಡೆದಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಎಡುವಿದ ಆರ್‌ಸಿಬಿ ತಂಡ ರಾಜಸ್ತಾನ ರಾಯಲ್ಸ್ ವಿರುದ್ಧ ಸೋತು ಕಪ್ ಗೆಲ್ಲುವ ಆಸೆಯನ್ನು ಕೈ ಬಿಟ್ಟಿತ್ತು.
ಈಗ ಐಪಿಎಲ್ 2025ರ ಟೂರ್ನಿಯಲ್ಲಿ ಶತಾಯಗತಾಯ ಕಪ್ ಗೆಲ್ಲಲ್ಲೇ ಬೇಕು ಎಂದು ಆರ್‌ಸಿಬಿ ಫ್ರಾಂಚೈಸಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಆರ್‌ಸಿಬಿ ತಂಡದ ಅನುಭವಿ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ವಿದಾಯ ಹೇಳಿದ ನಂತರ ಅವರನ್ನೇ ತಂಡಕ್ಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ.
ಇದರ ಬೆನ್ನಲ್ಲೇ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಎ, ಬಿ ಪ್ಲಾನ್‌ಗಳನ್ನು ಮಾಡಿದಕೊಂಡಿದೆ. ಈ ಎರಡು ಪ್ಲಾನ್ ಆರ್‌ಸಿಬಿ ಅಂದುಕೊಂಡಂತೆ ಆಗದಿದ್ದರೆ, ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವ ಮತ್ತೆ ಸಿಗಲಿದೆ ಎಂಬ ಮಾತುಗಳು ಕ್ರಿಕೆಟ್‌ಗಳಲ್ಲಿ ಕೇಳಿ ಬರುತ್ತಿದೆ.
ವಿರಾಟ್ ಕೊಹ್ಲಿ ನಾಯನಾಗಿ ಐಪಿಎಲ್ ಇತಿಹಾಸದಲ್ಲಿ ಯಶಸ್ಸು ಸಾಧಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಕಪ್ ಗೆಲ್ಲದೆ ಇದ್ದರೂ,ಇವರು ಗೆಲುವಿನ ಲೆಕ್ಕಚಾರದಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿ 2011ರಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಾ ಬಂದಿದ್ದು, 2023ರಲ್ಲಿ ನಾಯಕತ್ವದಿಂದ ಕೆಳಗಿದ್ದರು. ಕೊಹ್ಲಿ ನಾಯಕತ್ವದಲ್ಲಿ ಇದುವರೆಗೆ ಐಪಿಎಲ್‌ನಲ್ಲಿ ಆರ್‌ಸಿಬಿ 143 ಪಂದ್ಯಗಳಲ್ಲಿ 66 ಗೆಲುವು ಮತ್ತು 70 ಸೋಲು ಕಂಡಿದೆ.
ಸಖತ್ ಫಿಟ್ ಆಗಿರುವ ವಿರಾಟ್ ಕೊಹ್ಲಿ ಇನ್ನು ನಾಲ್ಕು ವರ್ಷ ಐಪಿಎಲ್ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ ಕೊಹ್ಲಿ ಅವರಿಗೆ ಮತ್ತೊಮ್ಮೆ ನಾಯಕನ ಪಟ್ಟ ಕಟ್ಟಲು ಆರ್‌ಸಿಬಿ ಫ್ರಾಂಚೈಸಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.