Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಈ 3 ನಾಯಕರು ಮೆಗಾ ಹರಾಜಿನಲ್ಲಿ ಬಿಡ್ ಆಗೋದು ಡೌಟ್!

ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025 ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ನಡೆಯಲಿದೆ. ಮೆಗಾ ಹರಾಜಿನಲ್ಲಿ ಅನೇಕ ಸ್ಟಾರ್ ಆಟಗಾರರಿದ್ದು, ಅವರ ಮೇಲೆ ಭಾರಿ ಬಿಡ್‌ಗಳು ನಡೆಯುವ ಸಾಧ್ಯತೆಯಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಶ್ರೇಯಸ್ ಅಯ್ಯರ್, ರಿಷಬ್ ಪಂತ್. ಕೆಎಲ್ ರಾಹುಲ್, ಇಶಾನ್ ಕಿಶನ್, ಮೊಹಮ್ಮದ್ ಶಮಿ ಸೇರಿದಂತೆ ಇನ್ನೂ ಹಲವು ಸ್ಟಾರ್ ಆಟಗಾರರು ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಆಟಗಾರರ ಜೊತೆಗೆ ನಾಯಕರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ನಾಯಕರು ಮುಂದಿನ ಐಪಿಎಲ್ ಆವೃತ್ತಿ ಆಡುತ್ತಾರೆ ಎಂಬುದೇ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ. ಈ ಆಟಗಾರರನ್ನು ಐಪಿಎಲ್ ಫ್ರಾಂಚೈಸಿಗಳು ಬಿಡ್ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಹಾಗಾಗಿ ಈ ಬಾರಿಯ ಹರಾಜಿನಲ್ಲಿ ಮಾರಾಟವಾಗದೇ ಉಳಿಯಲಿರುವ ಮೂವರು ಮಾಜಿ ನಾಯಕರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

IPL 2025 Doubt these 3 Captains will bid in the mega auction

ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಕ್ಲಾಸಿಕ್ ಬ್ಯಾಟರ್ ಸ್ಟೀವ್ ಸ್ಮಿತ್ ಕಳೆದು ಮೂರು ಐಪಿಎಲ್ ಆವೃತ್ತಿಗಳಿಂದ ಕಾಣಿಸಿಕೊಂಡಿಲ್ಲ. ಸ್ಮಿತ್ ತಮ್ಮ ತಮ್ಮ ಕೊನೆಯ ಐಪಿಎಲ್ ಆವೃತ್ತಿಯನ್ನು 2021ರಲ್ಲಿ ಆಡಿದ್ದರು. ಅಂದಿನಿಂದ ಅವರು ಸತತ 3 ಐಪಿಎಲ್‌ಗಳಲ್ಲಿ ಆಡಲಿಲ್ಲ. ಈ ಬಾರಿ ಮೆಗಾ ಹರಾಜಿನಲ್ಲಿ ಐಪಿಎಲ್ ಫ್ರಾಂಚೈಸಿಗಳು ಅವರನ್ನು ಬಿಡ್ ಮಾಡಲು ಹಿಂದೇಟು ಹಾಕಬಹುದು. ಸ್ಮಿತ್ ರಾಜಸ್ಥಾನ್ ರಾಯಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ನ ನಾಯಕರಾಗಿದ್ದರು. ಇದರ ಹೊರತಾಗಿಯೂ ಅವರು ಐಪಿಎಲ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.

ಅಜಿಂಕ್ಯ ರಹಾನೆ

ಭಾರತದ ಅನುಭವಿ ಬ್ಯಾಟರ್‌ ಮತ್ತು ಮಾಜಿ ನಾಯಕ ಅಜಿಂಕ್ಯ ರಹಾನೆ ಕೂಡ ಐಪಿಎಲ್ 2025ರ ಹರಾಜು ಅಖಾಡಕ್ಕೆ ಧುಮಕಿದ್ದಾರೆ. ಈ ಬಾರಿ ಅವರಿಗೆ ನಿರಾಸೆ ಉಂಟಾಗಬಹುದು. ರಹಾನೆ ಅವರ ವಯಸ್ಸು ಹೆಚ್ಚುತ್ತಿರುವ ಕಾರಣ ಟಿ20 ಮಾದರಿಯಲ್ಲಿ ಫಿಟ್ ಆಗಿಲ್ಲ. ಇದರೊಂದಿಗೆ, ಅವರ ನಿಧಾನಗತಿಯ ಆಟ ಮತ್ತು ಹಿಂದಿನ ಪ್ರದರ್ಶನವು ಫ್ರಾಂಚೈಸಿಗಳು ಅವರ ಮೇಲೆ ಹಣವನ್ನು ಹೂಡಿಕೆ ಮಾಡಲು ಮುಂದಾಗದಿರಬಹುದು.
ಅವರು ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡದ ಪರ ಉತ್ತಮ ಪ್ರದರ್ಶನ ನಿಡಿದ್ದರು. ಆದರೆ ಅವರ ಬ್ಯಾಟ್ ಐಪಿಎಲ್ 2024 ರಲ್ಲಿ ಮೌನವಾಗಿತ್ತು. ಹೀಗಾಗಿ ಅವರನ್ನು ಸಿಎಸ್‌ಕೆ ತಂಡದಿಂದ ಬಿಡುಗಡೆ ಮಾಡಿದೆ. ರಹಾನೆ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು.

ಫಾಫ್ ಡು ಪ್ಲೆಸಿಸ್

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವ ನಾಯಕರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಸ್ಪೋಟಕ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಕೂಡ ಸೇರ್ಪಡೆಗೊಳ್ಳಬಹುದು. ಏಕೆಂದರೆ ಅವರು ಸತತ ಮೂರು ಋತುಗಳಲ್ಲಿ ಆರ್‌ಸಿಬಿ ನಾಯಕತ್ವ ವಹಿಸಿದ್ದರು. ಆದರೆ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಆರ್‌ಸಿಬಿ ಅವರನ್ನು ಬಿಡುಗಡೆ ಮಾಡಿದೆ. ಫಾಫ್ 40 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಈಗಾಗಲೇ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವುದನ್ನು ನಿಲ್ಲಿಸಿದ್ದಾರೆ. ಅವರು ಐಪಿಎಲ್ 2024 ರಲ್ಲಿ 15 ಪಂದ್ಯಗಳಲ್ಲಿ 29.20 ರ ಸರಾಸರಿಯೊಂದಿಗೆ ಆರ್‌ಸಿಬಿ ಪರ 438 ರನ್ ಕಲೆ ಹಾಕಿದ್ದರು. ಈಗ ಅವರು ಭವಿಷ್ಯ ಮೆಗಾ ಹರಾಜಿನಲ್ಲಿ ನಿರ್ಧಾರವಾಗಲಿದೆ.

Story first published: Thursday, November 21, 2024, 19:03 [IST]
Other articles published on Nov 21, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+