IPL Dream Team: ಡ್ರೀಮ್ ಟೀಮ್‌ನಲ್ಲಿ ಯಾವ ಆಟಗಾರರು ಇದ್ದರೆ ಉತ್ತಮ?
ಐಪಿಎಲ್ 2025 ರ 21ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಲಕ್ನೋ ಸೂಪರ್ ಜೈಂಟ್ಸ್ ಎದುರಿಸಲಿದೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಅಜಿಂಕ್ಯಾ ರಹಾನೆ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಎರಡು ಸೋಲುಗಳನ್ನು ಕಂಡಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್‌ಗಳಿಂದ ಸೋಲಿಸಿತು. ಈಗ ತವರು ನೆಲದಲ್ಲಿ ಅಜಿಂಕ್ಯ ರಹಾನೆ ಗೆಲುವಿನ ವಿಶ್ವಾಸದೊಂದಿಗೆ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ.
ರಿಷಬ್ ಪಂತ್ ಮುನ್ನಡೆಸುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಅಷ್ಟೇ ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವಲ್ಲಿ ಲಕ್ನೋ ಯಶಸ್ವಿಯಾಗಿತ್ತು. ಈಗ ಕೆಕೆಆರ್ ತಂಡದ ವಿರುದ್ಧ ಕೂಡ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರಿದ್ದು, ಡ್ರೀಮ್ ಟೀಮ್‌ನಲ್ಲಿ ಯಾವೆಲ್ಲಾ ಆಟಗಾರರು ಇದರೆ ಬೆಸ್ಟ್ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ವಿಕೆಟ್‌ಕೀಪರ್‌ಗಳು: ಐಪಿಎಲ್ 2025 ರಲ್ಲಿ ಉಭಯ ತಂಡಗಳಲ್ಲಿರುವ ವಿಕೆಟ್ ಕೀಪರ್‍ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದರಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ನಿಕೋಲಸ್ ಪೂರನ್ ತಮ್ಮ ತಂಡಗಳಿಗೆ ಉತ್ತಮ ರನ್ ಗಳಿಸುತ್ತಿದ್ದಾರೆ. ವಿಕೆಟ್‌ಕೀಪರ್‍ಗಳ ಸಾಲಿನಲ್ಲಿ ಲಕ್ನೋ ನಾಯಕ ರಿಷಭ್ ಪಂತ್ ಕೂಡ ಇದ್ದಾರೆ. ಆದರೆ, ಅವರಿಂದ ಇಲ್ಲಿವರೆಗೆ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ಕ್ವಿಂಟನ್ ಡಿ ಕಾಕ್ ಮತ್ತು ನಿಕೋಲಸ್ ಪೂರನ್ ಅವರನ್ನು ಡ್ರೀಮ್ ಟೀಮ್‌ನಲ್ಲಿ ಹಾಕಿಕೊಳ್ಳುವುದು ಉತ್ತಮ.
ಬ್ಯಾಟರ್‌ಗಳು: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಇಲ್ಲಿ ಬ್ಯಾಟರ್‍ಗಳ ಅಬ್ಬರ ನೋಡಬಹುದಾಗಿದೆ. ಆದರಿಂದ ರಿಂಕು ಸಿಂಗ್, ಅಜಿಂಕ್ಯಾ ರಹಾನೆ ಮತ್ತು ಐಡೆನ್ ಮಾರ್ಕ್ರಾಮ್ ಅವರಂತಹ ಭರವಸೆ ಬ್ಯಾಟರ್‍ಗಳನ್ನು ಡ್ರೀಮ್ ತಂಡದಲ್ಲಿ ಇರಿಸಿಕೊಳ್ಳುವುದು ಬೆಸ್ಟ್ ಆಯ್ಕೆ.

ಆಲ್ ರೌಂಡರ್‌ಗಳು: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಆಲ್‌ರೌಂಡರ್‍ಗಳಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್ ತಂಡ ಆಂಡ್ರೆ ರಸೆಲ್ ಮತ್ತು ಎಲ್‌ಎಸ್‌ಜಿಯ ಮಿಚೆಲ್ ಮಾರ್ಷ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದಲ್ಲದೆ, ಕೆಕೆಆರ್ ತಂಡದ ಪರ ಮಿಂಚುತ್ತಿರುವ ಸುನಿಲ್ ನರೈನ್ ಮತ್ತು ವೆಂಕಟೇಶ್ ಅಯ್ಯರ್ ಅವರನ್ನು ಸೇರಿಸಿಕೊಳ್ಳುವುದು ಉತ್ತಮ ಆಯ್ಕೆ ಆಗಿದೆ. ಈ ನಾಲ್ವರು ಆಲ್‌ರೌಂಡರ್‍ಗಳು ಐಪಿಎಲ್ 2025 ರಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
ಬೌಲರ್‌ಗಳು: ಬೌಲಿಂಗ್ ವಿಭಾಗದಲ್ಲಿ ವೇಗಿಗಳಿಗಿಂತ ಸ್ಪಿನ್ನರ್‍ಗಳಿಗೆ ಮಣೆ ಹಾಕುವುದು ಒಳ್ಳೆಯದು. ಉಭಯ ತಂಡಗಳ ಪರ ಇಬ್ಬರೂ ಸ್ಪಿನ್ನರ್‍ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಕೆಕೆಆರ್ ಪರ ವರುಣ್ ಚಕ್ರವರ್ತಿ ಮತ್ತು ಎಲ್‌ಎಸ್‌ಜಿ ತಂಡಕ್ಕಾಗಿ ದಿಗ್ವೇಶ್ ರಾಠಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಈ ಇಬ್ಬರು ಬೌಲಿಂಗ್ ವಿಭಾಗದಲ್ಲಿರುವುದು ಉತ್ತಮ.
ನಾಯಕ, ಉಪನಾಯಕ ಯಾರು?
ಸ್ಪೋಟಕ ಬ್ಯಾಟಿಂಗ್ ಮೂಲಕ ರನ್ ಗಳಿಸುತ್ತಿರುವ ನಿಕೋಲಸ್ ಪೂರನ್ ಅವರನ್ನು ನಾಯಕನಾಗಿ ಮಾಡುವುದು ಒಳ್ಳೆಯದು. ಜೊತೆಗೆ ಕೆಕೆಆರ್ ತಂಡದ ಅಪಾಯಕಾರಿ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರನ್ನು ಉಪನಾಯಕನಾಗಿ ಮಾಡಿದರೆ ಡ್ರೀಮ್ ಟೀಮ್ ಪೂರ್ಣವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications