For Quick Alerts
ALLOW NOTIFICATIONS  
For Daily Alerts
 

IPL Dream Team: ಮುಂಬೈ, ಆರ್‌ಸಿಬಿ ತಂಡಗಳಲ್ಲಿ ಯಾರನ್ನು ಹಾಕಿಕೊಳ್ಳುವುದು ಉತ್ತಮ?

ಸೋಮವಾರ ಇಂಡಿಯನ್ ಪ್ರೀಮಿಯರ್‍‌ ಲೀಗ್‌ನಲ್ಲಿ ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಎದುರಿಸಲಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ರೋಚಕತೆ ಹೆಚ್ಚಿಸಿದೆ. ಪ್ರಸಕ್ತ ಲೀಗ್‌ನಲ್ಲಿ ಆರ್‌ಸಿಬಿ ಅಮೋಘ ಫಾರ್ಮ್‌ನಲ್ಲಿದೆ. ಹೀಗಾಗಿ ಗೆಲ್ಲುವ ನೆಚ್ಚಿನ ತಂಡ ಎಂದು ಪರಿಗಣಿಸಲಾಗಿದೆ. ಆದರೆ ಮುಂಬೈ ತಂಡವನ್ನು ಸಹ ಕಡೆಗಣಿಸುವ ಹಾಗಿಲ್ಲ. ತವರಿನಲ್ಲಿ ಮುಂಬೈ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರದ ಪ್ರದರ್ಶನ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ.

ಎರಡೂ ತಂಡಗಳು ಅಂಕಿ ಅಂಶಗಳು ಬಲಿಷ್ಠವಾಗಿದೆ. ಡ್ರೀಮ್‌ ತಂಡದಲ್ಲಿ ಯಾರನ್ನು ಇಟ್ಟುಕೊಂಡರೆ ಬೆಸ್ಟ್‌ ಎಂಬ ಚರ್ಚೆಗಳು ಇರುತ್ತವೆ. ಪ್ರಸಕ್ತ ಫಾರ್ಮ್‌ ಹಾಗೂ ಆ ಪಿಚ್‌ನಲ್ಲಿ ಆಟಗಾರನ ಪ್ರದರ್ಶನವನ್ನು ಪರಿಗಣಿಸಿ ಮಣೆ ಹಾಕುವುದು ಬೆಸ್ಟ್‌. ಹಾಗಿದ್ದರೆ ನಿಮ್ಮ ತಂಡದಲ್ಲಿ ಯಾವೆಲ್ಲಾ ಆಟಗಾರರು ಇದರೆ ನೀವು ಮುಂಚೂಣಿಯಲ್ಲಿ ಉಳಿಯಬಹುದು ಎಂಬ ಬಗ್ಗೆ ವರದಿ ಇಲ್ಲಿದೆ.

IPL 2025 Dream11 Team Hardik Pandya vs Virat Kohli as Mumbai Indians Take on RCB

ಮುಂಬೈ ಹಾಗೂ ಬೆಂಗಳೂರು ತಂಡಗಳ ನಡುವಿನ ಕಾದಾಟ ಎಂದರೆ, ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್‌ ಕೊಹ್ಲಿ ನಡುವಿನ ಹೋರಾಟ. ಇಬ್ಬರೂ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ಸ್ಟಾರ್ ಪ್ಲೇಯರ್ಸ್. ಇಬ್ಬರೂ ತಮ್ಮ ಕ್ಷಮತೆಯನ್ನು ಈಗಾಗಲೇ ಸಾಬೀತು ಪಡಿಸಿರುವ ಆಟಗಾರರು. ಹೀಗಾಗಿ ಇಬ್ಬರನ್ನೂ ತಂಡದಲ್ಲಿ ಹಾಕಿಕೊಳ್ಳುವುದು ಬೆಸ್ಟ್‌.

ವಿಕೆಟ್‌ ಕೀಪರ್ಸ್‌: ಎರಡೂ ತಂಡದಲ್ಲಿರುವ ವಿಕೆಟ್‌ ಕೀಪರ್ಸ್‌ಗಳು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇದರಲ್ಲಿ ಫಿಲ್‌ ಸಾಲ್ಟ್‌ ಹಾಗೂ ರಯಾನ್‌ ರಿಕೆಲ್ಟನ್‌ ಅವರನ್ನು ನಿಮ್ಮ ತಂಡದಲ್ಲಿ ಹಾಕಿಕೊಳ್ಳುವುದು ಒಳ್ಳೆಯ ಆಯ್ಕೆ. ಕಾರಣ ಮುಂಬೈನಲ್ಲಿ ಬ್ಯಾಟಿಂಗ್‌ ಟ್ರ್ಯಾಕ್‌ ಇದ್ದು ಇಬ್ಬರೂ ಆಟಗಾರರು ತಮ್ಮ ತಮ್ಮ ತಂಡಕ್ಕೆ ಅಬ್ಬರದ ಆರಂಭವನ್ನು ನೀಡಬಹುದು.

IPL 2025 Dream11 Team Hardik Pandya vs Virat Kohli as Mumbai Indians Take on RCB

ಬ್ಯಾಟರ್ಸ್‌: ಮುಂಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಟೀಮ್ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಲ್ಲಿ ಇರಿಸಿಕೊಳ್ಳುವುದು ಒಳ್ಳೆಯ ಆಯ್ಕೆ. ರೋಹಿತ್ ಶರ್ಮಾ ಅವರನ್ನು ತಂಡದಲ್ಲಿ ಇರಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ತಂಡ ಪ್ರಕಟಿಸಿದ ಬಳಿಕ ಯೋಚನೆ ಮಾಡುವುದು ಒಳ್ಳೆಯದು. ಇನ್ನು ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ ಹಾಗೂ ರಜತ್ ಪಟಿದಾರ್ ತಂಡದಲ್ಲಿ ಇರುವುದು ಬೆಸ್ಟ್‌.

ಆಲ್‌ರೌಂಡರ್ಸ್‌: ಎರಡೂ ತಂಡದಲ್ಲೂ ಸ್ಟಾರ್ ಆಲ್‌ರೌಂಡರ್ಸ್‌ಗಳು ಇದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಹಾರ್ದಿಕ್ ಪಾಂಡ್ಯ ಅವರ ಮೇಲೆ ನೆಟ್ಟಿರಲಿವೆ. ಇವರು ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ನಮನ್‌ ಧೀರ್ ಅವರನ್ನು ತಂಡದಲ್ಲಿ ಹಾಕಿಕೊಳ್ಳುವುದು ಒಳ್ಳೆಯ ಆಯ್ಕೆ. ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಲಿಯಾಮ್ ಲಿವಿಂಗ್‌ಸ್ಟೋನ್‌ ಅವರನ್ನು ಸೇರಿಸಿಕೊಳ್ಳುವುದು ಒಳ್ಳೆಯದರು.

ಬೌಲರ್ಸ್‌: ಬೌಲಿಂಗ್‌ ವಿಭಾಗದಲ್ಲಿ ಜೋಶ್‌ ಹ್ಯಾಜಲ್‌ ವುಡ್‌, ಭುವನೇಶ್ವರ್ ಕುಮಾರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯ ಆಯ್ಕೆ. ಇನ್ನು ಮುಂಬೈ ಪರ ಟ್ರೆಂಟ್‌ ಬೌಲ್ಟ್‌ ತಂಡದಲ್ಲಿದ್ದರೆ ಉತ್ತಮ.

ನಾಯಕ, ಉಪನಾಯಕ ಯಾರು?

ಹಾರ್ದಿಕ್ ಪಾಂಡ್ಯ ಇಲ್ಲವೇ ವಿರಾಟ್‌ ಕೊಹ್ಲಿ ಅವರಲ್ಲಿ ಒಬ್ಬರಿಗೆ ನಾಯಕರನ್ನಾಗಿ ಮಾಡುವುದು ಬೆಸ್ಟ್‌. ಇಲ್ಲ ಒಬ್ಬರಿಗೆ ನಾಯಕ ಹಾಗೂ ಇನ್ನೊಬ್ಬರಿಗೆ ಉಪನಾಯಕ ಪಟ್ಟ ನೀಡುವುದು ಒಳ್ಳೆಯದು. ಇಲ್ಲದಿದ್ದರೆ ಉಪನಾಯಕನ ಸ್ಥಾನಕ್ಕೆ ಸೂರ್ಯ, ಫಿಲ್ ಸಾಲ್ಟ್‌ ಸಹ ಉತ್ತಮ ಆಯ್ಕೆ.

Story first published: Monday, April 7, 2025, 8:07 [IST]
Other articles published on Apr 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+