Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಶುಭಮನ್ ಗಿಲ್ ಅಭಿಮಾನಿಯಾದ ಇಂಗ್ಲೆಂಡ್ ಸ್ಟಾರ್ ಆಟಗಾರ

ಕಳೆದ ಕೆಲವು ವರ್ಷಗಳಿಂದ ಭಾರತ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ವಿಶ್ವ ಕ್ರಿಕೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ರೋಹಿತ್ ಶರ್ಮಾ ನಂತರ, ಅವರನ್ನು ಭಾರತ ತಂಡದ ಭವಿಷ್ಯದ ನಾಯಕ ಮತ್ತು ಆರಂಭಿಕ ಬ್ಯಾಟರ್ ಆಗಿ ನೋಡಲಾಗುತ್ತದೆ. ಅವರು ಭಾರತ ತಂಡದ ಪರ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಆಡುತ್ತಿದ್ದಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಆವೃತ್ತಿಯಲ್ಲಿ ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದಾರೆ.

ಐಪಿಎಲ್‌ನಲ್ಲಿಯೂ ಗುಜರಾತ್ ಟೈಟಾನ್ಸ್ ತಂಡವನ್ನು ಶುಭಮನ್ ಗಿಲ್ ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶುಭಮನ್ ಗಿಲ್ ಅವರಿಗೆ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಅಭಿಮಾನಿಯಾಗಿದ್ದಾರೆ. ಈ ಇಂಗ್ಲೆಂಡ್ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಸ್ಟಾರ್ ವಿಕೆಟ್ ಕೀಪರ್- ಬ್ಯಾಟರ್ ಮತ್ತು ಮಾಜಿ ನಾಯಕ ಜೋಸ್ ಬಟ್ಲರ್.

IPL 2025 England star player becomes Shubman Gill fan

ಐಪಿಎಲ್ 2025 ರ ಹರಾಜಿನಲ್ಲಿ ಜೋಸ್ ಬಟ್ಲರ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡವು ಉಳಿಸಿಕೊಳ್ಳಲಿಲ್ಲ. ನಂತರ ಅವರನ್ನು ಗುಜರಾತ್ ಟೈಟಾನ್ಸ್ ತಂಡವು ಖರೀದಿಸಿತು. ಈಗ ಅವರು ಜಿಟಿ ಪರ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅಬ್ಬರಿಸುತ್ತಿದ್ದಾರೆ. ಶುಭಮನ್ ಗಿಲ್ ನಾಯಕತ್ವವನ್ನು ಜೋಸ್ ಬಟ್ಲರ್ ಹೊಗಳಿದ್ದಾರೆ. ಅಲ್ಲದೆ, ಶುಭಮನ್ ಗಿಲ್ ಅವರನ್ನು ಭಾರತೀಯ ಕ್ರಿಕೆಟ್‌ನ ಪೋಸ್ಟರ್ ಬಾಯ್ ಎಂದು ಬಣ್ಣಿಸಿದ್ದಾರೆ.

ಶುಬ್‌ಮನ್ ಗಿಲ್ ಒಬ್ಬ ಸ್ಟಾರ್ ಆಟಗಾರ. ಅವರು ಭಾರತದ ಪೋಸ್ಟರ್ ಬಾಯ್ ಆಗಲಿದ್ದಾರೆ. ಅವರು ಒಬ್ಬ ಅದ್ಭುತ ಆಟಗಾರ. ನನಗೆ ಅವರ ಆಟ ನೋಡುವುದು ತುಂಬಾ ಇಷ್ಟ. ನಾನು ಅವರ ವಿರುದ್ಧ ಆಡಿದ್ದೇನೆ. ಆದರೆ ಈಗ ನಾನು ಅವರನ್ನು ಹತ್ತಿರದಿಂದ ನೋಡಲು ಮತ್ತು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಮೈದಾನದ ಮೇಲಿನ ಅವರ ಉತ್ಸಾಹ ನನಗೆ ಇಷ್ಟ. ಅವರಿಗೆ ಸ್ಪಷ್ಟ, ಶಾಂತ ಮನಸ್ಸು ಕೂಡ ಇದೆ. ಆದ್ದರಿಂದ ಅವರು ನಾಯಕನಾಗಿ ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಗಿಲ್ ಅಭಿಮಾನಿಯಾಗಿರುವ ಬಗ್ಗೆ ಜೋಸ್ ಬಟ್ಲರ್ ಹೇಳಿದ್ದಾರೆ.

ಇದೇ ವೇಳೆ ಜೋಸ್ ಬಟ್ಲರ್ ಗುಜರಾತ್ ತಂಡದ ಆಟಗಾರರನ್ನು ಹೊಗಳಿದ್ದಾರೆ. ಇದರೊಂದಿಗೆ, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಆಡಿದ್ದ ಜೋಸ್ ಬಟ್ಲರ್, ಶ್ರೀಲಂಕಾದ ಮಾಜಿ ಬ್ಯಾಟರ್ ಮಹೇಲ ಜಯವರ್ಧನೆ ಅವರು ನಾನು ಆರಂಭಿಕ ಬ್ಯಾಟರ್ ಆಗಲು ಕಾರಣ ಎಂದು ಹೇಳಿದ್ದಾರೆ. ಜೋಸ್ ಬಟ್ಲರ್ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾಗ, ಅವರ ಕೋಚ್ ಮಹೇಲ ಜಯವರ್ಧನೆ ಆಗಿದ್ದರು.

ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಮಧ್ಯಮ ಕ್ರಮಾಂಕದ ಆಟಗಾರ ಅಥವಾ ಫಿನಿಷರ್ ಆಗಿದ್ದೆ. ಟಿ20 ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಆಡುವ ಅವಕಾಶ ನೀಡಿದ ಮಹೇಲ ಜಯವರ್ಧನೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಪವರ್‌ಪ್ಲೇ ಆಡಲು ಕಲಿಯಬೇಕಾಗಿತ್ತು. ಆದರೆ ಒಮ್ಮೆ ನಾನು ಪವರ್‌ಪ್ಲೇಗೆ ಪ್ರವೇಶಿಸಿದ ನಂತರ, ನಾನು ಮೊದಲಿನಂತೆಯೇ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂದು ನನಗೆ ಅನಿಸಿತು ಎಂದು ಜೋಸ್ ಬಟ್ಲರ್ ತಿಳಿಸಿದ್ದಾರೆ.

Story first published: Friday, April 4, 2025, 18:54 [IST]
Other articles published on Apr 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+