Love Propose: ಜಹೀರ್ ಖಾನ್‌ಗೆ 20 ವರ್ಷಗಳ ಬಳಿಕ ಮತ್ತೆ ಲವ್ ಪ್ರಪೋಸ್!
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)ನ 18ನೇ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಪ್ರತಿಯೊಬ್ಬ ಆಟಗಾರ ಮತ್ತು ತಂಡದ ಸಿಬ್ಬಂದಿ ತಮ್ಮ ತಂಡಗಳ ಶಿಬಿರವನ್ನು ಸೇರುತ್ತಿದ್ದಾರೆ. ಅದೇ ರೀತಿ, ಈ ವಾರ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಮಾರ್ಗದರ್ಶಕ ಜಹೀರ್ ಖಾನ್ ತಮ್ಮ ಶಿಬಿರಕ್ಕೆ ಸೇರಿದ್ದಾರೆ. ಈ ವೇಳೆ ಅವರಿಗೆ 20 ವರ್ಷಗಳ ಹಳೆಯ ಘಟನೆವೊಂದು ನೆನಪಾಗಿದೆ. ಜಹೀರ್ ಖಾನ್‌ಗೆ 20 ವರ್ಷಗಳ ಬಳಿಕ ಮತ್ತೆ ಅಭಿಮಾನಿಯೊಬ್ಬರು ಪ್ರಪೋಸ್ ಮಾಡಿದ್ದಾರೆ.
ಎಲ್‌ಎಸ್‌ಜಿ ಫ್ರಾಂಚೈಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಜಹೀರ್ ಖಾನ್ ಅವರಿಗೆ ಅಭಿಮಾನಿಯೊಬ್ಬರು ಪ್ರಪೋಸ್ ಮಾಡಿರುವು ಕಂಡು ಬಂದಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 2005ರ ಪಂದ್ಯ ವೇಳೆ ಕ್ರೀಡಾಂಗಣದಲ್ಲಿ ಇದೇ0 ಅಭಿಮಾನಿ 'ಜಹೀರ್, ಐ ಲವ್ ಯೂ' ಎಂದು ಪ್ಲಕಾರ್ಡ್‌ನಲ್ಲಿ ಬರೆದು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಈ ಬಾರಿಯೂ ಪ್ಲಕಾರ್ಡ್ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

20 ವರ್ಷಗಳ ಹಿಂದೆ ಅಂದರೆ 2005 ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಮೂರನೇ ಟೆಸ್ಟ್ ಪಂದ್ಯದ ವೇಳೆ ವೇಗದ ಬೌಲರ್ ಜಹೀರ್ ಖಾನ್ ಅವರಿಗೆ ಪ್ರಪೋಸ್ ಮಾಡಿದ್ದರು. ಈ ವೇಳೆ ಇದನ್ನು ಲೈವ್ ಟಿವಿಯಲ್ಲಿಯೂ ತೋರಿಸಲಾಗಿತ್ತು. ಇದು ಭಾರತೀಯ ಕ್ರಿಕೆಟ್‌ನಲ್ಲಿ ವಿಶೇಷ ಕ್ಷಣವಾಗಿತ್ತು. ಈಗ ಅದೇ ಕ್ಷಣ ಮತ್ತೊಮ್ಮೆ ಮರುಕಳಿಸಿದೆ. 'ಜ್ಯಾಕ್ ಮೇಲಿನ ನಮ್ಮ ಪ್ರೀತಿ ಯಾವಾಗಲೂ ಉಳಿಯುತ್ತದೆ' ಎಂದು ಶೀರ್ಷಿಕೆ ಬರೆಯುವ ಮೂಲಕ ಎಸ್‌ಎಸ್‌ಜಿ ಪೋಸ್ಟ್ ಮಾಡಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಜಹೀರ್ ಖಾನ್ ಅವರನ್ನು ಎಲ್‌ಎಸ್‌ಜಿ ಮಾರ್ಗದರ್ಶಕರಾಗಿ ನೇಮಿಸಿತು. ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾದರು. ಹೀಗಾಗಿ ಖಾಲಿ ಉಳಿದಿದ್ದ ಹುದ್ದೆಗೆ ಜಹೀರ್ ಖಾನ್ ಆಯ್ಕೆಯಾಗಿದ್ದಾರೆ. ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೆಕೆಆರ್ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕೆಕೆಆರ್ ಚಾಂಪಿಯನ್ ಆದ ನಂತರ ಗಂಭೀರ್ ಕೆಕೆಆರ್ ತೊರೆದು ಟೀಮ್ ಇಂಡಿಯಾ ತಂಡದ ಹೆಡ್‌ಕೋಚ್ ಆದರು. ಈಗ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಕೆಕೆಆರ್‌ನ ಹೊಸ ಮಾರ್ಗದರ್ಶಕರಾಗಿದ್ದಾರೆ. ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೊದಲ ಪಂದ್ಯ ಮಾರ್ಚ್ 24 ರಂದು ವಿಶಾಖಪಟ್ಟಣದಲ್ಲಿ ಅಕ್ಸರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications