Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rohit Sharma: ಆರ್‌ಸಿಬಿ ಸೇರಲು ರೋಹಿತ್ ಶರ್ಮಾಗೆ ಹೇಳಿದ ಫ್ಯಾನ್; ಹಿಟ್‌ಮ್ಯಾನ್‌ ರಿಯಾಕ್ಷನ್ ಹೀಗಿತ್ತು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೋಚಕ ಘಟ್ಟ ತಲುಪಿದೆ. ಈ ಪಂದ್ಯದ ಮೂರನೇ ದಿನ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೀವಿಸ್ ಪಡೆಗೆ ತಿರುಗೇಟು ನೀಡಿ ಪಂದ್ಯ ಗೆಲ್ಲುವತ್ತ ಹೆಜ್ಜೆ ಹಾಕಿದೆ.

ಬೆಂಗಳೂರು ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಟಾಪ್ ಆರ್ಡರ್‌ ಬ್ಯಾಟಿಂಗ್ ಶೋ ನಡೆದಿದೆ. ಈ ಪಂದ್ಯದ ವೇಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರದ್ದು. ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಯೊಬ್ಬರು ಐಪಿಎಲ್ ಫ್ರಾಂಚೈಸಿ ಆರ್‌ಸಿಬಿಗೆ ಸೇರುವಂತೆ ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

IPL 2025 Fan told Rohit Sharma to join RCB

ರೋಹಿತ್ ವೈರಲ್ ವಿಡಿಯೋ

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ಕ್ಕೆ ಬಿಸಿಸಿಐ ಭರ್ಜರಿ ತಯಾರಿ ನಡೆಸುತ್ತಿದೆ. ಜೊತೆಗೆ ಐಪಿಎಲ್ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಮತ್ತು ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐ ಸಲ್ಲಿಸಬೇಕಾಗಿದೆ. ಇದರ ಮಧ್ಯೆ ರೋಹಿತ್ ಶರ್ಮಾ ಆರ್‌ಸಿಬಿಗೆ ಬರುತ್ತಾರೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ.

ಇದೀಗ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ನಾಯಕಿನಾಗಿ ಮುನ್ನಡೆಸುತ್ತಿರುವ ರೋಹಿತ್ ಶರ್ಮಾ 2025ರ ಐಪಿಎಲ್‌ನಲ್ಲಿ ಯಾವ ತಂಡ ಸೇರಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮೈದಾನದಿಂದ ಹೊರಡುವಾಗ ರೋಹಿತ್ ಅವರಿಗೆ ಅಭಿಮಾನಿಯೊಬ್ಬರು ಐಪಿಎಲ್‌ ಯಾವ ತಂಡಕ್ಕೆ ಸೇರುತ್ತೀರಿ ಎಂದು ಪ್ರಶ್ನೆಯನ್ನು ಕೇಳಿರುವುದು ಎಲ್ಲರಿಗೂ ಕುತೂಹಲ ಮೂಡಿಸಿದೆ.

ಅಭಿಮಾನಿಯೊಬ್ಬರು ರೋಹಿತ್‌ಗೆ 'ಬಾಯ್ ಮುಂಬರುವ ಆವೃತ್ತಿಯಲ್ಲಿ ಯಾವ ಐಪಿಎಲ್ ತಂಡದಲ್ಲಿ ಆಡಲು ಬಯಸುತ್ತಾರೆ ಎಂದು ಪ್ರಶ್ನೆ ಕೇಳಿದ್ದಾರೆ. ರೋಹಿತ್, 'ನಿಮಗೆ ಎಲ್ಲಿ ಬೇಕು?' ಎಂದಾಗ, ಅಭಿಮಾನಿ ತಡ ಮಾಡದೆ 'ಅಣ್ಣ, ಆರ್‌ಸಿಬಿಗೆ ಬನ್ನಿ, ಎಂದಿದ್ದಾರೆ. ಆದರೆ ರೋಹಿತ್ ಯಾವುದೇ ಪ್ರತಿಕ್ರಿಯೆ ನೀಡದೆ ಹೋಗಿದ್ದಾರೆ. ಇದಾದ ನಂತರ ರೋಹಿತ್ ಆರ್‌ಸಿಬಿಗೆ ಬರುತ್ತಾರೆ ಎಂದು ಮೀಮ್‌ಗಳು ಮತ್ತು ಟ್ರೋಲ್‌ಗಳು ಶುರುವಾಗಿವೆ.

ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿದ್ದಾರೆ. ಅಲ್ಲದೆ, ಎಂಎಸ್ ಧೋನಿ ಜೊತೆಗೆ ರೋಹಿತ್ ಕೂಡ ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ. ತಮ್ಮ ನಾಕಯತ್ವದಲ್ಲಿ ಮುಂಬೈಗೆ ಐದು ಪ್ರಶಸ್ತಿಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಆದರೆ ಐಪಿಎಲ್ 2025ರಲ್ಲಿ ಅವರು ಮುಂಬೈ ಇಂಡಿಯನ್ಸ್ ಪರ ಆಡುತ್ತಾರೋ? ಅಥವಾ ಹರಾಜಿಗೆ ಪ್ರವೇಶಿಸುತ್ತಾರೋ? ಎಂಬುದು ಹಿಟ್‌ಮ್ಯಾನ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

ಕಳೆದ ಬಾರಿ ಐಪಿಎಲ್‌ನಲ್ಲಿ ಮುಂಬೈ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಮೂಲಕ ಮಹತ್ವದ ಬದಲಾವಣೆಯನ್ನು ಮಾಡಿತು. ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ಹೊಸ ನಾಯಕ ಎಂದು ಘೋಷಿಸಿತು. ಆದರೆ, ಅವರ ನಾಯಕತ್ವದಲ್ಲಿ ಮುಂಬೈ ತಂಡದ ಪ್ರದರ್ಶನ ತೀರಾ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಿಂದ ಹೊರಗುಳಿದಿತ್ತು.

ಮೂಲಗಳ ಪ್ರಕಾರ, ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳುವ ನಾಲ್ಕು ಪ್ರಮುಖ ಆಟಗಾರರಲ್ಲಿ ರೋಹಿತ್ ಶರ್ಮಾ ಸೇರಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ರೋಹಿತ್ ಜೊತೆಗೆ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಉಳಿಸಿಕೊಳ್ಳಬಹುದು.

Story first published: Sunday, October 20, 2024, 11:25 [IST]
Other articles published on Oct 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+