Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs PBKS IPL Final: ಯಾವ ಪ್ರಶಸ್ತಿ ಯಾರಿಗೆ? ಆರ್‌ಸಿಬಿ ತಂಡಕ್ಕೆ ಎಷ್ಟು ಬಹುಮಾನ ಮೊತ್ತ ಲಭಿಸಿದೆ?

17 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೂ ಆರ್‌ಸಿಬಿ ಕೊನೆಗೊಳಿಸಿದೆ. ಆರ್‌ಸಿಬಿ ಜೂನ್‌ 3 ರಂದು ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ ಫೈನಲ್ ಪಂದ್ಯದಲ್ಲಿ 6 ರನ್‌ಗಳಿಂದ ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಈ ಸಲ ಕಪ್‌ ನಮ್ದೇ ಎಂಬ ಘೋಷವಾಕ್ಯ ಮಂಗಳವಾರ ನಿಜವಾಗಿದೆ. ಆರ್‌ಸಿಬಿ ತಂಡದ ಅಭಿಮಾನಿಗಳು ಮಂಗಳವಾರ ಫುಲ್‌ ಖುಷ್‌ ಆದ್ರು. ಐಪಿಎಲ್‌ನ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮಂಗಳವಾರ ನಡೆದ ಐಪಿಎಲ್‌ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್‌ 20 ಓವರ್ಗೆ 7 ವಿಕೆಟ್‌ ಕಳೆದುಕೊಂಡು 184 ರನ್‌ ಕಲೆ ಹಾಕಿ ಸೋಲು ಕಂಡಿತು. ಯಾರು ಯಾವೆಲ್ಲಾ ಪ್ರಶಸ್ತಿಗಳನ್ನು ಪಡೆದರು. ಯಾರು ಎಷ್ಟು ಹಣವನ್ನು ಪಡೆದಿದ್ದಾರೆ ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌.

IPL 2025 Final Who Took Home the Awards and Prize Money


ಆರ್‌ಸಿಬಿ, ಪಂಜಾಬ್‌ ಫೈನಲ್‌ ಪಂದ್ಯದ ಪ್ರಶಸ್ತಿಗಳು

ಕರ್ವ್ ಸೂಪರ್‌ ಸ್ಟ್ರೈಕರ್‌ ಆಫ್‌ ದಿ ಮ್ಯಾಚ್‌: ಜಿತೇಶ್‌ ಶರ್ಮಾ
ಫ್ಯಾಟಸಿ ಕಿಂಗ್: ಶಶಾಂಕ್‌ ಸಿಂಗ್
ಮೋಸ್ಟ್‌ ಸಿಕ್ಸರ್‌: ಶಶಾಂಕ್‌ ಸಿಂಗ್ (ಪಂಜಾಬ್)
ಮೋಸ್ಟ್ ಫೋರ್‌: ಪ್ರಿಯಾಂಶ್ ಆರ್ಯ (ಪಂಜಾಬ್)
ಮೋಸ್ಟ್‌ ಡಾಟ್‌ ಬೌಲ್‌: ಕೃನಾಲ್‌ ಪಾಂಡ್ಯ, (ಆರ್‌ಸಿಬಿ)
ಪ್ಲೇ ಅಫ್‌ ದಿ ಮ್ಯಾಚ್‌: ಕೃನಾಲ್‌ ಪಾಂಡ್ಯ, (ಆರ್‌ಸಿಬಿ)


ಐಪಿಎಲ್‌ 2025ರ ಆವೃತ್ತಿಯ ಪ್ರಶಸ್ತಿಗಳು ಹಾಗೂ ಮೊತ್ತ

ಎಮರ್ಜಿಂಗ್‌ ಪ್ಲೇಯರ್ ಆಫ್‌ ದಿ ಸೀಸನ್‌: ಸಾಯಿ ಸುದರ್ಶನ್‌ (₹10 ಲಕ್ಷ)
ಕರ್ವ ಸೂಪರ್ ಸ್ಟಾರ್‌ ಸ್ಟ್ರೈಕರ್‌ ಆಫ್‌ ದಿ ಸೀಸನ್‌: ವೈಭವ್ ಸೂರ್ಯವಂಶಿ (ಕಾರ್‌)
ಮೈ 11 ಸರ್ಕಲ್‌ ಫ್ಯಾನ್ಟಸಿ ಕಿಂಗ್‌ ಆಫ್‌ ದಿ ಸೀಸನ್‌: ಸಾಯಿ ಸುದರ್ಶನ್‌ (₹10 ಲಕ್ಷ)
ಆಂಜಲ್‌ ಮೋಸ್ಟ್‌ ಸಿಕ್ಸಸ್‌ ಆಫ್‌ ದಿ ಸೀಸನ್‌: ನಿಕಲೋಸ್ ಪೂರನ್ (₹10 ಲಕ್ಷ)
ರೂಪಿ ಒನ್ ದಿ ಗೋ ಮೋಸ್ಟ್‌ ಪೋರ್ ಆಫ್‌ ದಿ ಸೀಸನ್‌: ಸಾಯಿ ಸುದರ್ಶನ್‌ (₹10 ಲಕ್ಷ)
ಮೋಸ್ಟ್ ಡಾಟ್ ಬಾಲ್‌ ಆಫ್‌ ದಿ ಸೀಸನ್‌: ಮೊಹಮ್ಮದ್‌ ಸಿರಾಜ್ (₹10 ಲಕ್ಷ)
ಕ್ಯಾಚ್ ಆಫ್‌ ದಿ ಸೀಸನ್‌: ಕಮಿಂದು ಮೆಂಡೀಸ್ (₹10 ಲಕ್ಷ)
ಬೆಸ್ಟ್ ಗ್ರೌಂಡ್‌: ಡೆಲ್ಲಿ ಹಾಗೂ ಡಿಸ್ಟ್ರಿಕ್ಟ್‌ ಕ್ರಿಕೆಟ್‌ ಅಸೋಸಿಯೇಷನ್‌ (₹50 ಲಕ್ಷ)
ಫೈರ್ ಪ್ಲೇ ಆವರ್ಡ್‌: ಚೆನ್ನೈ ಸೂಪರ್ ಕಿಂಗ್ಸ್‌
ಪರ್ಪಲ್‌ ಕ್ಯಾಪ್: ಪ್ರಸಿದ್ಧ್ ಕೃಷ್ಣ, (₹10 ಲಕ್ಷ),
ಆರೆಂಜ್‌ ಕ್ಯಾಪ್‌: ಸಾಯಿ ಸುದರ್ಶನ್‌ (₹10 ಲಕ್ಷ)
ಎಂವಿಪಿ: ಸೂರ್ಯಕುಮಾರ್‌ ಯಾದವ್ (₹15 ಲಕ್ಷ)
ರನ್ನರ್‌ ಅಪ್‌: ಪಂಜಾಬ್ ಕಿಂಗ್ಸ್ (₹12.5 ಕೋಟಿ)
ವಿನ್ನರ್‌: ಆರ್‌ಸಿಬಿ (₹20 ಕೋಟಿ)

Story first published: Wednesday, June 4, 2025, 3:13 [IST]
Other articles published on Jun 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+