Ipl Playoffs: ರೋಚಕತೆ ಹೆಚ್ಚಿಸಿದೆ ಪ್ಲೇ ಆಫ್ ಲೆಕ್ಕಾಚಾರ: ಯಾರಿಗೆ ಎಷ್ಟಿದೆ ಚಾನ್ಸ್? ರೇಸ್‌ನಲ್ಲಿ 7 ತಂಡಗಳು
ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಹಂತವನ್ನು ತಲುಪಿದೆ. ಈಗ ಎಲ್ಲ ತಂಡಗಳು ಪ್ಲೇ ಅಫ್ ಲೆಕ್ಕಾಚಾರವನ್ನು ಆರಂಭಿಸಿವೆ. ಲೀಗ್ ಹಂತದಲ್ಲಿ ಬಹುತೇಕ ತಂಡಗಳು ಇನ್ನು 3 ಪಂದ್ಯಗಳನ್ನು ಆಡಲಿವೆ. ಈ ವೇಳೆ 2 ತಂಡಗಳು ಪ್ಲೇ ಆಫ್‌ಗೆ ಪ್ರವೇಶಿಸುವುದು ಫಿಕ್ಸ್ ಆದಂತೆ ಆಗಿದೆ. ಉಳಿದ 2 ಸ್ಥಾನಕ್ಕಾಗಿ ಐದು ತಂಡಗಳ ನಡುವೆ ಬಿಗ್ ಫೈಟ್ ನಡೆಯಲಿದೆ. ಹಾಗಿದ್ದರೆ ಪ್ಲೇ ಆಫ್ ಸಮೀಕರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿದೆ. ಈ ಬಾರಿ ಆಡಿದ 11 ಪಂದ್ಯಗಳಲ್ಲಿ 8 ಜಯ ದಾಖಲಿಸಿದ್ದು 16 ಅಂಕಗಳನ್ನು ಕಲೆ ಹಾಕಿದೆ. ಇನ್ನು ಈ ತಂಡ ಪ್ಲೇ ಆಫ್‌ಗೆ ಅಧಿಕೃತವಾಗಿ ಅರ್ಹತೆ ಪಡೆದಿಲ್ಲ. ಆದರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವುದು ಕನ್ಫರ್ಮ್. ಕಾರಣ ಹಿಂದಿನ ಆವೃತ್ತಿಗಳಲ್ಲಿ 16 ಅಂಕಗಳನ್ನು ಕಲೆ ಹಾಕಿರುವ ತಂಡಗಳೆಲ್ಲಾ ಪ್ಲೇ ಆಫ್ ಪ್ರವೇಶಿಸಿದ್ದವು. ಆರ್‌ಸಿಬಿ ಈಗ ಎಷ್ಟನೇ ಸ್ಥಾನವನ್ನು ಪಡೆಯುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈಗಿನ ಪ್ರದರ್ಶನವನ್ನು ನೋಡಿದರೆ, ಆರ್‌ಸಿಬಿ ಅಗ್ರ ಎರಡು ಸ್ಥಾನದಲ್ಲಿ ಒಂದು ಸ್ಥಾನ ಪಡೆಯಬಹುದಾಗಿದೆ.

ಮುಂಬೈ ಪ್ರಬಲ ಸ್ಪರ್ಧಿ
ಪ್ಲೇ ಆಫ್ ರೇಸ್ ಪ್ರಬಲ ಸ್ಪರ್ಧಿ ಮುಂಬೈ ಇಂಡಿಯನ್ಸ್ ಈ ತಂಡದ ಬುಟ್ಟಿಯಲ್ಲಿ 14 ಅಂಕಗಳಿವೆ. ಆದರೆ ಈ ತಂಡ ನೀಡುತ್ತಿರುವ ಪ್ರದರ್ಶನ ಇವರನ್ನು ಮುಂದಿನ ಹಂತಕ್ಕೆ ತಂದು ನಿಲ್ಲಿಸಿದೆ. ಆರಂಭಿಕ 5 ಪಂದ್ಯಗಳಲ್ಲಿ ಕೇವಲ 1 ಜಯ ದಾಖಲಿಸಿದ್ದ ಮುಂಬೈ, ನಂತರ ಸ್ಥಿರ ಪ್ರದರ್ಶನ ನೀಡಿ ಸತತ 6 ಗೆಲುವು ದಾಖಲಿಸಿದೆ. ಅಲ್ಲದೆ ಈ ತಂಡದ ಪ್ಲಸ್ ಪಾಯಿಂಟ್ ಎಂದರೆ ಈ ತಂಡದ ರನ್ ರೇಟ್. ಮುಂಬೈ 1.274 ರನ್ ರೇಟ್ ಹೊಂದಿದ್ದು, ಪ್ರಸಕ್ತ ಐಪಿಎಲ್‌ನಲ್ಲಿ ಇಷ್ಟೊಂದು ರನ್ ರೇಟ್ ಯಾವುದೇ ತಂಡ ಹೊಂದಿಲ್ಲ. ಹೀಗಾಗಿ ಮುಂದಿನ ಮೂರು ಪಂದ್ಯಗಳಲ್ಲಿ ಮುಂಬೈ ಒಂದು ಗೆದ್ದರೂ ಸಹ ಪ್ಲೇ ಆಫ್ ಪ್ರವೇಶಿಸುವುದು ಖಚಿತ.
2 ಸ್ಥಾನಕ್ಕಾಗಿ 5 ತಂಡಗಳ ಫೈಟ್
ಸದ್ಯದ ಪಾಯಿಂಟ್ಸ್ ಟೇಬಲ್ ನೋಡಿದ್ರೆ, ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ 15 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ ನೆಟ್ ರನ್‌ರೇಟ್ ಕೊಂಚ ಕಡಿಮೆ ಇದೆ. ಪಂಜಾಬ್ ಸಹ ಮುಂದಿನ ಮೂರು ಪಂದ್ಯಗಳಲ್ಲಿ ಕನಿಷ್ಠ ಒಂದನ್ನು ಗೆದ್ದರೂ ಪ್ಲೇ ಆಫ್ ಪ್ರವೇಶಿಸಬಹುದಾಗಿದೆ.
ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸಹ ಪ್ಲೇ ಆಫ್ ರೇಸ್‌ನಲ್ಲಿವೆ. ಅಲ್ಲದೆ ಎಲ್‌ಎಸ್‌ಜಿ ಹಾಗೂ ಕೆಕೆಆರ್ ತಂಡಗಳು ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ರೆ ಪ್ಲೇ ಆಫ್ ಹಾದಿ ಸುಗಮವಾಗುತ್ತದೆ. ಹೀಗಾಗಿ 2 ಸ್ಥಾನಕ್ಕಾಗಿ ಐದು ತಂಡಗಳು ಫೈಟ್ ನಡೆಸುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications