ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಟೂರ್ನಿಯ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳಿಂದ ಹೊರಬೀಳಲಿರುವ ಆಟಗಾರರ ಸಂಪೂರ್ಣ ಚಿತ್ರಣವು ಗುರುವಾರ ಅಂದರೆ ಅಕ್ಟೋಬರ್ 31 ರಂದು ಸ್ಪಷ್ಟವಾಗಿ ತಿಳಿಯಲಿದೆ. ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿಯ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಯಿಂದ ದೂರವಾಗಲು ನಿರ್ಧರಿಸಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಲಕ್ನೋ ತಂಡ ಸಿದ್ಧವಾಗಿತ್ತು. ಆದರೆ ರಾಹುಲ್ ತಂಡದಿಂದ ಬೇರೆಯಾಗಲು ಮುಂದಾಗಿದ್ದಾರೆ. ವೈಯಕ್ತಿಕ ಮತ್ತು ವೃತ್ತಿಪರ ಕಾರಣಗಳಿಗಾಗಿ ರಾಹುಲ್ ಲಕ್ನೋ ತಂಡ ತೊರೆಯುತ್ತಿದ್ದಾರೆ.

ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರ ಬರುತ್ತಿರುವ ಕೆಎಲ್ ರಾಹುಲ್ ಮೇಲೆ ನಾಲ್ಕು ಫ್ರಾಂಚೈಸಿಗಳು ಕಣ್ಣಿಟ್ಟಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಗುಜರಾತ್ ಟೈಟಾನ್ಸ್ (ಜಿಟಿ), ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೆಎಲ್ ರಾಹುಲ್‌ಗೆ ಸಹಿ ಹಾಕಲು ಆಸಕ್ತಿ ತೋರಿಸಿವೆ. ಮೆಗಾ ಹರಾಜಿನ ಮೊದಲು ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 18 ಕೋಟಿ ರೂ.ಗೆ ಕೊನೆಯದಾಗಿ ಸಹಿ ಹಾಕಿತ್ತು. ಇದಾದ ನಂತರ ಕೆಎಲ್ ರಾಹುಲ್ ಲಕ್ನೋ ಫ್ರಾಂಚೈಸಿಯ ನಾಯಕರಾಗಿ 3 ಆವೃತ್ತಿಗಳಲ್ಲಿ 2 ಬಾರಿ ತಂಡವನ್ನು ಪ್ಲೇ ಆಫ್‌ಗೆ ಕರೆದೊಯ್ದಿದ್ದರು.
ಇತ್ತೀಚಿನ ವರದಿಯ ಪ್ರಕಾರ, ಕೆಎಲ್ ರಾಹುಲ್ ವೈಯಕ್ತಿಕ ಮತ್ತು ವೃತ್ತಿಪರ ಕಾರಣಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತೊರೆಯಲು ನಿರ್ಧರಿಸಿದ್ದಾರೆ. ರಾಹುಲ್ ಅವರನ್ನು ಉಳಿಸಿಕೊಳ್ಳುವುದು ಲಕ್ನೋ ಫ್ರಾಂಚೈಸಿಗೆ ಮೊದಲ ಆಯ್ಕೆಯಾಗಿದ್ದಾರೆ. ಇದರ ಹೊರತಾಗಿಯೂ ರಾಹುಲ್ ತಂಡ ಬೇರೆಯಾಗಲು ನಿರ್ಧರಿಸಿದ್ದಾರೆ. ಈ ಬಗ್ಗೆ ಲಕ್ನೋ ಸೂಪರ್ ಜೈಂಟ್ಸ್‌ನಿಂದ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಐಪಿಎಲ್ 2025ರ ಹರಾಜಿನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದು, ಅವರು ಅನೇಕ ಫ್ರಾಂಚೈಸಿಗಳನ್ನು ಆಕರ್ಷಿಸುತ್ತಿದ್ದಾರೆ. ರಾಹುಲ್ ಅವರನ್ನಿ ಬಿಡ್ ಮಾಡಲು ನಾಲ್ಕು ಫ್ರಾಂಚೈಸಿಗಳು ಸಿದ್ಧತೆ ನಡೆಸಿವೆ. ಈ ಪೈಕಿ ಆರ್‌ಸಿಬಿ, ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸಿಎಸ್‌ಕೆ ಮುಂಚೂಣಿಯಲ್ಲಿವೆ. ಎಲ್ಲಾ ನಾಲ್ಕು ತಂಡಗಳು ಹರಾಜಿನಲ್ಲಿ ಅವರನ್ನು ಬಿಡ್ ಮಾಡುವ ನಿರೀಕ್ಷೆಯಿದೆ. ಆದರೆ ರಾಹುಲ್ ಯಾವ ತಂಡ ಸೇರುತ್ತಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.