For Quick Alerts
ALLOW NOTIFICATIONS  
For Daily Alerts
 

GT Retention: ರಶೀದ್‌ ಖಾನ್‌ ಮೊದಲ ಆಯ್ಕೆಯ ಆಟಗಾರ: ಶಮಿಗೆ ಇಲ್ಲ ಸ್ಥಾನ

ಐಪಿಎಲ್‌ ರಿಟೇನ್ಷನ್‌ ಲೀಸ್ಟ್‌ ನೀಡಲು ಅಕ್ಟೋಬರ್‌ 31 ಕೊನೆಯ ದಿನವಾಗಿತ್ತು. ಐಪಿಎಲ್‌ 10 ತಂಡಗಳ ಮಾಲೀಕರು ತಾವು ಉಳಿಸಿಕೊಂಡ ಆಟಗಾರರು, ಕೈ ಬಿಟ್ಟ ಆಟಗಾರರನ್ನು ಬಿಸಿಸಿಐಗೆ ನೀಡಿದ್ದಾರೆ. ಗುಜರಾತ್ ಟೈಟಾನ್ಸ್‌ ಸಹ ಆಟಗಾರರ ಕ್ಷಮತೆಯ ಆಧಾದ ಮೇಲೆ ಮಣೆ ಹಾಕಿದೆ.

ಕಳೆದ ಆವೃತ್ತಿಯ ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡ್ ಆಗಿದ್ದ ನಾಯಕ ಹಾರ್ದಿಕ್ ಪಾಂಡ್ಯ, ಅವರ ಅನುಪಸ್ಥಿತಿಯಲ್ಲಿ ಶುಭಮನ್‌ ಗಿಲ್ ತಂಡವನ್ನು ಮುನ್ನಡೆಸಿದ್ದರು. ಇವರನ್ನು ಗುಜರಾತ್ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಆದರೆ ಇವರಿಗೆ ಎರಡನೇ ಆಯ್ಕೆಯ ಆಟಗಾರನ ಪಟ್ಟ ಸಿಕ್ಕಿದೆ. ನಿರೀಕ್ಷೆಯಂತೆ ಅಫ್ಘಾನಿಸ್ತಾನ ತಂಡದ ರಾಶೀದ್ ಖಾನ್‌ ಅವರನ್ನು ಉಳಿಸಿಕೊಳ್ಳಲಾಗಿದ್ದು, ಇವರಿಗೆ ತಂಡ ಮೊದಲ ಆಯ್ಕೆಯ ಆಟಗಾರನ ಪಟ್ಟ ನೀಡಿದೆ.

IPL 2025 GT Retention Uncapped Players GT Strategy Player Choices and Shubman Gill s Value

ತಾನಾಡಿದ ಮೊದಲ ಆವೃತ್ತಿಯಲ್ಲೇ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಗುಜರಾತ್‌ ಟೈಟಾನ್ಸ್‌ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ತಂಡದ ನಾಯಕ ಶುಭಮನ್‌ ಗಿಲ್‌ ಅವರನ್ನು ಉಳಿಸಿಕೊಳ್ಳುವಲ್ಲಿ ಗುಜರಾತ್ ಸಫಲವಾಗಿದೆ. ಆದರೆ ಇವರು ಎರಡನೇ ಆಯ್ಕೆಯ ಆಟಗಾರ ಆಗಿದ್ದಾರೆ.

ಗುಜರಾತ್‌ ತನ್ನ ಮೊದಲ ಆಯ್ಕೆಯ ಆಟಗಾರನಾಗಿ ರಶೀದ್ ಖಾನ್‌ ಅವರನ್ನು ಉಳಿಸಿಕೊಂಡಿದೆ. ಇವರಿಗೆ ತಂಡ 18 ಕೋಟಿ ನೀಡಲು ಮುಂದಾಗಿದೆ. ಉಳಿದಂತೆ ಶುಭಮನ್‌ ಗಿಲ್‌ ಅವರಿಗೆ 16.5 ಕೋಟಿ ನೀಡಲು ಜಿಟಿ ತಯಾರಾಗಿದೆ. ಅಲ್ಲದೆ ಸಾಯ್ ಸುದರ್ಶನ್‌ 8.5 ಕೋಟಿ ರೂ.ಗೆ ಗುಜರಾತ್‌ ತಂಡದಲ್ಲಿ ಉಳಿಯುತ್ತಾರೆ. ಉಳಿದಂತೆ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಶಾರೂಖ್‌ ಖಾನ್‌ ಹಾಗೂ ರಾಹುಲ್ ತೆವಾಟಿಯಾ ಅವರನ್ನು ತಂಡ ಉಳಿಸಿಕೊಂಡಿದೆ.

ರಶೀದ್ ಖಾನ್ ತಮ್ಮ ಬಿಗುವಿನ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳಿಗೆ ಖೆಡ್ಡಾ ತೋಡುವ ಪ್ಲೇಯರ್ ರಶೀದ್ ಖಾನ್‌ ಅವರಿಗೆ 18 ಕೋಟಿ ನೀಡಿ ತಂಡದಲ್ಲಿ ಸ್ಥಾನ ನೀಡಲಾಗಿದೆ. ನಾಯಕ ಶುಭ್‌ಮನ್ ಗಿಲ್ 16.5 ಕೋಟಿ ರೂ., ಸಾಯಿ ಸುದರ್ಶನ್ ಅವರನ್ನು 8.5 ಕೋಟಿ ರೂ.ಗೆ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಅನ್‌ ಕ್ಯಾಪ್ಡ್‌ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಅವರಿಗೆ 4 ಕೋಟಿ ರೂ. ನೀಡಿದೆ.

ಶಮಿಗೆ ಇಲ್ಲ ಸ್ಥಾನ

ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ ಅವರಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಇವರನ್ನು ಹರಾಜು ಅಂಗಳಕ್ಕೆ ರಿಲೀಸ್ ಮಾಡಲಾಗಿದೆ. ಶಮಿ ಗಾಯದಿಂದ ಚೇತರಿಸಿಕೊಂಡಿದ್ದು, ಅವರ ಫಿಟ್ನೆಸ್‌ ಬಗ್ಗೆ ಪ್ರಶ್ನೆಗಳು ಎದ್ದಿವೆ. ಹೀಗಾಗಿ ಅವರನ್ನು ಕೈ ಬಿಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡ 14 ಪಂದ್ಯಗಳಲ್ಲಿ 5ರಲ್ಲಿ ಮಾತ್ರ ಗೆದ್ದಿದ್ದರೆ, 7ರಲ್ಲಿ ಸೋಲು ಅನುಭವಿಸಬೇಕಾಯಿತು. ಹೀಗಾದರೂ ಫ್ರಾಂಚೈಸಿ ತನ್ನ ಇಬ್ಬರು ದೊಡ್ಡ ಸ್ಟಾರ್‌ ಆಟಗಾರರ ಮೇಲೆ ನಂಬಿಕೆ ಉಳಿಸಿಕೊಂಡಿದೆ. ನಾಯಕ ಶುಭಮನ್ ಗಿಲ್ ಮತ್ತು ರಶೀದ್ ಖಾನ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಗುಜರಾತ್ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರು ಇದ್ದು ಹರಾಜಿನ ವೇಳೆ ಕಾಣಿಸಿಕೊಳ್ಳಲಿದ್ದಾರೆ.

ಗುಜರಾತ್ ಟೈಟಾನ್ಸ್ ಉಳಿಸಿಕೊಂಡ ಆಟಗಾರರು: ಶುಭಮನ್ ಗಿಲ್, ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್.

Story first published: Thursday, October 31, 2024, 18:15 [IST]
Other articles published on Oct 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+