Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಹಾರ್ದಿಕ್ ಪಾಂಡ್ಯಗೆ ಮತ್ತೊಮ್ಮೆ ಶಿಕ್ಷೆ ವಿಧಿಸಿದ ಬಿಸಿಸಿಐ

ಶನಿವಾರ ನಡೆದ ಐಪಿಎಲ್ 2025 ರ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ 36 ರನ್‌ಗಳಿಂದ ಸೋಲಿಸಿತು. ಮುಂಬೈ ಇಂಡಿಯನ್ಸ್ ಐಪಿಎಲ್ 2025 ರ ಸೀಸನ್‌ನ ತನ್ನ ಎರಡೂ ಆರಂಭಿಕ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನ ದುಃಖದ ನಡುವೆ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಇದ್ದಕ್ಕಿದ್ದಂತೆ ಒಂದು ಕೆಟ್ಟ ಸುದ್ದಿ ಬಂದಿದೆ. ಹಾರ್ದಿಕ್ ಪಾಂಡ್ಯ ಮಾಡಿದ ಒಂದು ತಪ್ಪಿನಿಂದಾಗಿ 12 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್‌ಗಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ 12 ಲಕ್ಷ ರೂ.ಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದಂಡ ವಿಧಿಸಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಪರ ಹಾರ್ದಿಕ್ ಪಾಂಡ್ಯ ಒಬ್ಬರೇ ಶಿಕ್ಷೆ ಅನುಭವಿಸಬೇಕಾಗಿದೆ. ಈ ಕುರಿತು ಐಪಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

IPL 2025 GT vs MI Hardik Pandya fined Rs 12 lakh for slow over-rate

ಐಪಿಎಲ್ 2025 ರ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡದ ಮೊದಲ ಅಪರಾಧ ಇದಾಗಿದೆ. ಐಪಿಎಲ್ ನೀತಿ ಸಂಹಿತೆಯ ನಿಯಮ 2.2 ರ ಅಡಿಯಲ್ಲಿ ನಿಧಾನಗತಿಯ ಓವರ್ ದರಕ್ಕೆ ಸಂಬಂಧಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಾಂಡ್ಯ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಗುಜರಾತ್ ಟೈಟಾನ್ಸ್ 196 ರನ್‌ಗಳನ್ನು ಗಳಿಸಿತು. ಗುರಿಯನ್ನು ಬೆನ್ನಟ್ಟಲು ಕಷ್ಟಪಟ್ಟ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.

ಐಪಿಎಲ್ 2024 ರ ಕೊನೆಯ ಪಂದ್ಯದಲ್ಲಿಯೂ ಹಾರ್ದಿಕ್ ಪಾಂಡ್ಯ ಇದೇ ತಪ್ಪನ್ನು ಮಾಡಿದ್ದರು. ಹೀಗಾಗಿ ಐಪಿಎಲ್ 2025 ರ ಮೊದಲ ಪಂದ್ಯದಲ್ಲಿ ಅವರು ಆಡುವುದನ್ನು ನಿಷೇಧ ಮಾಡಲಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು.

ಗುಜರಾತ್ ಟೈಟಾನ್ಸ್ ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ತಮ್ಮ ಮೊದಲ ಗೆಲುವು ದಾಖಲಿಸಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಸತತ ಎರಡನೇ ಸೋಲಾಗಿದ್ದು, ತಂಡ ಇನ್ನೂ ಅಂಕಗಳ ಖಾತೆಯನ್ನು ತೆರೆದಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನ ನಂತರ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ತಂಡವು ಬಹಳಷ್ಟು ತಪ್ಪುಗಳನ್ನು ಮಾಡಿದೆ.

ಪಂದ್ಯದ ನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಮ್ಮಿಂದ ಕೆಲವು ತಪ್ಪುಗಳಾಗಿವೆ. ನಾವು ಮೈದಾನದಲ್ಲಿ ಹೆಚ್ಚು ವೃತ್ತಿಪರರಾಗಿರಲಿಲ್ಲ, ಇದರಿಂದಾಗಿ ನಾವು ಬಹುಶಃ 20-25 ರನ್‌ಗಳನ್ನು ಕಳೆದುಕೊಂಡಿದ್ದೇವೆ. ಟೈಟಾನ್ಸ್ ಆರಂಭಿಕರು ಪವರ್‌ಪ್ಲೇನಲ್ಲಿ ಸರಿಯಾದ ಕೆಲಸ ಮಾಡಿದರು. ಅವರು ಹೆಚ್ಚು ಅಪಾಯಕಾರಿ ಹೊಡೆತಗಳನ್ನು ಆಡಲಿಲ್ಲ. ಅವರು ಹೆಚ್ಚು ರನ್ ಗಳಿಸಿದರು, ಅದು ನಮ್ಮನ್ನು ಹಿನ್ನಡೆಗೆ ತಳ್ಳಿತು ಎಂದು ಸೋಲಿನ ಬಗ್ಗೆ ಹೇಳಿದ್ದರು.

Story first published: Sunday, March 30, 2025, 15:09 [IST]
Other articles published on Mar 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+