Virat Kohli: ಫೀಲ್ಡಿಂಗ್ ವೇಳೆ ವಿರಾಟ್ ಕೊಹ್ಲಿಗೆ ಗಾಯ; ಆರ್‌ಸಿಬಿ ತಂಡಕ್ಕೆ ಸಂಕಷ್ಟ
ಬುಧವಾರ ನಡೆದ ಐಪಿಎಲ್ 2025 ರ 14ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗುಜರಾತ್ ಟೈಟಾನ್ಸ್ 13 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದ ವೇಳೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಾಗ ಅಭಿಮಾನಿಗಳಲ್ಲಿ ಆತಂಕದ ಅಲೆ ಹರಡಿತು. ಡೀಪ್ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ವಿರಾಟ್ ಕೊಹ್ಲಿ ಬೆರಳಿಗೆ ಗಾಯವಾಯಿತು. ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು.
ಗುಜರಾತ್ ಟೈಟಾನ್ಸ್ ತಂಡದ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಎಸೆತದಲ್ಲಿ ಸಾಯಿ ಸುದರ್ಶನ್ ಬಲವಾಗಿ ಸ್ವೀಪ್ ಮಾಡಿದರು. ವಿರಾಟ್ ಕೊಹ್ಲಿ ಡೀಪ್ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ವಿಚಿತ್ರವಾಗಿ ಜಾರಿ ಅವರ ಬಲಗೈಗೆ ಬಡಿದು ಬೌಂಡರಿಯ ಆಚೆ ಹೋಯಿತು.

ಇದಾದ ನಂತರ, ವಿರಾಟ್ ಕೊಹ್ಲಿ ತಕ್ಷಣ ಮೊಣಕಾಲುಗಳ ಮೇಲೆ ಕುಳಿತು ಗಾಯಗೊಂಡ ಬೆರಳನ್ನು ಹಿಡಿದುಕೊಂಡರು. ಕ್ರೀಡಾಂಗಣದಲ್ಲಿ ಸ್ವಲ್ಪ ಸಮಯದವರೆಗೆ ಮೌನ ಆವರಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಬಂದು ವಿರಾಟ್ ಕೊಹ್ಲಿ ಅವರ ಬೆರಳನ್ನು ಪರೀಕ್ಷಿಸಿತು. ವಿರಾಟ್ ಕೊಹ್ಲಿ ನೋವಿನಿಂದ ನರಳುತ್ತಿದ್ದರೂ, ಆಟ ಮುಂದುವರಿಸಲು ಸಾಧ್ಯವಾಯಿತು. ಈ ವೇಳೆ ವಿರಾಟ್ ಕೊಹ್ಲಿ ಮತ್ತೆ ಮತ್ತೆ ಬೆರಳುಗಳನ್ನು ಬಗ್ಗಿಸುತ್ತಿದ್ದರು.
ವಿರಾಟ್ ಕೊಹ್ಲಿ ಗಾಯದ ತೀವ್ರತೆ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಅಭಿಮಾನಿಗಳು ಅವರು ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಗಾಯವು ಟೂರ್ನಿಯ ಉಳಿದ ಪಂದ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಗಳು ಹೇಳಿವೆ. ಆದರೆ ಆರ್‍ಸಿಬಿ ತಂಡದಿಂದ ಯಾವುದೇ ಮಾಹಿತಿ ಹೊರ ಬಂದಿಲ್ಲ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳಪೆ ಆರಂಭ ಕಂಡಿತು. ವಿರಾಟ್ ಕೊಹ್ಲಿ 6 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು. ಅರ್ಷದ್ ಖಾನ್ ಅವರು ವಿರಾಟ್ ಕೊಹ್ಲಿ ಔಟಾ ಮಾಡುವಲ್ಲಿ ಯಶಸ್ವಿಯಾದರು. ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಅವರು 4 ಓವರ್‌ಗಳಲ್ಲಿ 19 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.
ವಿರಾಟ್ ಕೊಹ್ಲಿ ಗಾಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹೊಡೆತವಾಗಬಹುದು. ತಂಡದ ಯಶಸ್ಸಿಗೆ ವಿರಾಟ್ ಕೊಹ್ಲಿ ಅವರ ಫಾರ್ಮ್ ಮತ್ತು ಫಿಟ್ನೆಸ್ ಮುಖ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications