ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿಯಾಗಿದೆ. ಈ ಮೆಗಾ ಟೂರ್ನಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದು, 2008 ರಲ್ಲಿ ಪ್ರಾರಂಭವಾದಾಗಿನಿಂದ ಐಪಿಎಲ್‌ನಲ್ಲಿ ವಿಶ್ವದ ಕೆಲವು ರೋಚಕ ಪಂದ್ಯಗಳು ನಡೆದಿವೆ. ಅಲ್ಲದೆ, ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಸ್ಕೋರ್ ಗಳಿಸಲು ಕೂಡ ಐಪಿಎಲ್ ವೇದಿಕೆಯಾಗಿದೆ. ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ 10 ಫ್ರಾಂಚೈಸಿ ತಂಡಗಳ ಪರ ಆಡುವ ಸ್ಟಾರ್ ಆಟಗಾರರು ಗರಿಷ್ಠ ಸ್ಕೋರ್ ಪೇರಿಸುವ ಮೂಲಕ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿದ್ದಾರೆ.
ಐಪಿಎಲ್‌ನಲ್ಲಿ ಹೆಚ್ಚಿನ ರನ್‌ಗಳ ಮೊತ್ತವನ್ನು ಕಲೆ ಹಾಕುವುದು ಅಸಾಮಾನ್ಯವಲ್ಲ. ಹೀಗಾಗಿ ಕೆಲವು ತಂಡಗಳು 200 ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಲು ವಿಫಲವಾದರೆ, ಆ ತಂಡವನ್ನು ಕಳಪೆ ಪ್ರದರ್ಶನ ನೀಡಿದ ತಂಡ ಎನ್ನಲಾಗುತ್ತದೆ. ಆದರೆ ಕೆಲವೊಮ್ಮೆ ತಂಡಗಳು ಒಂದು ಹಂತಕ್ಕೆ ಏರಿ ಬೃಹತ್ ಮೊತ್ತವನ್ನು ಕಲೆ ಹಾಕತ್ತವೆ.

ಐಪಿಎಲ್‌ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ ಮತ್ತು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಗಳು ಬ್ಯಾಟಿಂಗ್ ಮಾಡಲು ಅದ್ಭುತ ಪಿಚ್‌ಗಳಾಗಿದ್ದು, ಬೌಲರ್‌ಗಳಿಗೆ ಕಂಟಕವಾಗಿವೆ. ಅನೇಕ ತಂಡಗಳು ಇಂತಹ ಕ್ರೀಡಾಂಗಣಗಳಲ್ಲಿ 200 ರನ್‌ಗಳಿಗಿಂತ ಹೆಚ್ಚಿನ ಗುರಿಗಳನ್ನು ಬೆನ್ನಟ್ಟಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಕೂಡ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್‌ಗಳನ್ನು ಕಲೆ ಹಾಕುವ ಮೂಲಕ ದಾಖಲೆ ಮಾಡಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಸನ್‌ರೈಸರ್ಸ್ ಹೈದರಾಬಾದ್ (287/3)
ಐಪಿಎಲ್‌ನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ದಾಖಲೆ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡದ ಹೆಸರಿನಲ್ಲಿದೆ. ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಎಸ್‌ಆರ್‌ಹೆಚ್ ತಂಡ ಮೂರು ವಿಕೆಟ್ ನಷ್ಟಕ್ಕೆ 287 ರನ್ ಗಳಿಸುವ ಮೂಲಕ ತನ್ನದೇ ಆದ ಅತ್ಯಧಿಕ ಐಪಿಎಲ್ ಮೊತ್ತದ ದಾಖಲೆಯನ್ನು ಮುರಿದಿತ್ತು.
ಸನ್‌ರೈಸರ್ಸ್ ಹೈದರಾಬಾದ್ (277/3)
ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಕೇವಲ 3 ವಿಕೆಟ್‌ಗಳ ನಷ್ಟಕ್ಕೆ 277 ರನ್ ಗಳಿಸುವ ಮೂಲಕ ಆರ್‌ಸಿಬಿ ಹೆಸರಿನಲ್ಲಿದ್ದ ಗರಿಷ್ಠ ರನ್ ದಾಖಲೆಯನ್ನು ಮುರಿದಿತ್ತು. ಇದು ಆರ್‌ಸಿಬಿ ಎದುರು 287 ರನ್ ಗಳಿಸುವ ಮುನ್ನ ಎಸ್‌ಆರ್‌ಹೆಚ್ ಈ ದಾಖಲೆ ಮಾಡಿತ್ತು. ಆರ್‌ಸಿಬಿ ಹೆಸರಿನಲ್ಲಿ 263 ಗರಿಷ್ಠ ರನ್ ದಾಖಲಾಗಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್ (272/7)
ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡದ ದಾಖಲೆಯನ್ನು ಸರಿಗಟ್ಟುವ ಹಂತಕ್ಕೆ ತಲುಪಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ಆದರೆ ಸನ್ ರೈಸರ್ಸ್ ಹೈದರಾಬಾದ್ ದಾಖಲೆಯನ್ನು ಕೆಕೆಆರ್ ಸರಿಗಟ್ಟಲು ಸಾಧ್ಯವಾಗಿರಲಿಲ್ಲ.
ಸನ್‌ರೈಸರ್ಸ್ ಹೈದರಾಬಾದ್ (266/7)
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತನ್ನ ಮೂರನೇ ಗರಿಷ್ಠ ಸ್ಕೋರ್ ಕಲೆ ಹಾಕಿತ್ತು. ಸನ್‌ರೈಸರ್ಸ್ ಹೈದರಾಬಾದ್ ತಂಡವು 7 ವಿಕೆಟ್ ನಷ್ಟಕ್ಕೆ 266 ರನ್ ಗಳಿಸುವ ಮೂಲಕ ದಾಖಲೆಯ ರನ್ ದಾಖಲಿಸಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (263/5)
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿಗೆ ದಾಖಲೆಯ ಮೊತ್ತವನ್ನು ಗಳಿಸಿತ್ತು. ಆರ್‌ಸಿಬಿ ಕೇವಲ 5 ವಿಕೆಟ್‌ಗಳ ನಷ್ಟಕ್ಕೆ 263 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಐಪಿಎಲ್ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಈ ಸಾಧನೆ ಮಾಡಿತ್ತು. ಆರ್‌ಸಿಬಿಯ ಮಾಜಿ ಸ್ಟಾರ್ ಆಟಗಾರ ಕ್ರಿಸ್ ಗೇಲ್ 175 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು,
ಲಕ್ನೋ ಸೂಪರ್ ಜೈಂಟ್ಸ್ (257/5)
ಲಕ್ನೋ ಸೂಪರ್ ಜೈಂಟ್ಸ್ ತಂಡವು 5 ವಿಕೆಟ್‌ಗಳನ್ನು ಕಳೆದುಕೊಂಡು 257 ರನ್ ಗಳಿಸುವ ಮೂಲಕ ಆರ್‌ಸಿಬಿಯ ದಾಖಲೆಯನ್ನು ಹಿಂದಿಕ್ಕುವ ಹಂತಕ್ಕೆ ತಲುಪಿತು. ಪಂಜಾಬ್ ಕಿಂಗ್ಸ್ ವಿರುದ್ಧ ಎಲ್‌ಎಸ್‌ಜಿ ಮೊದಲು ಬ್ಯಾಟಿಂಗ್ ಮಾಡಿ 257 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇದು ಕೂಡ ಐಪಿಎಲ್ ಇತಿಹಾಸದಲ್ಲಿ ದಾಖಲಾ ಗರಿಷ್ಠ ಸ್ಕೋರ್ ಪಂದ್ಯವಾಗಿದೆ.
ಸಿಎಸ್‌ಕೆ - 28
ಆರ್‌ಸಿಬಿ - 24
ಎಂಐ - 22
ಪಿಬಿಕೆಎಸ್ - 21
ಕೆಕೆಆರ್ - 19