IPL 2025: ಐಪಿಎಲ್ ಟಿಕೆಟ್‌ಗಳನ್ನು ಆಫ್‌ಲೈನ್, ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
18ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭವಾಗಿದೆ. ಈ ಟೂರ್ನಿಯ ಚಾಂಪಿಯನ್ ಪಟ್ಟದ ಮೇಲೆ 10 ತಂಡಗಳು ಕಣ್ಣು ನೆಟ್ಟಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಆರ್‌ಸಿಬಿ ಪ್ರಸಕ್ತ ಆವೃತ್ತಿಯನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಹಲವು ವರ್ಷಗಳಿಂದ ವಂಚಿತವಾಗಿರುವ ಟ್ರೋಫಿಗೆ ಮುತ್ತಿಡಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ.
ಈ ಬಾರಿಯ ಐಪಿಎಲ್ ಹೆಚ್ಚಿನ ಅಭಿಮಾನಿಗಳನ್ನು ಮೈದಾನದತ್ತ ಸೆಳೆಯುತ್ತಿದೆ. ಈ ಬಾರಿಯ ಆವೃತ್ತಿಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಫ್ರಾಂಚೈಸಿ ಭರ್ಜರಿ ತಯಾರಿ ನಡೆಸಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ತಮ್ಮ ತಮ್ಮ ತವರು ನೆಲದಲ್ಲಿ ಪಂದ್ಯಗಳನ್ನು ಆಡಿ ಅಭಿಮಾನಿಗಳನ್ನು ರಂಜಿಸಲಿವೆ. ಈ ಬಾರಿಯ ಐಪಿಎಲ್ ಟಿಕೆಟ್‌ಗಳನ್ನು ಹೇಗೆ ಪಡೆಯುವುದು ಎಂಬ ಗೊಂದಲ ಅಭಿಮಾನಿಗಳ ಮನದಲ್ಲಿ ಇದ್ರೆ ಅದಕ್ಕೆ ಉತ್ತರ ಇಲ್ಲಿದೆ.

ತಮ್ಮ ತಮ್ಮ ನಗರಗಳಲ್ಲಿ ನಡೆಯುವ ಪಂದ್ಯವನ್ನು ಅಭಿಮಾನಿಗಳು ಟಿಕೆಟ್ ಪಡೆದು ಆನಂದಿಸಬಹುದಾಗಿದೆ. ಐಪಿಎಲ್ ಪಂದ್ಯವನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಹಣವನ್ನು ಖರ್ಚು ಮಾಡುವ ಅವಶ್ಯಕತೆ ಇಲ್ಲವೇ ಇಲ್ಲ. 400 ರೂಪಾಯಿಂದ ಸುಮಾರು 30 ಸಾವಿರ ರೂಪಾಯಿಯ ವರೆಗೆ ತಮ್ಮ ಶಕ್ತಿ ಅನುಸಾರ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ. ಅಭಿಮಾನಿಗಳು ಟಿಕೆಟ್‌ಗಳನ್ನು ಸ್ಟೇಡಿಯಂಗಳ ಟಿಕೆಟ್ ಕೌಂಟರ್ ನಿಂದ ಪಡೆಯಬಹುದಾಗಿದೆ. ಅಲ್ಲದೆ ಫ್ರಾಂಚೈಸಿಗಳು ಬೇರೆ ಟಿಕೆಟ್ ಮಾರಾಟ ಕಂಪನಿಗಳೊಂದಿಗೆ ಮಾರಾಟ ಮಾಡಿಕೊಂಡ ವೆಬ್ ಸೈಟ್‌ನಿಂದಲೂ ಪಡೆಯಬಹುದಾಗಿದೆ.
ಅಭಿಮಾನಿಗಳು ಈ ಪಂದ್ಯಗಳ ಟಿಕೆಟ್‌ಗಳನ್ನು ಆಯಾ ಸ್ಥಳಗಳಿಗೆ ಅನುಗಣವಾಗಿ ಆಯಾ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ. ಹಲವು ಫ್ರಾಂಚೈಸಿಗಳು ಬುಕ್‌ಮೈಶೋ, ಪೇಟಿಎಂ ಇನ್‌ಸೈಡರ್, ಇನ್ನು ಫ್ರಾಂಚೈಸಿ ವೆಬ್‌ಸೈಟ್‌ಗಳಿಂದ ಪಡೆಯಬಹುದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಟಿಕೆಟ್‌ಜೆನಿ (TicketGenie) ಮೂಲಕ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ.

ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯುವುದು ಹೇಗೆ? ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ
- ನೀವು ನಿಮ್ಮ ನೆಚ್ಚಿನ ತಂಡದ ಆಫಿಸಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಿಮ್ಮ ಹೆಸರಿನಿಂದ ಒಂದು ಅಕೌಟ್ ಕ್ರಿಯೇಟ್ ಮಾಡಿ
- ನೀವು ಯಾವ ಪಂದ್ಯವನ್ನು ನೋಡಬೇಕು ಅದನ್ನು ಆಯ್ಕೆ ಮಾಡಿ.
- ನೀವು ನಿಮಗೆ ಬೇಕಾದ ಟಿಕೆಟ್ ಸ್ಥಳವನ್ನು ಆಯ್ಕೆ ಮಾಡಿ. ಟಿಕೆಟ್ ಲಭ್ಯತೆಯ ಬಗ್ಗೆ ಖಚಿತ ಪಡಿಸಿಕೊಳ್ಳಿ.
- ನೀವು ಹಣವನ್ನು ವರ್ಗಾವಣೆ ಮಾಡಿದ ಬಳಿಕ ನಿಮ್ಮ ಮೊಬೈಲ್ ನಂಬರ್‌ಗೆ ಎಸ್‌ಎಮ್‌ಎಸ್ ಅಥವಾ ಇ-ಮೇಲ್ ಮೂಲಕ ಸಂದೇಶ ರವಾನಿಸಲಾಗುತ್ತದೆ.
ಆಫ್ ಲೈನ್‌ನಲ್ಲಿ ಟಿಕೆಟ್ ಪಡೆಯುವುದು ಹೇಗೆ?
ನಿಮ್ಮ ಹತ್ತಿರದ ಸ್ಟೇಡಿಯಂಗೆ ಭೇಟಿ ನೀಡಿ ಅಲ್ಲಿ ಟಿಕೆಟ್ ಕೌಂಟರ್‌ನಲ್ಲಿ ನಿಮ್ಮ ಆದ್ಯತೆಯ ಟಿಕೆಟ್ ಪಡೆಯಬಹುದಾಹಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications