IPL 2025: ಆರ್‌ಸಿಬಿ ವಿರುದ್ಧ 17 ವರ್ಷ ನಂತರ ಮತ್ತೆ ದಾಖಲೆ ಸೃಷ್ಟಿಸಿದ ಇಶಾಂತ್ ಶರ್ಮಾ
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗುಜರಾತ್ ಟೈಟಾನ್ಸ್ ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತ ನಂತರ ಆರ್‍ಸಿಬಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಆದರೆ ಆರ್‍ಸಿಬಿ ಬ್ಯಾಟರ್‍ಗಳು ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾದರು. ಗುಜರಾತ್ ಟೈಟಾನ್ಸ್ ಬೌಲರ್‍ಗಳು ಆರಂಭದಿಂದಲೇ ಒತ್ತಡ ಹೇರಿದರು. ಹೀಗಾಗಿ ಆರ್‍ಸಿಬಿ ಬ್ಯಾಟರ್‍ಗಳಿಗೆ ಮುಕ್ತವಾಗಿ ಆಡುವ ಅವಕಾಶ ನೀಡಲಿಲ್ಲ.
ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಎರಡನೇ ಪಂದ್ಯವನ್ನು ಆಡುತ್ತಿರುವ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಆರ್‍ಸಿಬಿ ವಿರುದ್ಧ ವಿಶೇಷ ಸಾಧನೆ ಮಾಡಿದ್ದಾರೆ. ಇಶಾಂತ್ ಶರ್ಮಾ ತಮ್ಮ ಬೌಲಿಂಗ್ ಮೂಲಕ 2008 ರ ಘಟಣೆಯಲ್ಲಿ ಮರುಕಳಿಸುವಂತೆ ಮಾಡಿದ್ದಾರೆ.

ಆರ್‍ಸಿಬಿ ಇನ್ನಿಂಗ್ಸ್‌ನಲ್ಲಿ ಪವರ್ ಪ್ಲೇ ಮುಗಿದ ತಕ್ಷಣ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಅವರು ಇಶಾಂತ್ ಶರ್ಮಾಗೆ ಬೌಲಿಂಗ್ ಮಾಡಲು ಚೆಂಡನ್ನು ನೀಡಿದರು. ಇಶಾಂತ್ ಶರ್ಮಾ ಓವರ್‍ನ ಮೊದಲ ಎಸೆತದಲ್ಲೇ ಆರ್‍ಸಿಬಿ ನಾಯಕ ರಜತ್ ಪಾಟಿದಾರ್ ಬೌಂಡರಿ ಬಾರಿಸಿದರು. ಆದರೆ ನಂತರದ ಎಸೆತದಲ್ಲಿ ಪಾಟಿದಾರ್ ಅವರನ್ನು ಇಶಾಂತ್ ಎಲ್‌ಬಿಡಬ್ಲ್ಯೂ ಔಟ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಪಾಟಿದಾರ್ 2 ಎಸೆತಗಳಳಲ್ಲಿ 12 ರನ್ ಗಳಿಸಿ ನಿರ್ಗಮಿಸಿದರು. ಇದರೊಂದಿಗೆ ಇಶಾಂತ್ ಶರ್ಮಾ ಹೊಸ ದಾಖಲೆ ಮಾಡಿದರು.
ಇಶಾಂತ್ ಶರ್ಮಾ ಆರ್‍ಸಿಬಿ ನಾಯಕನನ್ನು ತಮ್ಮ ಮೊದಲ ಓವರ್‍ನಲ್ಲೇ ಔಟ್ ಮಾಡಿರುವುದು ಇದೇ ಮೊದಲಲ್ಲ. ಐಪಿಎಲ್ 2008 ರಲ್ಲಿ ಇಶಾಂತ್ ಶರ್ಮಾ ಮೊದಲ ಪಂದ್ಯದಲ್ಲೇ ಅಂದಿನ ಆರ್‍ಸಿಬಿ ನಾಯಕ ರಾಹುಲ್ ದ್ರಾವಿಡ್ ಅವರ ವಿಕೆಟ್ ಪಡೆದಿದ್ದರು. ಇದು ಐಪಿಎಲ್ ಉದ್ಘಾಟನಾ ಸೀಸನ್ ಆಗಿತ್ತು. ದ್ರಾವಿಡ್ ಅವರು 2 ರನ್ ಗಳಿಸಿ ಇಶಾಂತ್ ಶರ್ಮಾ ಅವರಿಗೆ ವಿಕೆಟ್ ಒಪ್ಪಿಸಿದ್ದರು.
ಈಗ ಇಶಾಂತ್ ಐಪಿಎಲ್ 2025 ರಲ್ಲೂ ಇದೇ ರೀತಿಯ ಸಾಧನೆ ಮಾಡಿದ್ದಾರೆ. ಇಲ್ಲಿಯೂ ಸಹಾ ಅವರು ಎರಡನೇ ಓವರ್‍ನಲ್ಲಿ ಆರ್‍ಸಿಬಿ ನಾಯಕ ರಜತ್ ಪಾಟಿದಾರ್ ಅವರನ್ನು ಔಟ್ ಮಾಡುವ ಮೂಲಕ 17 ವರ್ಷದ ಸಾಧನೆಯನ್ನು ಮತ್ತೆ ಮಾಡಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್-11
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಅರ್ಷದ್ ಖಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications