ಇಂಡಿಯನ್ಸ್ ಪ್ರೀಮಿಯರ ಲೀಗ್ (ಐಪಿಎಲ್) 2025ರ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಐಪಿಎಲ್ 2025ರ ಉದ್ಘಾಟನಾ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಐಪಿಎಲ್ 2025 ರಲ್ಲಿ 3 ವಿಕೆಟ್‌ಕೀಪರ್‌ಗಳು ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಈ ಮೂವರು ವಿಕೆಟ್‌ಕೀಪರ್‌ಗಳು ವಿಕೆಟ್ ಕೀಪಿಂಗ್‌ನಲ್ಲಿ ಮಾತ್ರವಲ್ಲದೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಐಪಿಎಲ್ 2025 ರಲ್ಲಿ ಯಾವ 3 ವಿಕೆಟ್‌ಕೀಪರ್‌ಗಳು ಅಬ್ಬರಿಸಬಹುದು ಎಂಬುದದ ಬಗ್ಗೆ ಇಲ್ಲಿದೆ ಮಾಹಿತಿ.

ಐಪಿಎಲ್ 2025 ರಲ್ಲಿ ಎಲ್ಲರ ಕಣ್ಣುಗಳು ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಮೇಲಿದೆ. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 11.25 ಕೋಟಿ ರೂ.ಗೆ ಖರೀದಿಸಿದೆ. ಇಶಾನ್ ಕಿಶನ್ ಒಬ್ಬ ಸ್ಫೋಟಕ ಆರಂಭಿಕ ಆಟಗಾರನಲ್ಲದೆ, ಅದ್ಭುತ ವಿಕೆಟ್ ಕೀಪರ್ ಕೂಡ ಹೌದು. ಐಪಿಎಲ್ 2025 ಕ್ಕೂ ಮೊದಲು, ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಅವರನ್ನು ಬಿಡುಗಡೆ ಮಾಡಿತು. ಈಗ ಇಶಾನ್ ಕಿಶನ್ ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ತಮ್ಮ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ.
ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಇಶಾನ್ ಕಿಶನ್ 105 ಐಪಿಎಲ್ ಪಂದ್ಯಗಳಲ್ಲಿ 28.43 ಸರಾಸರಿಯಲ್ಲಿ 2644 ರನ್ ಗಳಿಸಿದ್ದಾರೆ. ಇದರಲ್ಲಿ 16 ಅರ್ಧಶತಕಗಳು ಸೇರಿವೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ವಿಕೆಟ್ ಹಿಂದೆ 51 ಕ್ಯಾಚ್‌ಗಳನ್ನು ಪಡೆದಿರುವುದರ ಜೊತೆಗೆ, 5 ಸ್ಟಂಪಿಂಗ್‌ಗಳನ್ನು ಸಹ ಮಾಡಿದ್ದಾರೆ.
ಕ್ವಿಂಟನ್ ಡಿ ಕಾಕ್ ಟಿ20 ಕ್ರಿಕೆಟ್‌ನ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಒಬ್ಬರು. ಸ್ಪೋಟಕ ಆರಂಭಿಕ ಬ್ಯಾಟರ್ ಅಲ್ಲದೆ, ಕ್ವಿಂಟನ್ ಡಿ ಕಾಕ್ ಒಬ್ಬ ಚತುರ ವಿಕೆಟ್ ಕೀಪರ್. ಕ್ವಿಂಟನ್ ಡಿ ಕಾಕ್ ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಪರ ಆಡಲಿದ್ದಾರೆ. ಮೆಗಾ ಹರಾಜಿನಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಕೆಕೆಆರ್ 3.60 ಕೋಟಿ ರೂ.ಗೆ ಖರೀದಿಸಿತು. ಇದಕ್ಕೂ ಮೊದಲು ಲಕ್ನೋ ಸೂಪರ್ ಜೈಂಟ್ಸ್ ಕ್ವಿಂಟನ್ ಡಿ ಕಾಕ್ ಅವರನ್ನು ಬಿಡುಗಡೆ ಮಾಡಿತ್ತು.
ಐಪಿಎಲ್ 2025 ರಲ್ಲಿ ಕೆಕೆಆರ್ ಪರ ಸುನಿಲ್ ನರೈನ್ ಅವರೊಂದಿಗೆ ಕ್ವಿಂಟನ್ ಡಿ ಕಾಕ್ ಇನ್ನಿಂಗ್ಸ್ ತೆರೆಯಬಹುದು. ಕ್ವಿಂಟನ್ ಡಿ ಕಾಕ್ 107 ಐಪಿಎಲ್ ಪಂದ್ಯಗಳಲ್ಲಿ 31.25 ಸರಾಸರಿಯಲ್ಲಿ 3157 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 23 ಅರ್ಧಶತಕಗಳು ಸೇರಿವೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ, ಕ್ವಿಂಟನ್ ಡಿ ಕಾಕ್ ವಿಕೆಟ್ ಹಿಂದೆ 67 ಕ್ಯಾಚ್‌ಗಳನ್ನು ಹಿಡಿದಿದ್ದು, 15 ಸ್ಟಂಪಿಂಗ್‌ಗಳನ್ನು ಸಹ ಮಾಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಜೋಸ್ ಬಟ್ಲರ್ ಸ್ಪೋಟಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಜೋಸ್ ಬಟ್ಲರ್ ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಎರಡೂ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಬಲ್ಲರು. ಜೋಸ್ ಬಟ್ಲರ್ ಕೂಡ ಒಬ್ಬ ಚತುರ ವಿಕೆಟ್ ಕೀಪರ್. ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ತಂಡಕ್ಕೆ ಜೋಸ್ ಬಟ್ಲರ್ ಆಡಲಿದ್ದಾರೆ. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಜೋಸ್ ಬಟ್ಲರ್ ಅವರನ್ನು ಜಿಟಿ 15.75 ಕೋಟಿ ರೂ.ಗೆ ಖರೀದಿಸಿತು. ಇದಕ್ಕೂ ಮೊದಲು ರಾಜಸ್ಥಾನ ರಾಯಲ್ಸ್ (ಆರ್‌ಆರ್) ಜೋಸ್ ಬಟ್ಲರ್ ಅವರನ್ನು ಬಿಡುಗಡೆ ಮಾಡಿತ್ತು.
ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ತಂಡದ ಪರ ಜೋಸ್ ಬಟ್ಲರ್ ನಾಯಕ ಶುಭಮನ್ ಗಿಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಬಹುದು. ಜೋಸ್ ಬಟ್ಲರ್ 107 ಐಪಿಎಲ್ ಪಂದ್ಯಗಳಲ್ಲಿ 38.10 ಸರಾಸರಿಯಲ್ಲಿ 3582 ರನ್ ಗಳಿಸಿದ್ದಾರೆ, ಇದರಲ್ಲಿ 7 ಶತಕಗಳು ಮತ್ತು 19 ಅರ್ಧಶತಕಗಳು ಸೇರಿವೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ, ಜೋಸ್ ಬಟ್ಲರ್ ವಿಕೆಟ್ ಹಿಂದೆ 55 ಕ್ಯಾಚ್‌ಗಳನ್ನು ಹಿಡಿದಿದ್ದು, 1 ಸ್ಟಂಪಿಂಗ್ ಕೂಡ ಮಾಡಿದ್ದಾರೆ.