IPL 2025: ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ಹೆಜ್ಜೆ; ಕೆವಿನ್ ಪೀಟರ್ಸನ್‌ಗೆ ಹೆಗಲಿಗೆ ಜವಾವ್ದಾರಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2025 ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ಶ್ರೀಮಂತ ಕ್ರಿಕೆಟ್ ಲೀಗ್‌ನ ಉದ್ಘಾಟನಾ ಪಂದ್ಯವು ಮಾರ್ಚ್ 22 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಮೆಗಾ ಟೂರ್ನಿಗೆ ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಐಪಿಎಲ್ 2025 ಪ್ರಾರಂಭವಾಗುವ ಮೊದಲು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮಹತ್ವದ ಹೆಜ್ಜೆ ಇಟ್ಟಿದೆ.
ಐಪಿಎಲ್ 2025 ಆವೃತ್ತಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕರಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ನೇಮಕಗೊಂಡಿದ್ದಾರೆ. ಕೆವಿನ್ ಪೀಟರ್ಸನ್ ಅವರ ಹೆಗಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಹೊಸ ಜವಾಬ್ದಾರಿ ನೀಡಿದ್ದು, ಚಾಂಪಿಯನ್ ಆಗಲು ಎಲ್ಲಾ ರೀತಿಯಿಂದಲೂ ಸಜ್ಜಾಗುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ ಹೆಡ್‌ಕೋಚ್ ಹೇಮಾಂಗ್ ಬದಾನಿ ಅವರೊಂದಿಗೆ ಪೀಟರ್ಸನ್ ಕಾರ್ಯ ನಿರ್ವಹಿಸಲು ಉತ್ಸಾಹಕರಾಗಿದ್ದಾರೆ. ಹೇಮಾಂಗ್ ಬದಾನಿ ಜೊತೆಗೆ ಕ್ರಿಕೆಟ್ ನಿರ್ದೇಶಕ ವೇಣುಗೋಪಾಲ್ ರಾವ್, ಬೌಲಿಂಗ್ ಕೋಚ್ ಮುನಾಫ್ ಪಟೇಲ್ ಮತ್ತು ಸಹಾಯಕ ಕೋಚ್ ಮ್ಯಾಥ್ಯೂ ಮೋಟ್ ಕೂಡ ಇದ್ದಾರೆ. ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಪೀಟರ್ಸನ್ ವೀಕ್ಷಕ ವಿವರಣೆ ಸಮಿತಿಯ ಭಾಗವಾಗಿದ್ದರು. ಇದೀಗ ಪೀಟರ್ಸನ್ ಕ್ರಿಕೆಟ್ ತಂಡದೊಂದಿಗೆ ಸಹಾಯಕ ಸಿಬ್ಬಂದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.
ಪೀಟರ್ಸನ್ ಐಪಿಎಲ್ ವೃತ್ತಿಜೀವನ
ಪೀಟರ್ಸನ್ ಐಪಿಎಲ್ 2012 ಮತ್ತು 2014 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಅಂದು ತಂಡವನ್ನು ಡೆಲ್ಲಿ ಡೇರ್‌ಡೆವಿಲ್ಸ್ ಎಂದು ಕರೆಯಲಾಗುತ್ತಿತ್ತು. ಅವರು 2014ರಲ್ಲಿ 17 ಪಂದ್ಯಗಳಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ ಡಿಸಿ 14 ಪಂದ್ಯಗಳಲ್ಲಿ ಕೇವಲ 2 ಗೆಲುವುಗಳನ್ನು ಗಳಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಐಪಿಎಲ್‌ನಲ್ಲಿ ಪೀಟರ್ಸನ್ ಡೆಲ್ಲಿ ಡೇರ್‌ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪುಣೆ ಫ್ರಾಂಚೈಸಿಗಳ ಪರ ಆಡಿದ್ದಾರೆ.
ಈ ವಾರದ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಸಹಾಯಕ ಕೋಚ್ ಆಗಿ ಮ್ಯಾಥ್ಯೂ ಮೋಟ್ ಅವರನ್ನು ನೇಮಕ ಮಾಡಿರುವುದಾಗಿ ಘೋಷಿಸಿತು. ಮೋಟ್ 2022ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದರು. ಆದಾಗ್ಯೂ, ಐಪಿಎಲ್ 2025ರ ಆವೃತ್ತಿ ಡೆಲ್ಲಿ ತನ್ನ ನಾಯಕನ ಹೆಸರನ್ನು ಇನ್ನೂ ಘೋಷಿಸಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ 2025ರ ತಂಡ
ಕೆಎಲ್ ರಾಹುಲ್, ಮಿಚೆಲ್ ಸ್ಟಾರ್ಕ್, ಮುಖೇಶ್ ಕುಮಾರ್, ಟಿ ನಟರಾಜನ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಹ್ಯಾರಿ ಬ್ರೂಕ್, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಸಮೀರ್ ರಿಜ್ವಿ, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಷ್ಮಂತ, ಮಂದಾರ, ಮಂದಾರ, ಮಂದಾರ, ಮಂದಾರ, ಮಂದಾರ, ಮಂದಾರ, ಮಂದಾರ, ಮಂದಾರ, ತ್ರಿಪುರಾಣ ವಿಜಯ್, ಮಾಧವ್ ತಿವಾರಿ ಮತ್ತು ಕರುಣ್ ನಾಯರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications