IPL 2025 RCB: ಆರ್‌ಸಿಬಿಯಲ್ಲಿ ಕೆಜಿಎಫ್ ಶೋ ಮುಕ್ತಾಯ!
ಸೌದಿ ಅರೇಬಿಯಾದ ಜಿಡ್ಡಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆಗೆ ತೆರೆ ಬಿದ್ದಿದೆ. ಸತತ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಹಲವು ಆಟಗಾರರ ಅದೃಷ್ಟ ಬಾಗಿಲು ತೆರೆದಿದೆ. ಇನ್ನು ಕೆಲವು ಆಟಗಾರರ ಹಣೆ ಬರಹ ಬದಲಾಗಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂದಿನ ಐಪಿಎಲ್ ಟೂರ್ನಿಗಾಗಿ ಸಂಪೂರ್ಣ ಹೊಸ ತಂಡದೊಂದಿಗೆ ಕಣಕ್ಕೀಳಿಯಲಿದೆ. ಇದರೊಂದಿಗೆ ಆರ್‌ಸಿಬಿಯಲ್ಲಿ ಕೆಜಿಎಫ್ ಶೋ ಅಂತ್ಯ ಕಂಡಿದೆ.
ಆರ್‌ಸಿಬಿ ಫ್ರಾಂಚೈಸಿ ತನ್ನ ಸ್ಟಾರ್ ಆಟಗಾರರಾದ ಮೊಹಮ್ಮದ್ ಸಿರಾಜ್, ಫಾಪ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿಲ್ ಜ್ಯಾಕ್ಸ್ ಅವರನ್ನು ಮೆಗಾ ಹರಾಜಿನಲ್ಲಿ ಮರಳ ಬಿಡ್ ಮಾಡಿಲ್ಲ. ಆರ್‌ಟಿಎಂ ಕಾರ್ಡ್ ಕೂಡ ಈ ಆಟಗಾರರಿಗೆ ಆರ್‌ಸಿಬಿ ಬಳಸಿಲ್ಲ. ಇದು ಆರ್‌ಸಿಬಿ ಅಭಿಮಾನಿಗಳ ಆಕ್ರೋಶ ಕಾರಣವಾಗಿದೆ. ಹೀಗಾಗಿ ಈ ಬಾರಿಯೇ ಆರ್‌ಸಿಬಿಯಲ್ಲಿ ಕೆಜಿಎಫ್ ಶೋ ಅಂತ್ಯ ಮುಕ್ತಾಯವಾಗಿದೆ.

ವಿಶ್ವ ಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಪರಿಚಯಿಸಿದ ಸಿನಿಮಾ ಎಂದರೆ ಕೆಜಿಎಫ್. ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅವರು ಹೀರೋ ಆಗಿ ನಟಿಸಿದ್ದ ಕೆಜಿಎಫ್ ಸಿನಿಮಾ
ಚಾಪ್ಟರ್-1 ಮತ್ತು ಚಾಪ್ಟರ್-2 ಗಳಲ್ಲಿ ಬೆಳ್ಳಿ ಪರದೆ ಮೇಲೆ ತೆರೆಕಂಡಿತ್ತು. ಭಾರತ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಬಾಕ್ಸ್ ಆಫೀಸ್‌ನಲ್ಲಿ ಕೆಜಿಎಫ್ ಸಿನಿಮಾ ಸಾವಿರಾರು ಕೋಟಿ ಕೊಳ್ಳೆ ಹೊಡೆದು ದಾಖಲೆ ಮಾಡಿತ್ತು. ಎರಡು ಚಾಪ್ಟರ್‌ಗಳಲ್ಲಿ ಬಿಡಗಡೆಯಾಗಿದ್ದ ಕೆಜಿಎಫ್ ಅಧ್ಯಾಯ ಮುಗಿದಿದೆ ಎಂದು ಕೆಲವು ಭಾವಿಸಿದ್ದು, ಮುಂದಿನ ದಿನಗಳಲ್ಲಿ ಪಾರ್ಟ್ ಥ್ರೀ ಕೂಡ ಬರುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಆದರೆ, ಐಪಿಎಲ್‌ನಲ್ಲಿ ಮಾತ್ರ ಕೆಜಿಎಫ್ ಚಾಪ್ಟರ್ ಮುಗಿದಿದೆ. ಇದು ಆರ್‌ಸಿಬಿ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.
ಕೆಜಿಎಫ್ ಶೋ ಅಂತ್ಯ
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಹಲವು ಸ್ಟಾರ್ ಆಟಗಾರರು ಬಂದು ಹೋಗಿದ್ದಾರೆ. ಅದರಲ್ಲೂ ವಿದೇಶಿ ಆಟಗಾರರು ಸಾಕಷ್ಟು ಸದ್ದು ಮಾಡಿದ್ದಾರೆ. ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಈ ಇಬ್ಬರು ವಿದೇಶಿ ಆಟಗಾರರು ಭಾರೀ ಸದ್ದು ಮಾಡಿದ್ದರು. ಈ ಆಟಗಾರರು ಬೇರೆ ಯಾರು ಅಲ್ಲ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಪ್ ಡು ಪ್ಲೆಸಿಸ್. ಹೀಗಾಗಿ ವಿರಾಟ್ ಕೊಹ್ಲಿ ಜೊತೆಗೆ ಈ ಇಬ್ಬರು ಆಟಗಾರರ ಹೆಸರು ಕೂಡಿಸಿ ಕೆಜಿಎಫ್ ಎಂದು ಆರ್‌ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಶುರು ಮಾಡಿದ್ದರು.
ಆದರೆ ಐಪಿಎಲ್ 2025ರ ಆವೃತ್ತಿಯಲ್ಲಿ ಅಭಿಮಾನಿಗಳು ಆರ್‌ಸಿಬಿಯಲ್ಲಿ ಕೆಜಿಎಫ್ ಶೋ ಕಾಣಲು ಸಾಧ್ಯವಿಲ್ಲ. ಐಪಿಎಲ್ 2024ರಲ್ಲಿ ಮ್ಯಾಕ್ಸ್‌ವೆಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ಅವರನ್ನು ಆರ್‌ಸಿಬಿ ಮರಳಿ ಬಿಡ್ ಮಾಡಿಲ್ಲ. ಮತ್ತೊಂದೆಡೆ ವಯಸ್ಸಿನ ಕಾರಣದಿಂದ ಫಾಪ್ ಡು ಪ್ಲೆಸಿಸ್ ಅವರಿಗೂ ತಂಡದಿಂದ ಗೇಟ್ ಪಾಸ್ ನೀಡಿದೆ ಎಂದು ವರದಿ ಆಗಿದೆ. ಇದರೊಂದಿಗೆ ಆರ್‌ಸಿಬಿಯಲ್ಲಿ ಕೆಜಿಎಫ್ ಶೋ ಅಂತ್ಯ ಕಂಡಿದ್ದು, ಆರ್‌ಸಿಬಿಯ ಹೊಸ ಅಧ್ಯಾಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications