Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KKR Retention: ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್‌ಗಿಲ್ಲ ಸ್ಥಾನ; ರಿಂಕು ಮೊದಲನೇ ಆಯ್ಕೆ

ಐಪಿಎಲ್ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ರಿಟೇನ್ ಪಟ್ಟಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಫ್ರಾಂಚೈಸಿ ಕಳೆದ ಋತುವಿನಲ್ಲಿ ತನ್ನ ಮೂರನೇ ಪ್ರಶಸ್ತಿಯನ್ನು ಗೆದ್ದಿತ್ತು. ಇದೀಗ ಕೆಕೆಆರ್ ತಂಡದ ಸಂಪೂರ್ಣ ಚಿತ್ರಣ ಬದಲಾಗಿದೆ.

ಐಪಿಎಲ್ 2025ರ ಟೂರ್ನಿಗಾಗಿ ಕೆಕೆಆರ್ ಹೊಸ ತಂಡವಾಗಿ ಕಾಣಿಸಿಕೊಳ್ಳಲಿದೆ. 6 ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ಕೆಕೆಆರ್ ತನ್ನ ಆರ್‌ಟಿಎಂ ಆಯ್ಕೆಯನ್ನು ತೆಗೆದುಹಾಕಿದೆ. ಈಗ ತಂಡವು ಹರಾಜಿನಲ್ಲಿ ಆರ್‌ಟಿಎಂ ಅನ್ನು ಬಳಸುವಂತಿಲ್ಲ.

IPL 2025 KKR Retention Uncapped Players KKR Strategy Player Choices and Shreyas Iyer Value Analyzed

ಕೋಲ್ಕತ್ತಾ ನೈಟ್ ರೈಡರ್ಸ್ ರಿಟೇನ್ ಪಟ್ಟಿಯಲ್ಲಿ ರಿಂಕು ಸಿಂಗ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್, ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ. ಕೆಕೆಆರ್ ತನ್ನ ಸೂಪರ್‌ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರನ್ನು ಅತ್ಯಂತ ದುಬಾರಿ ಆಟಗಾರನಾಗಿ ಉಳಿಸಿಕೊಂಡಿದೆ. ರಿಂಕು ಸಿಂಗ್ 2018 ರಿಂದ ಕೆಕೆಆರ್ ಫ್ರಾಂಚೈಸಿಯ ಭಾಗವಾಗಿದ್ದಾರೆ. ಕಳೆದ ವರ್ಷ ರಿಂಕು ಸಂಭಾವನೆ 55 ಲಕ್ಷ ರೂ. ಆದರೆ ಈ ಬಾರಿ ರಿಂಕು ಅವರನ್ನು ಬರೋಬ್ಬರಿ 13 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ.

ಸ್ಪೋಟಕ ಬ್ಯಾಟರ್ ಆಂಡ್ರೆ ರಸೆಲ್ ಅವರನ್ನು 12 ಕೋಟಿ ರೂ.ಗೆ ಕೆಕೆಆರ್ ಉಳಿಸಿಕೊಂಡಿದೆ. ಆಲ್‌ರೌಂಡರ್ ಸುನೀಲ್ ನರೈನ್‌ ಮತ್ತು ಸ್ಪಿನ್​ ಮಿಸ್ಟರಿ ಬೌಲರ್ ವರುಣ್ ಚಕ್ರವರ್ತಿ ಅವರಿಗೆ ತಲಾ 12 ಕೋಟಿ ರೂ. ನೀಡಿದೆ. ಇನ್ನು ಅನ್​ಕ್ಯಾಪ್ಡ್​ ಆಟಗಾರರಾದ ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ತಲಾ 4 ಕೋಟಿ ರೂ. ನೀಡಿ ಉಳಿಸಿಕೊಂಡಿದೆ.

ಕೆಕೆಆರ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ

ಶ್ರೇಯಸ್ ಅಯ್ಯರ್, ಜೇಸನ್ ರಾಯ್, ಆಂಗ್‌ಕ್ರಿಶ್ ರಘುವಂಶಿ, ಶೆರ್ಫೇನ್ ರುದರ್‌ಫೋರ್ಡ್, ಮನೀಶ್ ಪಾಂಡೆ, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ಅನುಕೂಲ್ ರಾಯ್, ವೈಭವ್ ಅರೋರಾ, ಚೇತನ್ ಸಕಾರಿಯಾ, ಸುಯ್ಯಾಶ್ ಶರ್ಮಾ, ಮಿಚೆಲ್ ಸ್ಟಾರ್ಕ್, ಗುಸ್ ಅಟ್ಕಿನ್ಸನ್, ಸಖಿಬ್‌ಜೀಬ್‌ಸನ್ ಭರತ್, ರಹಮಾನುಲ್ಲಾ ಗುರ್ಬಾಜ್.

ಕೆಕೆಆರ್ ತಂಡ ಹಾಲಿ ಚಾಂಪಿಯನ್ ಆಗಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಕೆಕೆರ್ ಐಪಿಎಲ್ 2024ರ ಚಾಂಪಿಯನ್ ಆಗಿತ್ತು. ಕೆಕೆಆರ್ ಲೀಗ್ ಹಂತದಲ್ಲಿ 9 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಅಲ್ಲದೆ, ಕೆಕೆಆರ್‌ ಪ್ಲೇ-ಆಫ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿತ್ತು. ಟ್ರೋಫಿ ಗೆಲ್ಲುವ ಮೂಲಕ ಆವೃತ್ತಿಯನ್ನು ಮುಕ್ತಾಯಗೊಳಿಸಿತ್ತು.

Story first published: Thursday, October 31, 2024, 18:20 [IST]
Other articles published on Oct 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+