IPL 2025: ಕ್ರಿಕೆಟ್ ಹಬ್ಬ ಶುರು; ಶುಭಾರಂಭ ಮಾಡುವ ತವಕದಲ್ಲಿ ಕೆಕೆಆರ್-ಆರ್‌ಸಿಬಿ
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಹಬ್ಬ ಇಂದಿನಿಂದ ಶುರುವಾಗಲಿದೆ. ಸತತ ಎರಡು ತಿಂಗಳು ಭಾರತದಲ್ಲಿ ಐಪಿಎಲ್ ಹವಾ ಜೋರಾಗಿರಲಿದೆ. ಮಾರ್ಚ್ 22 ರ ಶನಿವಾರ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ನಡೆಲಿರುವ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಭಾರತೀಯ ಕಾಲಮಾನ ಪ್ರಕಾರ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 7 ಗಂಟೆಗೆ ಟಾಸ್ ನಡೆಯಲಿದೆ.
ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಐಪಿಎಲ್ 2025 ರ ಉದ್ಘಾಟನಾ ಪಂದ್ಯವನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡುವ ತವಕದಲ್ಲಿವೆ. ಈ ಬಾರಿ ಉಭುಯ ತಂಡಗಳು ಬಲಿಷ್ಠವಾಗಿದ್ದು, ಹೊಸ ನಾಯಕರೊಂದಿಗೆ ಕಣಕ್ಕಿಳಿಯುತ್ತಿವೆ. ಆರ್‍ಸಿಬಿ ತಂಡಕ್ಕೆ ಹೊಸ ನಾಯಕ ರಜತ್ ಪಾಟಿದರ್ ಆದರೆ, ಕೆಕೆಆರ್ ತಂಡವನ್ನು ಹೊಸ ನಾಯಕನಾಗಿ ಅಜಿಂಕ್ಯ ರಹಾನ್ ಮುನ್ನಡೆಸಲಿದ್ದಾರೆ. ಹೀಗಾಗಿ ಉಭಯ ತಂಡಗಳ ಮೊದಲ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಬಲಾಬಲ
ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಬಿಗ್ ಪವರ್ ಹಿಟರ್‍ಗಳನ್ನು ಹೊಂದಿವೆ. ಆರ್‍ಸಿಬಿ ತಂಡದಲ್ಲಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೊ ಶೆಫರ್ಡ್ ಮತ್ತು ಜಾಕೋಬ್ ಬೆಥೆಲ್ ಅವರಂತಹ ಸ್ಪೋಟಕ ಬ್ಯಾಟರ್‍ಗಳಿದ್ದಾರೆ. ಇನ್ನೂ ಕೆಕೆಆರ್ ತಂಡ ಕೂಡ ಬಲಿಷ್ಠ ಬ್ಯಾಟಿಂಗ್ ಲೈನ್ ಹೊಂದಿದೆ. ಕ್ವಿಂಟನ್ ಡಿ ಕಾಕ್, ರಹಮಾನುಲ್ಲಾ ಗುರ್ಬಾಜ್, ಸುನಿಲ್ ನರೈನ್ ಹಾಗು ಆಂಡ್ರೆ ರಸೆಲ್ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲರು.
ಆರ್‍ಸಿಬಿಯ ಬೌಲಿಂಗ್ ವಿಭಾಗದಲ್ಲಿ ಅನುಭವಿ ಬೌಲರ್‍ಗಳಿಂದ ತುಂಬಿದೆ. ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಲುಂಗಿ ಎನ್‌ಗಿಡಿ ಅವರಂತಹ ಬೌಲರ್‍ಗಳಿದ್ದಾರೆ. ಇವರೊಂದಿಗೆ ಯಶ್ ದಯಾಳ್, ರಸಿಖ್ ದಾರ್ ಸಲಾಂ, ಸುಯಶ್ ಶರ್ಮಾ ಅವರಂತಹ ಯುವ ಬೌಲರ್‍ಗಳು ಸಾಥ್ ನೀಡಲಿದ್ದಾರೆ. ಮತ್ತೊಂದೆಡೆ ಕೆಕೆಆರ್ ಅದ್ಭುತ ಸ್ಪಿನ್ ದಾಳಿಯನ್ನು ಹೊಂದಿದೆ. ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಕೆಕೆಆರ್ ತಂಡದ ಪ್ರಮುಖ ಸ್ಪಿನ್ ಆಸ್ತ್ರಗಳಾಗಿದ್ದಾರೆ. ಇವರಲ್ಲದೆ, ವೇಗದ ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣಾ, ಅನ್ರಿಚ್ ನಾರ್ಟ್ಜೆ ಮತ್ತು ಸ್ಪೆನ್ಸರ್ ಜಾನ್ಸನ್ ಇದ್ದಾರೆ.
ಹೆಡ್ ಟು ಹೆಡ್
ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಇದುವರೆಗೆ 34 ಬಾರಿ ಸೆಣಸಾಡಿವೆ. ಕೆಕೆಆರ್20 ರಲ್ಲಿ ಗೆದ್ದು ಮೇಲುಗೈ ಸಾಧಿಸಿದ್ದರೆ, ಆರ್‌ಸಿಬಿ 14 ಪಂದ್ಯಗಳಲ್ಲಿ ಜಯ ಗಳಿಸಿದೆ. ಕಳೆದ ಐದು ಮುಖಾಮುಖಿಯಲ್ಲಿ ಕೆಕೆಆರ್4-1 ರಿಂದ ಗೆದ್ದು ಪ್ರಾಬಲ್ಯ ಸಾಧಿಸಿದೆ. 2024ರಲ್ಲಿ ಆರ್‍ಸಿಬಿ ಎದುರು ಎರಡೂ ಪಂದ್ಯಗಳನ್ನು ಕೆಕೆಆರ್ ಗೆದ್ದಿತ್ತು.
ನೇರಪ್ರಸಾರ
ಐಪಿಎಲ್ 2025 ರ ಟೂರ್ನಿಯನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ, ಈ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಹಲವು ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಿಸಬಹುದು. ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆ ಹೇಳುವುದಾದರೆ, ಈ ಪಂದ್ಯಗಳ ನೇರ ಪ್ರಸಾರವನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಐಪಿಎಲ್ 2025 ರ ಸಂಜೆಯ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30 ಕ್ಕೆ ಪ್ರಾರಂಭವಾಗಲಿವೆ. ಟಾಸ್ ಸಮಯ ಸಂಜೆ 7 ಗಂಟೆಗೆ ಇರುತ್ತದೆ. ಆದರೆ, ಡಬಲ್ ಹೆಡರ್‌ನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ದಿನದ ಪಂದ್ಯಗಳ ಸಮಯ ಮಧ್ಯಾಹ್ನ 3:30 ಮತ್ತು ಟಾಸ್ ಸಮಯ ಮಧ್ಯಾಹ್ನ 3 ಗಂಟೆ ಆಗಿರುತ್ತದೆ.
ಉಭಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.
ಕೋಲ್ಕತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಕ್ವಿಂಟನ್ ಡಿ ಕಾಕ್, ರಹಮಾನಲ್ಲಾ ಗುರ್ಬಾಜ್, ಅಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಅನ್ರಿಚ್ ನಾರ್ಟ್ಜೆ, ಹರ್ಷಿತ್ ರಾಣಾ, ಸುನಿಲ್ ನರೈನ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಮಯಾಂಕ್ ಮಾರ್ಕಂಡೆ, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಸ್ಪೆನ್ಸರ್ ಜಾನ್ಸನ್, ಲವ್ನಿತ್ ಸಿಸೋಡಿಯಾ, ಅನುಕುಲ್ ರಾಯ್, ಮೊಯಿನ್ ಅಲಿ, ಉಮ್ರಾನ್ ಮಲಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications