KKR vs SRH IPL 2025: ಅಂಗ್‌ಕ್ರಿಶ್, ವೆಂಕಟೇಶ್ ಅರ್ಧಶತಕ: ಎಸ್‌ಆರ್‌ಎಸ್‌ಗೆ 201 ರನ್ ಗುರಿ
ಭರವಸೆಯ ಆಟಗಾರರಾದ ಅಂಗ್‌ಕ್ರಿಶ್ ರಘುವಂಶಿ ಹಾಗೂ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಕೋಲ್ಕತ್ತಾ ನೈಟ್ ರೈಡರ್ಸ್ 18ನೇ ಆವೃತ್ತಿಯ 15ನೇ ಪಂದ್ಯದಲ್ಲಿ ಉತ್ತಮ ಮೊತ್ತವನ್ನು ಸನ್‌ರೈಸರ್ಸ್ ವಿರುದ್ಧ ಕಲೆ ಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭ ಕಳಪೆಯಾಗಿತ್ತು. ಕ್ವಿಂಟನ್ ಡಿಕಾಕ್ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಭರಾಟೆಯಲ್ಲಿ ಪ್ಯಾಟ್ ಕಮಿನ್ಸ್ ಎಸೆತವನ್ನು ಡಿಪ್ ಮಿಡ್ ವಿಕೆಟ್‌ನಲ್ಲಿ ಬಾರಿಸಿ ಜೀಶಾನ್‌ಗೆ ಕ್ಯಾಚ್ ನೀಡಿದರು. ಇನ್ನೋಬ್ಬ ಸ್ಫೋಟಕ ಓಪನರ್ ಸುನಿಲ್ ನರೈನ್‌ಗೆ ಮೊಹಮ್ಮದ್ ಶಮಿ ತೋಡಿದ ಖೆಡ್ಡಾಗೆ ಬಲಿಯಾದರು.

16 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ ಹಾಗೂ ಅಂಗ್‌ಕ್ರಿಶ್ ರಘುವಂಶಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಅಲ್ಲದೆ ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಅಂಗ್‌ಕ್ರಿಶ್ ರಘುವಂಶಿ ಹಾಗೂ ರಹಾನೆ 51 ಎಸೆತಗಳಲ್ಲಿ 81 ರನ್ ಬಾರಿಸಿ ತಂಡಕ್ಕೆ ಆಧಾರವಾಯಿತು. ನಾಯಕ ಅಜಿಂಕ್ಯ ರಹಾನೆ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರಿಸಿದರು. ಗುರುವಾರದ ಪಂದ್ಯದಲ್ಲಿ ಅಜಿಂಕ್ಯ 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿ ಔಟ್ ಆದರು.
ಅಜಿಂಕ್ಯ ರಹಾನೆ ಔಟ್ ಆಗುತ್ತಿದ್ದಂತೆ ಅಂಗ್‌ಕ್ರಿಶ್ ರಘುವಂಶಿ ಸಹ ಸಂಯಮ ಕಳೆದುಕೊಂಡರು. ಇವರು 32 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಔಟ್ ಆದರು.

5ನೇ ವಿಕೆಟ್‌ಗೆ 91 ರನ್ ಜೊತೆಯಾಟ
ಐದನೇ ವಿಕೆಟ್‌ಗೆ ರಿಂಕು ಸಿಂಗ್ ಹಾಗೂ ವೆಂಕಟೇಶ್ ಅಯ್ಯರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ವೆಂಕಟೇಶ್ ಅಯ್ಯರ್ ಅವರಿಗೆ ಏಕೆ ಅಷ್ಟು ದುಬಾರಿ ಬೆಲೆ ನೀಡಿ ಖರೀದಿಸಿಲಾಗಿತ್ತು ಎಂಬುದನ್ನು ವೆಂಕಟೇಶ್ ಸಾಬೀತು ಪಡಿಸಿದ್ದಾರೆ. ಐದನೇ ವಿಕೆಟ್‌ಗೆ ಈ ಜೋಡಿ 41 ಎಸೆತಗಳಲ್ಲಿ 91 ರನ್ ಸಿಡಿಸಿ ಅಬ್ಬರಿಸಿತು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ ವೆಂಟಕೇಶ್ ಬಳಿಕ ರೌದ್ರ ರೂಪವನ್ನು ತಾಳಿದರು. ಖ್ಯಾತ ನಾಮ ಬೌಲರ್‌ಗಳ ವಿರುದ್ಧ ವೆಂಕಟೇಶ್ ಅಯ್ಯರ್ ಅಮೋಘ ಪ್ರದರ್ಶನ ನೀಡಿದರು. ವೆಂಕಟೇಶ್ 29 ಎಸೆತಗಳಲ್ಲಿ 206 ಸ್ಟ್ರೈಕ್ ರೇಟ್‌ನಲ್ಲಿ 60 ರನ್ ಸೇರಿಸಿದರು. ಈ ವೇಳೆ 7 ಬೌಂಡರಿ, 3 ಸಿಕ್ಸರ್ ಬಾರಿಸಿದರು.
ರಿಂಕು ಸಿಂಗ್ಸ್ ತಮ್ಮ ನೈಜ್ಯ ಆಟವನ್ನು ಆಡಿ ಗಮನ ಸೆಳೆದರು. ರಿಂಕು 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 32 ರನ್ ಸಿಡಿಸಿದರು. ಅಂತಿಮವಾಗಿ ಕೆಕೆಆರ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 200 ರನ್ ಸೇರಿಸಿತು.
ಸನ್ ತಂಡದ ಪರ ಶಮಿ, ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್, ಜೀಶನ್ ಅನ್ಸಾರಿ, ಕಮಿಂಡು ಮೆಂಡೀಸ್ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications