Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 DC: ಕ್ಯಾಪ್ಟನ್ಸಿ ಬೇಡವೇ ಬೇಡ; ನನ್ನ ಮೇಲೂ 'ಕರುಣೆ' ಇರಲಿ

ದುಬೈನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಟೀಮ್ ಇಂಡಿಯಾ ತಮ್ಮ ಅತ್ಯುತ್ತಮ ಫಾರ್ಮ್‌ನಿಂದ ಉತ್ತಮ ಪ್ರದರ್ಶನ ನೀಡಿ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಪ್ರಶಸ್ತಿ ಗೆಲುವಿನ ನಂತರ ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಮುಂಬೈಗೆ ಮರಳಿದ್ದಾರೆ. ಇಂಡಿಯನ್ಸ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2025ರ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರು ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳಲಿದ್ದಾರೆ. ಕೆಎಲ್ ರಾಹುಲ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಸೇರುವ ಉತ್ಸಾಹದಲ್ಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವಕ್ಕೆ ಮೂವರು ಆಟಗಾರರ ಹೆಸರು ಕೇಳಿಬರುತ್ತಿದೆ. ಅಕ್ಸರ್ ಪಟೇಲ್, ಫಾಪ್ ಡು ಪ್ಲೆಸಿಸ್ ಹಾಗು ಕೆಎಲ್ ರಾಹುಲ್ ಡೆಲ್ಲಿ ನಾಯಕತ್ವ ರೇಸ್‌ನಲ್ಲಿದ್ದಾರೆ. ಈ ಮೂವರಲ್ಲಿ ಒಬ್ಬ ಆಟಗಾರ ಮಾತ್ರ ನನಗೆ ನಾಯಕತ್ವ ಬೇಡ ಎಂದು ಹೇಳಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ.

IPL 2025 KL Rahul rejects Delhi Capitals captaincy offer

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಪ್ರಸ್ತಾಪವನ್ನು ಕೆಎಲ್ ರಾಹುಲ್ ತಿರಸ್ಕರಿಸಿದ್ದಾರೆ. ಹೀಗಾಗಿ ಅಕ್ಷರ್ ಪಟೇಲ್ ಆ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಐಪಿಎಲ್ 2025 ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಅಕ್ಸರ್ ಪಟೇಲ್ ಅವರನ್ನು ಹೆಸರಿಸುವ ಸಾಧ್ಯತೆಯಿದೆ. ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲು ಕೇಳಿತ್ತು. ಆದರೆ ಮುಂಬರುವ ಟೂರ್ನಿಯಲ್ಲಿ ಆಟಗಾರನಾಗಿ ತಂಡಕ್ಕೆ ಕೊಡುಗೆ ನೀಡಲು ಅವರು ಬಯಸಿದ್ದಾರೆ ಎಂದು ವರದಿಗಳಾಗಿವೆ.

ಕೆಎಲ್ ರಾಹುಲ್ ಪತ್ನಿ ಅತಿಯಾ ಶೆಟ್ಟಿ ಗರ್ಭಿಣಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಹುಲ್ ಕುಟುಂಬದ ಜೊತೆಗೆ ಇರುವುದು ಅನಿವಾರ್ಯ. ಹೀಗಾಗಿ ಅವರು ಒಂದು ಅಥವಾ ಎರಡು ಪಂದ್ಯಗಳಿಂದ ಹೊರಗುಳಿಯಬಹುದು. ಇದು ಅವರ ಮೊದಲ ಮಗುವಿನ ಸಂಭವನೀಯ ಜನನ ದಿನಾಂಕವನ್ನು ಅವಲಂಬಿಸಿರಲಿದೆ.

ಅಕ್ಸರ್ ಪಟೇಲ್ ಮತ್ತು ಕೆಎಲ್ ರಾಹುಲ್ ಜೊತೆಗೆ ಫಾಫ್ ಡು ಪ್ಲೆಸಿಸ್ ಕೂಡ ನಾಯಕತ್ವದ ಸ್ಥಾನಕ್ಕೆ ಮುಂಚೂಣಿಯಲ್ಲಿರುವಂತೆ ಕಂಡುಬಂದಿತು. ಆದರೆ ಇದೀಗ ರಾಹುಲ್ ಹಿಂದೆ ಸರಿದಿರುವುದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾಜಿ ನಾಯಕ ಫಾಪ್ ಡು ಪ್ಲೆಸಿಸ್, ಅಕ್ಷರ್ ಪಟೇಲ್ ಮತ್ತು ಕರುಣ್ ನಾಯರ್ ಹೆಸರುಗಳು ಕೇಳಿಬರುತ್ತಿವೆ. ಅಕ್ಸರ್ ಪಟೇಲ್ ಅವರಿಗಿಂತ ಫಾಪ್ ಮತ್ತು ಕರುಣ್ ನಾಯರ್ ಅವರಿಗೆ ತಂಡವನ್ನು ಮುನ್ನಡೆಸಿರುವ ಅನುಭವ ಹೆಚ್ಚಿದೆ.

ಫಾಪ್ ಡು ಪ್ಲೆಸಿಸ್ ಮತ್ತು ಕರುಣ್ ನಾಯರ್ ಅವರಿಗೆ ಹೋಲಿಸಿದರೆ ಅಕ್ಸರ್ ಪಟೇಲ್ ಅಷ್ಟೊಂದು ಉತ್ತಮ ಆಟಗಾರ ಅಲ್ಲ. ಆದರೆ ಅವರು ತಂಡಕ್ಕೆ ನೆರವಾಗಬಲ್ಲರು. ಫಾಪ್ ಡು ಪ್ಲೆಸಿಸ್ ಅವರಿಗೆ ನಾಯಕತ್ವದ ಅಪಾರ ಅನುಭವಿದೆ. ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಫಾಪ್ ಬಿಗ್ ಇನ್ನಿಂಗ್ಸ್ ಆಡಬಲ್ಲರು. ಮತ್ತೊಂದೆಡೆ ಕರುಣ್ ನಾಯರ್ ಕೂಡ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶತಕದ ಶತಕ ಮೇಲೆ ಬಾರಿಸಿ ಕರುಣ್ ಮಿಂಚಿದ್ದಾರೆ. ಹೀಗಾಗಿ ಕರುಣ್ ನಾಯರ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬಹುದು.

Story first published: Tuesday, March 11, 2025, 16:48 [IST]
Other articles published on Mar 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+