IPL 2025: ಗೌತಮ್ ಗಂಭೀರ್ ಸ್ಥಾನಕ್ಕೆ ಸಿಎಸ್‌ಕೆ ಮಾಜಿ ಸ್ಟಾರ್ ಆಲ್‌ರೌಂಡರ್ ನೇಮಕ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮುಂಬರುವ 2025ರ ಐಪಿಎಲ್ ಟೂರ್ನಿಗೆ ಕೆಕೆಆರ್ ತನ್ನ ಹೊಸ ಮಾರ್ಗದರ್ಶಕನನ್ನು ಘೋಷಿಸಿದೆ.
ಗೌತಮ್ ಗಂಭೀರ್ ಅವರು ಭಾರತ ತಂಡ ಹೆಡ್ ಕೋಚ್ ಆದ ನಂತರ, ಕೆಕೆಆರ್ ಮೆಂಟರ್ ಹುದ್ದೆ ಖಾಲಿಯಾಗಿತ್ತು. ಇದೀಗ ಕೆಕೆಆರ್ ಮುಂದಿನ ಐಪಿಎಲ್ ಆವೃತ್ತಿಯ ಆರಂಭಕ್ಕೂ ಮುನ್ನ ವೆಸ್ಟ್ ಇಂಡೀಸ್‌ನ ಮಾಜಿ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೊ ಅವರನ್ನು ಹೊಸ ಮೆಂಟರ್ ಆಗಿ ನೇಮಿಸಿದೆ. ಕೆಕೆಆರ್ ಸಿಇಒ ವೆಂಕಿ ಮೈಸೂರು ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

ಬ್ರಾವೋ ಅನುಭವ ಅಗತ್ಯ
ಡಿಜೆ ಬ್ರಾವೋ ನಮ್ಮೊಂದಿಗೆ ಸೇರಿಕೊಳ್ಳುತ್ತಿರುವುದು ದೊಡ್ಡ ಬೆಳವಣಿಗೆಯಾಗಿದೆ. ಬ್ರಾವೋ ಎಲ್ಲೇ ಆಡಿದರೂ, ಗೆಲ್ಲುವ ಅವರ ಬಯಕೆ, ಅನುಭವ ಮತ್ತು ಜ್ಞಾನವು ಫ್ರಾಂಚೈಸಿಗೆ ಮತ್ತು ಎಲ್ಲಾ ಆಟಗಾರರಿಗೆ ಅಗತ್ಯವಾಗಿದೆ. ಅವರು ಪ್ರಪಂಚದಾದ್ಯಂತದ ವಿವಿಧ ಲೀಗ್‌ಗಳಲ್ಲಿ ನಮ್ಮ ನೈಟ್ ರೈಡರ್ಸ್ ಫ್ರಾಂಚೈಸಿಗಳೊಂದಿಗೆ ಕೆಲಸ ಮಾಡುತ್ತಾರೆ ಎಂಬುದು ನಮಗೆ ತುಂಬಾ ಸಂತಸ ತಂದಿದೆ ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ತಿಳಿಸಿದ್ದಾರೆ.
ಮೆಂಟರ್ ಹುದ್ದೆ ಭರ್ತಿ
ಐಪಿಎಲ್ 2024ರಲ್ಲಿ ಕೆಕೆಆರ್ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಭಾರತ ತಂಡದ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳೆಗಿಳಿಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಭಾರತ ತಂಡದ ಹೆಡ್ ಕೋಚ್ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಿದ್ದ ಗೌತಮ್ ಗಂಭೀರ್ ಅರ್ಜಿ ಸಲ್ಲಿಸಿದ್ದರು.
ಇದಾದ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಗೌತಮ್ ಗಂಭೀರ್ ಕೆಕೆಆರ್ ನಿಂದ ಹೊರ ಬಂದಿದ್ದರು. ಕೆಕೆಆರ್ ಕೂಡ ಮುಂಬರುವ 2025ರ ಐಪಿಎಲ್ ಟೂರ್ನಿಗಾಗಿ ಹೊಸ ಮೆಂಟರ್ ಹುಡುಕಾಟದಲ್ಲಿತ್ತು. ಇದೇ ವೇಳೆ ಡ್ವೇನ್ ಬ್ರಾವೋ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೆಕೆಆರ್ ಇದೀಗ ಅವರನ್ನು ತನ್ನ ಹೊಸ ಮೆಂಟರ್ ಎಂದು ಘೋಷಣೆ ಮಾಡಿದೆ.
ಬ್ರಾವೋ ವಿದಾಯ
2021ರಲ್ಲಿ 40 ವರ್ಷದ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ ಫ್ರಾಂಚೈಸಿ ಲೀಗ್ ಕ್ರಿಕೆಟ್ ಆಡುವುದನ್ನು ಮುಂದುವರೆಸಿದ್ದರು. ಇತ್ತೀಚೆಗೆ ಅವರು 2024ರ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಬೌಲಿಂಗ್ ಸಲಹೆಗಾರರಾಗಿದ್ದರು. ಈ ಬಾರಿ ಸಿಪಿಎಲ್ ಟೂರ್ನಿ ಮಧ್ಯೆದಲ್ಲೇ ಅವರು ಗಾಯಗೊಂಡಿದ್ದರು. ಇದಾದ ನಂತರ ಅವರು ಎಲ್ಲಾ ಮಾದರಿ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಚಾಂಪಿಯನ್ ಬ್ರಾವೋ
ತಮ್ಮ 18 ವರ್ಷಗಳ ವೃತ್ತಿಜೀವನದಲ್ಲಿ, ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಐಪಿಎಲ್, ಪಿಎಸ್ಎಲ್ ಮತ್ತು ಬಿಗ್ ಬ್ಯಾಷ್ ಟೂರ್ನಿಗಳಲ್ಲಿ ಅವರು ಆಡಿದ ತಂಡಗಳು ಚಾಂಪಿಯನ್ ಆಗಿವೆ. ಅಲ್ಲದೆ, ಅವರು 2012 ಮತ್ತು 2016ರಲ್ಲಿ ಟಿ20 ವಿಶ್ವ ಚಾಂಪಿಯನ್ ಆದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದಾರೆ. ಹೀಗಾಗಿಯೇ ಇವರನ್ನು ಕ್ರಿಕೆಟ್ ಅಭಿಮಾನಿಗಳು 'ಚಾಂಪಿಯನ್ ಬ್ರಾವೋ' ಎಂದು ಕರೆಯುತ್ತಾರೆ.
ಬ್ರಾವೋ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಆಡಿದ್ದಾರೆ. ಆದರೆ ಅವರು ತಮ್ಮ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ವೃತ್ತಿಜೀವನದ ಪ್ರಮುಖ ಭಾಗದಲ್ಲಿ ನೈಟ್ ರೈಡರ್ಸ್ ಫ್ರಾಂಚೈಸಿಯೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದಾರೆ. ಬ್ರಾವೋ ಅವರು 2022 ಮತ್ತು 2023ರ ಐಪಿಎಲ್ ಆವೃತ್ತಿಗಳಲ್ಲಿ ಸಿಎಸ್‌ಕೆ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications