Virat Kohli: ಕೊನೆಗೂ ಕಾದು ಕುಳಿತ ಪುಟ್ಟ ಅಭಿಮಾನಿಗೆ ಸಿಕ್ತು ವಿರಾಟ್ ಕೊಹ್ಲಿ ಆಟೋಗ್ರಾಫ್
ನಾಳೆಯಿಂದ ಅಂದರೆ, ಮಾರ್ಚ್ 22 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಭಾರತದಲ್ಲಿ ಐಪಿಎಲ್ 2025 ರ ಹವಾ ಜೋರಾಗಿದ್ದು, ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ಸಪೋರ್ಟ್ ಮಾಡಲು ಸಜ್ಜಾಗಿದ್ದಾರೆ. ಈರ್ಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಪುಟ್ಟ ಅಭಿಮಾನಿಯನ್ನು ಸಂತೋಷಪಡಿಸಿದ್ದಾರೆ.
ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ಕನಸು ಲಕ್ಷಾಂತರ ಅಭಿಮಾನಿಗಳಿಗಿರುತ್ತದೆ. ಆದರೆ ಈ ಸಂದರ್ಭ ಎಲ್ಲರಿಗೂ ಸಿಗುವುದಿಲ್ಲ. ಕೋಲ್ಕತ್ತಾದ ಪುಟ್ಟ ಅಭಿಮಾನಿಗೆ ವಿರಾಟ್ ಕೊಹ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿದ್ದು, ಅವರಿಂದ ಆಟೋಗ್ರಾಫ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಲಿಗಂಜ್‌ನ ಶ್ರೀ ಶ್ರೀ ಅಕಾಡೆಮಿಯ ಉದಯೋನ್ಮುಖ ಕ್ರಿಕೆಟಿಗ ಅರ್ಹಮ್ ಶಾ ವಿರಾಟ್ ಕೊಹ್ಲಿ ಅವರಿಂದ ಆಟೋಗ್ರಾಫ್ ಪಡೆದ ಪುಟ್ಟ ಅಭಿಮಾನಿ. ಸತತ ಕಾಯುವಿಕೆಯ ನಂತರ ವಿರಾಟ್ ಕೊಹ್ಲಿ ಆಟೋಗ್ರಾಫ್ ಅರ್ಹಮ್ ಶಾಗೆ ಸಿಕ್ಕಿದೆ. ವಿರಾಟ್ ಕೊಹ್ಲಿ ಭೇಟಿಯಾಗಲು ಅರ್ಹಮ್ ಸತತ ನಾಲ್ಕು ಗಂಟೆಗಳ ಕಾಲ ಕಾದಿದ್ದರು. ಆದರೆ ಹತ್ತಿರ ಬರಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಶುಕ್ರವಾರ ಮತ್ತೊಂದು ಅವಕಾಶ ಸಿಕ್ಕಿದ್ದರಿಂದ ಅವರ ಪರಿಶ್ರಮ ಫಲ ನೀಡಿತು. ಕಾದು ಕುಳಿತ್ತಿದ್ದ ಅರ್ಹಮ್ ಕೊಹ್ಲಿಯಿಂದ ತಮ್ಮ ಬ್ಯಾಟ್‌ಗೆ ಸಹಿ ಹಾಕಿಸುವಲ್ಲಿ ಯಶಸ್ವಿಯಾದರು.
ಅಭ್ಯಾಸಕ್ಕೂ ಮುನ್ನ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ವಿರಾಟ್ ಕೊಹ್ಲಿ ಅವರು ಅರ್ಹಮ್‌ನಂತಹ ಪುಟ್ಟ ಅಭಿಮಾನಿಗಳನ್ನು ಗುರುತಿಸಿರುವುದು ಎಲ್ಲರ ಗಮನ ಸೆಳೆದಿದೆ. ವಿರಾಟ್ ಕೊಹ್ಲಿಯಿಂದ ಆಟೋಗ್ರಾಫ್ ಪಡೆ ಅರ್ಹಮ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅರ್ಹಮ್, ವಿರಾಟ್ ಕೊಹ್ಲಿ ಅವರಿಂದ ಪಡೆದಿರುವ ಆಟೋಗ್ರಾಫ್ ನನ್ನ ಜೀವಮಾನದ ನೆನಪು. ಅವರು ನನಗೆ ಕ್ರಿಕೆಟ್ ಆಡಲು ಸ್ಫೂರ್ತಿ. ವಿರಾಟ್ ನನ್ನ ಹತ್ತಿರ ಬರುತ್ತಿದ್ದಾಗ ನನಗೆ ಭಯವಾಗುತ್ತಿತ್ತು. ನಾನು ವಿರಾಟ್ ಸರ್, ವಿರಾಟ್ ಸರ್ ಎಂದು ಕೂಗುತ್ತಿದ್ದೆ. ಅವರು ಹಿಂತಿರುಗಿ ಬಂದು ನನಗೆ ಆಟೋಗ್ರಾಫ್ ಕೊಟ್ಟರು ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications