Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 Retention: ಕೆಎಲ್ ರಾಹುಲ್‌ರನ್ನು ಕೈಬಿಟ್ಟ ಲಕ್ನೋ; ಮೆಗಾ ಹರಾಜಿಗೆ ಬಂದ ಕನ್ನಡಿಗ

ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಟೂರ್ನಿಗಾಗಿ ಎಲ್ಲಾ 10 ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಮತ್ತು ತಾವಯ ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತನ್ನ ನಾಯಕ ಕೆಎಲ್ ರಾಹುಲ್ ಅವರನ್ನು ಬಿಡುಗಡೆ ಮಾಡಿದೆ.

ಐಪಿಎಲ್ 2025ರ ಮೆಗಾ ಹರಾಜಿಗೆ ಕೆಎಲ್ ರಾಹುಲ್ ಬಂದಿದ್ದು. ಭಾರೀ ಕುತೂಹಲ ಮೂಡಿಸಿದೆ. ವೆಸ್ಟ್‌ ಇಂಡೀಸ್ ಸ್ಪೋಟಕ ಬ್ಯಾಟರ್-ವಿಕೆಟ್‌ ಕೀಪರ್ ನಿಕೋಲಸ್ ಪುರನ್, ಮಾಯಾಂಕ್ ಯಾದವ್, ರವಿ ಬಿಷ್ಣೋಯ್, ಆಯುಷ್ ಬದೋನಿ (ಅನ್‌ಕ್ಯಾಪ್ಡ್) ಅವರನ್ನು ಲಕ್ನೋ ಉಳಿಸಿಕೊಂಡಿದೆ.

IPL 2025 LSG Retention Uncapped Players LSG Strategy Player Choices and KL Rahul Value Analyzed

ಎಲ್‌ಎಸ್‌ಜಿ ಫ್ರಾಂಚೈಸಿ ತನ್ನ ಮೊದಲ ಆಯ್ಕೆಯ ಆಟಗಾರನಾಗಿ ನಿಕೋಲಸ್ ಪೂರನ್ ಅವರನ್ನು ಉಳಿಸಿಕೊಂಡಿದೆ. ಪೂರನ್ ಅವರಿಗೆ ಬರೋಬ್ಬರಿ 21 ಕೋಟಿ ರೂ. ಅನ್ನು ಎಲ್‌ಎಸ್‌ಜಿ ನೀಡಿದೆ. ಯುವ ಸ್ಟಾರ್ ವೇಗದ ಬೌಲರ್ ಮಯಾಂಕ್ ಯಾದವ್ ಅವರನ್ನು 11 ಕೋಟಿ ರೂ.ಗೆ ಎರಡನೇ ಆಯ್ಕೆಯ ಆಟಗಾರನಾಗಿ ಎಲ್‌ಎಸ್‌ಜಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಲಕ್ನೋ ಪರ ಅದ್ಭುತ ಸ್ಪಿನ್ ಬೌಲಿಂಗ್ ಪ್ರದರ್ಶನ ನೀಡಿರುವ ರವಿ ಬಿಷ್ಣೋಯ್ ಅವರು ಮೂರು ಆಯ್ಕೆಯ ಆಟಗಾರನಾಗಿ ತಂಡದಲ್ಲಿ ಉಳಿದುಕೊಂಡಿದ್ದಾರೆ. ರವಿ ಬಿಷ್ಟೋಯಿ ಅವರಿಗೆ 11 ಕೋಟಿ ರೂ. ನೀಡಿ ಎಲ್‌ಎಸ್‌ಜಿ ತಂಡದಲ್ಲೇ ಉಳಿಸಿಕೊಂಡಿದೆ. ಇನ್ನು ಅನ್‌ಕ್ಯಾಪ್ಡ್‌ ಆಟಗಾರರ ಪಟ್ಟಿಯಲ್ಲಿ ಯುವ ಬ್ಯಾಟರ್ ಆಯುಷ್ ಬದೋನಿ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಮತ್ತೊಂದೆಡೆ ಎಡಗೈ ವೇಗಿ ಮೊಹ್ಸಿನ್ ಖಾನ್ ಅವರನ್ನು ಸಹ 4 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ.

ಎಲ್‌ಎಸ್‌ಜಿ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ

ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುದ್ವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್ ಜೋಸೆಫ್, ಕೆ. ಗೌತಮ್, ಅರ್ಶಿನ್ ಕುಲ್ಕರ್ನಿ, ಅರ್ಶಿನ್ ಕುಲ್ಕರ್ ಎಂ. ಸಿದ್ಧಾರ್ಥ್, ಆಷ್ಟನ್ ಟರ್ನರ್, ಮ್ಯಾಟ್ ಹೆನ್ರಿ, ಮೊಹಮ್ಮದ್. ಅರ್ಷದ್ ಖಾನ್, ಮಾರ್ಕ್ ವುಡ್, ಡೇವಿಡ್ ವಿಲ್ಲಿ, ಶಿವಂ ಮಾವಿ.

Story first published: Thursday, October 31, 2024, 17:51 [IST]
Other articles published on Oct 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+