ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 19 ನೇ ಪಂದ್ಯವನ್ನು ಮರು ನಿಗದಿಪಡಿಸಲಾಗಿದೆ. ಉಭಯ ತಂಡಗಳ ನಡುವೆ ಏಪ್ರಿಲ್ 6 ರಂದು ಈಡನ್ ಗಾರ್ಡನ್ಸ್‌ನಲ್ಲಿ ಪಂದ್ಯ ನಡೆಯಬೇಕಿತ್ತು. ಈಗ ಕೆಕೆಆರ್ ಮತ್ತು ಎಲ್‌ಎಸ್‌ಜಿ ಪಂದ್ಯದ ದಿನಾಂಕವನ್ನು ಮರು ನಿಗದಿಪಡಿಸಲಾಗಿದ್ದು, ಏಪ್ರಿಲ್ 8 ರಂದು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರತಾ ನಿಯೋಜನೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ಗೆ ಸಲ್ಲಿಸಿದ ಮನವಿಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2025 ರ 19 ನೇ ಪಂದ್ಯದ ವೇಳಾಪಟ್ಟಿಯನ್ನು ಮರು ಪ್ರಕಟಿಸಿದೆ. ಈ ಪಂದ್ಯ ಏಪ್ರಿಲ್ 6, 2025 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿತ್ತು ಎಂದು ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಾರಿ ಕೆಕೆಆರ್ ಮತ್ತು ಎಲ್ಎಸ್‌ಜಿ ನಡುವಿನ ಪಂದ್ಯ ನಡೆಯುವ ಏಪ್ರಿಲ್ 6 ರಂದು ರಾಮನವಮಿಯ ಇದ್ದು, ಈ ದಿನದಂದು ಭದ್ರತೆಯ ಕೊರತೆಯಿಂದಾಗಿ ದಿನಾಂಕ ಬದಲಾವಣೆ ಮಾಡಲಾಗಿದೆ. ಇದಕ್ಕೂ ಮುನ್ನ ಏಪ್ರಿಲ್ 6 ರಂದು ಎಲ್‌ಎಸ್‌ಜಿ ಮತ್ತು ಕೆಕೆಆರ್ ನಡುವಿನ ಪಂದ್ಯವನ್ನು ಆಯೋಜಿಸಲು ಕೋಲ್ಕತ್ತಾ ಪೊಲೀಸರು ಹಸಿರು ನಿಶಾನೆ ತೋರಿಸಿರಲಿಲ್ಲ. ಈ ಬಗ್ಗೆ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸ್ನೇಹಾಶಿಶ್ ಗಂಗೋಪಾಧ್ಯಾಯ ಮಾಹಿತಿ ನೀಡಿದ್ದರು.
ಈಗ ಭದ್ರತಾ ಕಾರಣಗಳಿಂದ ಕೋಲ್ಕತ್ತಾ ಪೊಲೀಸರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ಗೆ ಮಾಡಿದ ಮನವಿಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಂದ್ಯದವನ್ನು ಮಂಗಳವಾರ, ಏಪ್ರಿಲ್ 8, 2025 ರಂದು ಮಧ್ಯಾಹ್ನ 3:30 ಗಂಟೆಗೆ ನಡೆಸಲು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಉಳಿದ ಪಂದ್ಯಗಳ ವೇಳಾಪಟ್ಟಿ ಬದಲಾವಣೆ ಆಗಿಲ್ಲ.
ಕೆಕೆಆರ್ ಮತ್ತು ಎಲ್‌ಎಸ್‌ಜಿ ಪಂದ್ಯದ ಮರು ವೇಳಾಪಟ್ಟಿಯೊಂದಿಗೆ, ಏಪ್ರಿಲ್ 6, ಭಾನುವಾರ ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಕೆಕೆಆರ್ ಮತ್ತು ಎಲ್‌ಎಸ್‌ಜಿ ಮುಖಾಮುಖಿಯಾಗದರೆ, ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಗುಜರಾತ್ ಟೈಟಾನ್ಸ್ ಎದುರಿಸಲಿದೆ.
ಕಳೆದ ವರ್ಷ ರಾಮ ನವಮಿ ದಿನದಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಐಪಿಎಲ್ ಪಂದ್ಯವಿತ್ತು. ಈ ಪಂದ್ಯದ ದಿನಾಂಕವನ್ನು ಬದಲಾಯಿಸಿ ಮುಂದೂಡಲಾಗಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಎದುರಾಗಿದೆ.