IPL 2025 LSG vs MI: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್ ಅರ್ಧಶತಕದ ಸೊಬಗು
ಲಕ್ನೋನ ಎಕಾನ ಅಂಗಳದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರರಾದ ಐಡೆನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಎಲ್‌ಎಸ್‌ಜಿ ಉತ್ತಮ ಮೊತ್ತವನ್ನು ಕಲೆ ಹಾಕಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ 204 ರನ್‌ಗಳ ಗುರಿಯನ್ನು ಎಲ್‌ಎಸ್‌ಜಿ ತಂಡ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಎಲ್‌ಎಸ್‌ಜಿ ತಂಡದ ಆರಂಭಿಕಾರದ ಐಡೇನ್ ಮಾರ್ಕ್ರಮ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ಕ್ಲಾಸಿಕ್ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಎಂಐ ಶ್ರಮಿಸಿತು. ಪವರ್ ಪ್ಲೇನಲ್ಲಿ ಆತಿಥೇಯ ತಂಡಕ್ಕೆ ಪವರ್ ಫುಲ್ ಆರಂಭ ನೀಡಿದ ಜೋಡಿ ಅಬ್ಬರಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 7 ಓವರ್‌ಗಳಲ್ಲಿ 76 ರನ್ ಸೇರಿಸಿತು.

ಆರಂಭಿಕರಾದ ಮಿಚೆಲ್ ಮಾರ್ಷ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ. ಇವರು 31 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ 60 ರನ್ ಬಾರಿಸಿದರು. ಇವರಿಗೆ ವಿಘ್ನೇಶ್ ಪುತ್ತೂರ್‌ಗೆ ಖೆಡ್ಡಾ ತೋಡಿದರು.
ಲೀಗ್‌ನಲ್ಲಿ ಭರ್ಜರಿ ರನ್‌ಗಳನ್ನು ಕಲೆ ಹಾಕಿ ಮಿಂಚಿದ್ದ ನಿಕೋಲಸ್ ಪೂರನ್ ಅವರಿಗೆ ಹಾರ್ದಿಕ್ ಪಾಂಡ್ಯ ಪೆವಿಲಿಯನ್ ದಾರಿ ತೋರಿಸಿದರು. ಔಟ್ ಸೈಡ್ ಆಫ್ ಸ್ಟಂಪ್ ಆಚೆಗೆ ಹಾಕಿದ ಚೆಂಡನ್ನು ಶಾರ್ಟ್ ಫೈನ್ ಲೆಗ್‌ನಲ್ಲಿ ಚಹಾರ್‌ಗೆ ಕ್ಯಾಚ್ ನೀಡಿದರು. ದುಬಾರಿ ಆಟಗಾರ ರಿಷಭ್ ಪಂತ್ ಮತ್ತೊಮ್ಮೆ ತಮ್ಮ ಕಳಪೆ ಪ್ರದರ್ಶನ ಮುಂದುವರೆಸಿದರು. ಯುವ ಆಟಗಾರ ಆಯುಷ್ ಬದೋನಿ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ಇವರು 19 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಯುವ ವೇಗಿ ಅಶ್ವನಿ ಕುಮಾರ್ ಅವರಿಗೆ ಬಿಗ್ ಹಿಟ್ ಬಾರಿಸಲು ಹೋಗಿ ಔಟ್ ಆದರು.
ಐಡೆನ್ ಮಾರ್ಕ್ರಾಮ್ ಅರ್ಧಶತಕ
ಆರಂಭಿಕರಾದ ಐಡೆನ್ ಮಾರ್ಕ್ರಾಮ್ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಕ್ಷಮತೆಗೆ ತಕ್ಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ಐಡೆನ್ ಮಾರ್ಕ್ರಾಮ್ ನಂತರ ಗೇರ್ ಶಿಫ್ಟ್ ಮಾಡಿದರು. ಇವರು 38 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿ ಔಟ್ ಆದರು. ಡೇವಿಡ್ ಮಿಲ್ಲರ್ ಅವರು 13 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 27 ರನ್ ಸಿಡಿಸಿ ಹಾರ್ದಿಕ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಸೇರಿಸಿತು.
ಹಾರ್ದಿಕ್ ಪಂಚ್
ಮುಂಬೈ ಇಂಡಿಯನ್ಸ್ ತಂಡದ ಪರ ಹಾರ್ದಿಕ್ ಪಾಂಡ್ಯ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಉಳಿದಂತೆ ಟ್ರೆಂಟ್ ಬೋಲ್ಟ್, ಅಶ್ವನಿ ಕುಮಾರ್, ವಿಘ್ನೇಶ್ ಪುತ್ತೂರು ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications