IPL 2025: ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಲಕ್ನೋದಿಂದ ಕೆಎಲ್ ರಾಹುಲ್ ರಿಲೀಸ್ ಆಗುವುದು ಖಚಿತ!
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಆವೃತ್ತಿಗಾಗಿ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ರಿಲೀಸ್ ಮಾಡುವ ಪ್ರಕ್ರಿಯೆ ಅಕ್ಟೋಬರ್ 31 ರಂದು ಕೊನೆಗೊಳ್ಳಲಿದೆ. ಇದೀಗ ಬಿಸಿಸಿಐ ನೀಡಿರುವ ಗಡುವು ಮುಗಿಯಲು ಕೇವಲ ಒಂದು ವಾರ ಬಾಕಿ ಇದೆ. ಅದಕ್ಕೂ ಮುನ್ನ ಬೇರೆ ಬೇರೆ ತಂಡಗಳ ಬಗ್ಗೆ ಬಿಗ್ ಅಪ್ಡೇಟ್ ಹೊರ ಬೀಳುತ್ತಿವೆ.
ಇದೀಗ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ರಿಲೀಸ್ ಮಾಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೆಎಲ್ ರಾಹುಲ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಗೊತ್ತಿರುವ ವಿಚಾರ. 2022 ರಿಂದ ಮೂರು ಆವೃತ್ತಿಗಳಲ್ಲಿ ಲಕ್ನೋ ತಂಡವನ್ನು ರಾಹುಲ್ ನಾಯಕನ್ನಾಗಿ ಮುನ್ನಡೆಸಿದ್ದಾರೆ. ರಾಹುಲ್ ನಾಯಕತ್ವದಲ್ಲಿ ಲಕ್ನೋ ಎರಡು ಬಾರಿ ಪ್ಲೇಆಫ್ ತಲುಪಿತು. ಕಳೆದ ಆವೃತ್ತಿಯಲ್ಲಿ ಆಟಗಾರರ ಕಳಪೆ ಪ್ರದರ್ಶನದ ಪರಿಣಾಮ ಲಕ್ನೋ ತಂಡ 7ನೇ ಸ್ಥಾನದಲ್ಲಿತ್ತು.

ಮಾಧ್ಯಮ ವರದಿಗಳ ಪ್ರಕಾರ, ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಬಿಡುಗಡೆ ಮಾಡಲಿದೆ. ಲಕ್ನೋ ಫ್ರಾಂಚೈಸಿ ಮುಂಬರುವ ಆವೃತ್ತಿಗೆ ಬಲಿಷ್ಠ ತಂಡವನ್ನು ಕಟ್ಟಲು ಮತ್ತು ಹೊಸ ಆಟಗಾರರನ್ನು ಮೆಗಾ ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಳ್ಳಲು ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ. ಕಳೆದ ಆವೃತ್ತಿ ಐಪಿಎಲ್‌ನಲ್ಲಿ ರಾಹುಲ್ ಅವರ ಪ್ರದರ್ಶನ, ಭಾರತ ಟಿ20 ತಂಡದಿಂದ ಹೊರಗುಳಿದಿರುವುದು ಮತ್ತು ಅವರ ಪ್ರಸ್ತುತ ಫಾರ್ಮ್ ಅನ್ನು ಪರಿಗಣಿಸಿ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಮೆಗಾ ಹರಾಜಿಗೂ ಮುನ್ನ ಕೈಬಿಡಲು ನಿರ್ಧರಿಸಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ರಿಲೀಸ್ ಮಾಡಲು ಕಾರಣವೇನು?
2022ರ ಐಪಿಎಲ್ ವೇಳೆ ರಾಹುಲ್ ಅವರಿಗೆ ಲಕ್ನೋ ರಾಜಮರ್ಯಾದೆ ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಅಲ್ಲಿಂದ ಮುಂದಿನ ಎರಡು ಆವೃತ್ತಿಗಳಲ್ಲಿ ರಾಹುಲ್ ತಂಡವನ್ನು ಪ್ಲೇ-ಆಫ್‌ಗೆ ಮುನ್ನಡೆಸಿದ್ದರು. ಜೊತೆಗೆ ತಂಡದ ಪರ ಅದ್ಭುತ ಲಯದಲ್ಲಿ ಕಾಣಿಸಿಕೊಂಡಿದ ಅವರು ಉತ್ತಮ ರನ್ ಕಲೆ ಹಾಕಿದ್ದರು. ಆದರೆ, ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಹುಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಪ್ಲೇ-ಆಪ್ ತಲುಪಲು ಸಾಧ್ಯವಾಗಲಿಲ್ಲ.
ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಹೊಸ ಮಾರ್ಗದರ್ಶಕರಾದ ಜಹೀರ್ ಖಾನ್ ಮತ್ತು ಕೋಚ್ ಜಸ್ಟಿನ್ ಲ್ಯಾಂಗರ್ ಕಳೆದ ಋತುವಿನಲ್ಲಿ ಫ್ರಾಂಚೈಸಿಯ ಸೋಲಿನಲ್ಲಿ ರಾಹುಲ್ ಪಾತ್ರವನ್ನು ವಿಶ್ಲೇಷಿಸಿದ್ದಾರೆ. ರಾಹುಲ್ ಕ್ರೀಸ್‌ನಲ್ಲಿ ಸುದೀರ್ಘ ಕಾಲ ನಿಂತು ಆಡಿದ ಬಹುತೇಕ ಪಂದ್ಯಗಳಲ್ಲಿ ಲಕ್ನೋ ತಂಡ ಸೋಲು ಕಂಡಿದೆ. ಅದರ ಅರ್ಥ ಅವರ ಸ್ಟ್ರೈಕ್ ರೇಟ್ ಪಂದ್ಯವನ್ನು ಗೆಲ್ಲಿಸಲು ಸಾಕಾಗುತ್ತಿಲ್ಲ ಎಂಬುದಾಗಿದೆ. ಕಳೆದ ಆವೃತ್ತಿ ಸಮಯದಲ್ಲೂ ರಾಹುಲ್ ಸ್ಟ್ರೈಕ್ ರೇಟ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದಕ್ಕಾಗಿ ಅವರು ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದರು.
ಆರ್‌ಸಿಬಿ ಫ್ಯಾನ್ಸ್‌ಗೆ ಸಂತಸ
ಲಕ್ನೋ ಸೂಪರ್ ಜೈಂಟ್ಸ್ ತಂಡ ಕೆಎಲ್ ರಾಹುಲ್ ಅವರನ್ನು ಬಿಡುಗಡೆ ಮಾಡಲಿದೆ ಎಂಬು ವಿಚಾರ ತಿಳಿಯುತ್ತದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳು ಸಂತಸಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಫ್ರಾಂಚೈಸಿ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಡವನ್ನು ಅಭಿಮಾನಿಗಳು ಹಾಕುತ್ತಿದ್ದಾರೆ. ರಾಹುಲ್ ಕೂಡ ತವರಿನ ತಂಡ ಸೇರುವ ತಮ್ಮ ಇಂಗಿತವನ್ನು ಹಲವು ಬಾರಿ ವ್ಯಕ್ತಡಿಸಿದ್ದಾರೆ. ಜೊತೆಗೆ ಐಪಿಎಲ್ 2025ರಲ್ಲಿ ರಾಹುಲ್ ಆರ್‌ಸಿಬಿ ಸೇರುತ್ತಾರೆ ಎಂಬ ಹಲವು ವಿಚಾರಗಳು ಕ್ರಿಕೆಟ್ ಗಲ್ಲಿಗಳಲ್ಲಿ ಚರ್ಚೆ ಆಗುತ್ತಿವೆ. ಒಂದು ವೇಳೆ ರಾಹುಲ್ ಆರ್‌ಸಿಬಿ ಸೇರಿದರೆ, ತಂಡಕ್ಕೆ ಆನೆ ಬಲ ಬಂದಂತಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications