IPL 2025 LSG: ಮೈದಾನಕ್ಕೆ ಇಳಿಯುವ ಮುನ್ನವೇ ರಿಷಭ್ ಪಂತ್ ಪಡೆಗೆ ಹಿನ್ನಡೆ: ಮೊದಲ ಚರಣಕ್ಕೆ ವೇಗಿ ಅಲಭ್ಯ
ಇಂಡಿಯನ್ ಪ್ರೀಮಿಯರ್ ರಂಗು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಮಾರ್ಚ್ 22 ರಿಂದ ದೇಶದಲ್ಲಿ 18ನೇ ಅವೃತ್ತಿಯ ಐಪಿಎಲ್ ಆರಂಭವಾಗಲಿದೆ. ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳು ಈಗಾಗಲೇ ತಯಾರಿಯನ್ನು ನಡೆಸಿವೆ. ಈ ಲೀಗ್ ಆರಂಭಕ್ಕೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿವೆ. ಹಾಗಿದ್ದರೆ ಎಲ್‌ಎಸ್‌ಜಿ ಟೆನ್ಷನ್ ಆಗಿರುವ ವಿಚಾರ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಉಳಿಸಿಕೊಂಡಿದ್ದ ವೇಗಿ ಮಯಾಂಕ್ ಯಾದವ್ ಐಪಿಎಲ್ ಆರಂಭಿಕ ಪಂದ್ಯಗಳಿಂದ ದೂರ ಸರಿದಿದ್ದಾರೆ. ಮಯಾಂಕ್ ಯಾದವ್ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದು, ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಮತ್ತೆ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ. ಇವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಬಹುದು. ಇವರನ್ನು ಮೆಗಾ ಹರಾಜಿಗೂ ಮುನ್ನ ಎಲ್‌ಎಸ್‌ಜಿ 11 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು.

ತಮ್ಮ ವೇಗದ ಬೌಲಿಂಗ್‌ನಿಂದಲೇ ಹೆಸರುವಾಸಿ ಆಗಿರುವ ಮಯಾಂಕ್ ಯಾದವ್, ಕಳೆದ ವರ್ಷ ಟಿ20 ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಇದೆ ಸರಣಿಯ ವೇಳೆ ಮಯಾಂಕ್ ಗಾಯದ ಕಾರಣದಿಂದ ಹೊರ ನಡೆದಿದ್ದರು. ಇವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಇವರು ಮೈದಾನಕ್ಕೆ ಪುನರಾಗಮನ ಮಾಡುವ ಬಗ್ಗೆ ಬಿಸಿಸಿಐ ಯಾವುದೇ ಅಪ್‌ಡೇಟ್ ನೀಡಿಲ್ಲ. ಮಯಾಂಕ್ ತನ್ನ ಬೌಲಿಂಗ್ ಸವಾಲನ್ನು ಮೆಟ್ಟಿನಿಂತು, ಫಿಟ್ನೆಸ್‌ನ ಎಲ್ಲ ಮಾನದಂಡಗಳಲ್ಲಿ ಪೂರ್ಣ ಅಂಕವನ್ನು ಗಳಿಸಿದರೆ, ಐಪಿಎಲ್ 2025 ರ ಎರಡನೇ ಚರಣದಲ್ಲಿ ಮೈದಾನಕ್ಕೆ ಮರಳವ ಸಾಧ್ಯತೆ ಇದೆ.
ಕಳೆದ ಆವೃತ್ತಿಯಲ್ಲೂ ಮಯಾಂಕ್ ಹೆಚ್ಚಿನ ಪಂದ್ಯಗಳನ್ನು ಆಡಿರಲಿಲ್ಲ. ಇವರ ಆಟ ಕೇವಲ ನಾಲ್ಕು ಪಂದ್ಯಗಳಿಗೆ ಮಾತ್ರ ಸೀಮಿತವಾಯಿತು. ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಮಯಾಂಕ್ ಮತ್ತೊಂದು ಗಾಯಕ್ಕೆ ತುತ್ತಾದರು. ಇದು ಅವರು ಮೈದಾನಕ್ಕೆ ಮರಳುವುದನ್ನು ಮರಳುವುದನ್ನು ಮತ್ತಷ್ಟು ಹೆಚ್ಚಿಸಿತು. ಇವರ ಗಾಯದ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಅವರ ಎಡ ಬೆನ್ನಿನ ಕೆಳಭಾಗದಲ್ಲಿ ಗಾಯವಾಗಿದ್ದು, ಇದು ಅವರು ಮೈದಾನಕ್ಕೆ ಮರಳುವಿಕೆಯನ್ನು ವಿಳಂಬಗೊಳಿಸುತ್ತಿದೆ ಎಂದು ನಂಬಲಾಗಿದೆ.

ಐಪಿಎಲ್ ಸಾಧನೆ
ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ತಮ್ಮ ಶಿಸ್ತು ಬದ್ಧ ದಾಳಿ ಹಾಗೂ ವೇಗದೊಂದಿಗೆ ಹೆಸರು ಮಾಡಿದ ಬೌಲರ್. ಇವರ ಎಸೆತವನ್ನು ಎದುರಿಸುವಲ್ಲಿ ಸ್ಟಾರ್ ಬೌಲರ್‌ಗಳು ಕಂಗಾಲಾಗಿದ್ದಾರೆ.
ಇವರು ಆಡಿರುವ 4 ಪಂದ್ಯಗಳಲ್ಲಿ 7 ವಿಕೆಟ್ ಪಡೆದು ಮಿಂಚಿದ್ದಾರೆ. ಇವರು ಈಗಾಗಲೇ ಭಾರತದ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, 3 ಪಂದ್ಯಗಳಲ್ಲಿ 4 ವಿಕೆಟ್ ಕಬಳಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications