For Quick Alerts
ALLOW NOTIFICATIONS  
For Daily Alerts
 

IPL 2025: ಮೂವರು ಆಟಗಾರರಿಗೆ ನೀಡುತ್ತಾ LSG ಗೇಟ್ ಪಾಸ್‌?

ಐಪಿಎಲ್ 2025ರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿಯ ಐಪಿಎಲ್‌ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನ ಮೇಲೆ ಮಾಲೀಕರ ಹಾಗೂ ಅಭಿಮಾನಿಗಳ ಚಿತ್ತ ನೆಟ್ಟಿದೆ. ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳುತ್ತಾರೆ, ಯಾವೆಲ್ಲಾ ಆಟಗಾರರನ್ನು ರಿಲೀಸ್ ಮಾಡುತ್ತಾರೆ ಎಂಬ ಚರ್ಚೆಗಳು ಆರಂಭವಾಗಿವೆ.

ಲಕ್ನೋ ಸೂಪರ್ ಜೈಂಟ್ಸ್‌ ಸಹ ಪ್ರಸಕ್ತ ಐಪಿಎಲ್‌ ಆವೃತ್ತಿಗೆ ಭರದ ಸಿದ್ಧತೆ ನಡೆಸಿದೆ. ಈಗ ಬರುತ್ತಿರುವ ಮಾಹಿತಿಯನ್ನು ನಂಬುವುದಾದರೆ, ಕನ್ನಡಿಗ ಕೆಎಲ್‌ ರಾಹುಲ್‌ ಅವರನ್ನು ಕೈ ಬಿಟ್ಟು, ಅವರಿಗೆ ತಂಡದಲ್ಲಿ ನುರಿತ ಬ್ಯಾಟ್ಸ್‌ಮನ್‌ ರೀತಿ ಆಡಿಸುವ ಲೆಕ್ಕಾಚಾರ ಆರಂಭವಾಗಿದೆ. ಹೀಗಾಗಿ ಎಲ್‌ಎಸ್‌ಜಿ ನಾಯಕನ ಹುಡುಕಾಟ ನಡೆಸಿದೆ. ಎಲ್‌ಎಸ್‌ಜಿ ಯಾರನ್ನು ಇಟ್ಟುಕೊಳ್ಳಬಹುದು ಎಂಬ ಬಗ್ಗೆ ಆರಂಭವಾಗಿದೆ.

IPL 2025 Lucknow Super Giants May Release Naveen Ul Haq De Kock and Hooda

ಮೂರು ಜನರಿಗೆ ಗೇಟ್‌ ಪಾಸ್‌?

ಎಲ್‌ಎಸ್‌ಜಿ ತಂಡ ಈ ಬಾರಿ ಐಪಿಎಲ್‌ ಮೆಗಾ ಹರಾಜಿಗೆ ಕ್ವಿಂಟನ್ ಡಿ ಕಾಕ್ ಮತ್ತು ದೀಪಕ್ ಹೂಡಾ ಅವರನ್ನು ಕೈಬಿಡಬಹುದು ಎಂದು ಹೇಳಲಾಗುತ್ತದೆ. ಈ ಪಟ್ಟಿಯಲ್ಲಿ ನವೀನ್ ಉಲ್ ಹಕ್ ಅವರ ಹೆಸರನ್ನೂ ಸೇರಿಸಲಾಗಿದೆ. ಹೀಗಾಗಿ ಈ ಆಟಗಾರರನ್ನು ರಿಲೀಸ್ ಮಾಡಿ ಭರವಸೆ ಹುಟ್ಟಿಸಿರುವ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಭರವಸೆಯ ಬ್ಯಾಟರ್ಸ್‌ ಕಿಕ್‌ ಔಟ್‌?

ಕ್ವಿಂಟನ್‌ ಡಿಕಾಕ್‌ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನೀಡಿದ ಪ್ರದರ್ಶನವನ್ನು ಐಪಿಎಲ್‌ನಲ್ಲಿ ನೀಡುವಲ್ಲಿ ವಿಫಲರಾಗಿದ್ದಾರೆ. ಡಿ ಕಾಕ್ 2023 ರಲ್ಲಿ 4 ಪಂದ್ಯಗಳಲ್ಲಿ 143 ರನ್ ಗಳಿಸಿದ್ದರು. ಅವರು ಎಪಿಎಲ್ 2024 ರ 11 ಪಂದ್ಯಗಳಲ್ಲಿ 250 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಇವರನ್ನು ಕೈ ಬಿಡುವ ಸಾಧ್ಯತೆ ಇದೆ.

IPL 2025 Lucknow Super Giants May Release Naveen Ul Haq De Kock and Hooda

ಭಾರತ ತಂಡದಲ್ಲಿ ಮಿಂಚುತ್ತಿರುವ ಯುವ ಆಟಗಾರ ದೀಪಕ್ ಹೂಡಾ. ಇವರು ಸಹ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೂಡಾ ಐಪಿಎಲ್ 2024ರ 11 ಪಂದ್ಯಗಳಲ್ಲಿ 145 ರನ್ ಸಿಡಿಸಿದ್ದರು. ಆದರೆ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ನವೀನ್ ಉಲ್ ಹಕ್ ತಮ್ಮ ಮೇಲೆ ಮಾಲೀಕರು ಇಟ್ಟ ಭರವಸೆಯನ್ನು ಹುಸಿಯಾಗಿಸಿದ್ದಾರೆ. ಇವರು ಐಪಿಎಲ್ 2023 ರಲ್ಲಿ 8 ಪಂದ್ಯಗಳನ್ನು ಆಡಿದ್ದು 11 ವಿಕೆಟ್‌ಗಳನ್ನು ಪಡೆದಿದ್ದರು. ಇನ್ನು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 14 ವಿಕೆಟ್‌ ಕಬಳಿಸಿದ್ದಾರೆ. ಇವರು ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಇವರನ್ನು ಸಹ ಕೈ ಬಿಡುವ ಸಾಧ್ಯತೆ ಇದೆ.

ಇನ್ನು ಈ ಬಾರಿಯ ಐಪಿಎಲ್‌ ಮೆಗ ಹಾರಜು ನಡೆಯಲಿದೆ. ಇನ್ನು ಐಪಿಎಲ್‌ ಮಾಲೀಕರು ಇನ್ನು ಸಹ ರಿಲೀಸ್‌ ಮಾಡಿದ ಆಟಗಾರರನ್ನು ಘೋಷಣೆ ಮಾಡಿಲ್ಲ. ಯಾರನ್ನು ರಿಲೀಸ್‌ ಮಾಡಲಿದ್ದಾರೆ ಎಂಬ ಕುತೂಹಲ ಈಗ ಮನೆ ಮಾಡಿದೆ. ಎಲ್‌ಎಸ್‌ಜಿ ತಂಡ ಈ ಬಾರಿ ಯಾವೆಲ್ಲಾ ಬದಲಾವಣೆಗಳನ್ನು ಮಾಡಬಹುದು ಎಂಬುದು ಕುತೂಹಲ ಮೂಡಿಸಿದೆ.

Story first published: Saturday, September 7, 2024, 16:48 [IST]
Other articles published on Sep 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+