IPL 2025: ಆರ್‌ಸಿಬಿ ಉಳಿಸಿಕೊಂಡ ಆಟಗಾರರು ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿ ಎಲ್ಲಾ ಫ್ರಾಂಚೈಸಿಗಳು ಸಜ್ಜಾಗಿವೆ. ಮೆಗಾ ಹರಾಜು ಅಖಾಡದಲ್ಲಿ ಸ್ಟಾರ್ ಆಟಗಾರರ ದೊಡ್ಡ ಪಟ್ಟಿಯಿದ್ದು, ಯಾರ ಅದೃಷ್ಟ ಖುಲಾಯಿಸಲಿದೆ ಎಂಬುದು ಕಾದು ನೋಡಬೇಕಾಗಿದೆ. ಜೊತೆಗೆ ಐಪಿಎಲ್‌ನ 10 ಫ್ರಾಂಚೈಸಿ ಬಲಿಷ್ಠ ತಂಡ ಕಟ್ಟಲು ತಮ್ಮದೇ ಆದ ಯೋಜನೆಗಳನ್ನು ಹಾಕಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ಐಪಿಎಲ್ 2025ರ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಐಪಿಎಲ್ 2025ರ ಮೆಗಾ ಹರಾಜಿಗೆ ಕಳೆದ ತಿಂಗಳು ಅಕ್ಟೋಬರ್ 31 ರೊಳಗೆ ಭಾರತೀಯ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿದ ಗಡುವಿನೊಳಗೆ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ಆರ್‌ಸಿಬಿ ಕೇವಲ ಮೂರು ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದೆ. ಉಳಿದೆಲ್ಲ ಆಟಗಾರರನ್ನು ತಂಡದಿಂದ ಆರ್‌ಸಿಬಿ ಬಿಡುಗಡೆ ಮಾಡಿದೆ.

ಆರ್‌ಸಿಬಿ ವಿರಾಟ್ ಕೊಹ್ಲಿ ಅವರಿಗೆ 21 ಕೋಟಿ ರೂ., ರಜತ್ ಪಾಡಿದಾರ್‌ಗೆ 11 ಕೋಟಿ ರೂ., ಯಶ್ ದಯಾಳ್‌ಗೆ 5 ಕೋಟಿ ರೂ. ನೀಡುವ ಮೂಲಕ ತಂಡದಲ್ಲಿಯೇ ಉಳಿಸಿಕೊಂಡಿದೆ. ಇದರೊಂದಿಗೆ ಸ್ಟಾರ್ ಆಟಗಾರರಾದ ಮೊಹಮ್ಮದ್ ಸಿರಾಜ್, ಫಾಪ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರಾನ್ ಗ್ರೀನ್, ವಿಲ್ ಜ್ಯಾಕ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಆರ್‌ಸಿಬಿ ಮೂರು ಆರ್‌ಟಿಎಂಗಳನ್ನು ಉಳಿಸಿಕೊಂಡಿದ್ದು, ಈ ಆಟಗಾರರಲ್ಲಿ ಮೂವರನ್ನು ಮತ್ತೆ ಪಡೆಯುವ ಅವಕಾಶವನ್ನು ಹೊಂದಿದೆ.
ಪರ್ಸ್ ಸೈಜ್
ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೆ ಮಾಲೀಕರ ಪರ್ಸ್ ಸೈಜ್ ಅನ್ನು ಬಿಸಿಸಿಐ ಹೆಚ್ಚಿಸಿದೆ. ಮೆಗಾ ಹರಾಜಿನಲ್ಲಿ ಎಲ್ಲ ತಂಡಗಳು ಗರಿಷ್ಠ 120 ಕೋಟಿ ರೂ.ಗಳನ್ನು ಹೊಂದಿವೆ. ಆರ್‌ಸಿಬಿ ಈ ಬಾರಿಯ ಮೆಗಾ ಹರಾಜಿನಲ್ಲಿ ಒಟ್ಟು 83 ಕೋಟಿ ರೂ.ಗಳನ್ನು ಇಟ್ಟುಕೊಂಡಿದೆ. ಏಕೆಂದರೆ ಮೂರು ಆಟಗಾರರಿಗೆ ಆರ್‌ಸಿಬಿ 37 ಕೋಟಿ ರೂ. ನೀಡಿದೆ. ಉಳಿದ 83 ಕೋಟಿಯಲ್ಲಿ ಗರಿಷ್ಠ 23 ಆಟಗಾರರನ್ನು ಆರ್‌ಸಿಬಿ ಬಿಡ್ ಮಾಡುವ ನಿರೀಕ್ಷೆಯಲ್ಲಿದೆ.
ಆರ್‌ಸಿಬಿಗೆ ರಾಹುಲ್?
ಆರ್‌ಸಿಬಿ ನಾಯಕ ಮತ್ತು ವಿಕೆಟ್ ಕೀಪರ್ ಹುಡುಕಾಟದಲ್ಲಿದೆ. ಈ ನಿಟ್ಟಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಆರ್‌ಸಿಬಿ ಬಿಡ್ ಮಾಡಲಿದೆ ಎಂದು ವರದಿಗಳು ಹೇಳಿವೆ. ಈ ಮಾತನ್ನು ಮೆಗಾ ಹರಾಜಿನಲ್ಲಿ ನಿಜ ಮಾಡುವುದು ಆರ್‌ಸಿಬಿ ಫ್ರಾಂಚೈಸಿಗೆ ಬಿಟ್ಟಿದೆ. ಆದರೆ ಕೆಎಲ್ ರಾಹುಲ್ ತವರಿನ ತಂಡ ಸೇರುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ರಾಹುಲ್ ಆರ್‌ಸಿಬಿ ಪರ ಆಡಿದ್ದಾರೆ. ಅಲ್ಲದೆ, ಎಂ ಚಿನ್ನಸ್ವಾಮಿ ಸ್ಟೇಡಿಯಂ ಕೂಡ ಕೆಎಲ್ ರಾಹುಲ್ ಅವರಿಗೆ ತವರಿನ ಮೈದಾನವಾಗಿದೆ. ಈ ಎಲ್ಲ ಅಂಕಿಅಂಶಗಳ ಆಧಾರದ ಮೇಲೆ ರಾಹುಲ್ ಅವರನ್ನು ಆರ್‌ಸಿಬಿ ಬಿಡ್ ಮಾಡುವ ಸಾಧ್ಯತೆಯಿದೆ. ಜೊತೆಗೆ ರಿಷಬ್ ಪಂತ್, ಡೇವಿಡ್ ವಾರ್ನರ್ ಮತ್ತು ಜೋಸ್ ಬಟ್ಲರ್ ಮೇಲೂ ಆರ್‌ಸಿಬಿ ಕಣ್ಣಿಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications