IPL Mega Auction: ಹರಾಜಿನಲ್ಲಿರುವ ಆಟಗಾರರು ಎಷ್ಟು? ಸ್ಟಾರ್ ಪ್ಲೇಯರ್‌ಗಳ ಸಂಖ್ಯೆ ಎಷ್ಟು? ಎಲ್ಲಿ ನೋಡಬಹುದು?
ಭಾನುವಾರದಿಂದ ಸೌದಿಯಲ್ಲಿ ಇಂಡಿಯನ್ ಪ್ರೀಮಿಯರ್ ಲಿಗ್ (ಐಪಿಎಲ್) 2025ರ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಭಾಗವಹಿಸಲು ಈಗಾಗಲೇ ಐಪಿಎಲ್ ಮಾಲೀಕರು, ಹರಾಜು ನಡೆಯುವ ಸ್ಥಳಕ್ಕೆ ತಲುಲಿದ್ದಾರೆ. ಈ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಗಾಳ ಹಾಕಿ ಬಲಿಷ್ಠ ತಂಡವನ್ನು ಕಟ್ಟುವ ಇರಾದೆ ಮಾಲೀಕರದ್ದಾಗಿದೆ. ಈ ನಿಟ್ಟಿನಲ್ಲಿ ಭರ್ಜರಿ ಪ್ಲ್ಯಾನ್ ನಡೆಯುತ್ತಿದೆ. ಹಾಗಿದ್ದರೆ, ಈ ಬಾರಿ ಹರಾಜಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ತಂಡಗಳು ಈಗ ಭಾನುವಾರ ಹಾಗೂ ಸೋಮವಾರ ತಾವು ಮಾಡಿಕೊಂಡ ರಣ ತಂತ್ರವನ್ನು ಪ್ರಸ್ತುತ ಪಡಿಸಲಿವೆ. ಎಷ್ಟೇ ಬೆಲೆ ಆದರೂ ಸ್ಟಾರ್ ಆಟಗಾರರನ್ನು ಖರೀದಿ ನಡೆಸಬೇಕು ಎಂಬುದು ಮಾಲೀಕರ ಲೆಕ್ಕಾಚಾರವಾಗಿದೆ. ಇದಕ್ಕಾಗಿ ಮಾಲೀಕರು ಶಾರ್ಟ್ ಲೀಸ್ಟ್ ಮಾಡಿಕೊಂಡಿದ್ದಾರೆ. ಎಲ್ಲಾ ಆಟಗಾರರ ಪ್ರದರ್ಶನದ ಡೇಟಾ ತಂಡಗಳಿಗೆ ಬಂದಿದೆ, ಅದರ ಆಧಾರದ ಮೇಲೆ ತಂಡಗಳು ತಮ್ಮ ಪಟ್ಟಿಗಳನ್ನು ಸಿದ್ಧಪಡಿಸಿಕೊಂಡಿವೆ.

ಈ ಬಾರಿ ಮೆಗಾ ಹರಾಜು 3 ಗಂಟೆಗೆ ಏಕೆ?
ಸಾಮಾನ್ಯವಾಗಿ ಮೆಗಾ ಹರಾಜು ಬೆಳಗ್ಗೆ ನಡೆಯಬೇಕಾಗಿತ್ತು. ಆದರೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪರ್ತ್‌ನಲ್ಲಿ ನಡೆಯಲಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯ ಮುಗಿದ ಬಳಿಕ ಐಪಿಎಲ್ ಹರಾಜು ನಡೆಯಲಿದೆ. ಎರಡೂ ದಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೆಗಾ ಹರಾಜು ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಇದು ರಾತ್ರಿ ಹತ್ತು ಗಂಟೆಯವರೆಗೂ ಮುಂದುವರಿಯಬಹುದು. ಮೊದಲ ದಿನದ ಮೊದಲ ಎರಡು ಗಂಟೆಗಳು ತುಂಬಾ ಆಸಕ್ತಿದಾಯಕವಾಗಿರಲಿದೆ. ಈ ಸಮಯದಲ್ಲಿ ಮಾರ್ಕ್ಯೂ ಆಟಗಾರರ ಹೆಸರುಗಳು ಹರಾಜು ಅಂಗಳ ಪ್ರವೇಶಿಲಿವೆ.
ಐಪಿಎಲ್ ಮೆಗಾ ಹರಾಜಿನಲ್ಲಿ 1500 ಕ್ಕೂ ಹೆಚ್ಚು ಆಟಗಾರರು ನೊಂದಾಯಿಸಿಕೊಂಡಿದ್ದರು. ಆ ಬಳಿಕ ಐಪಿಎಲ್ 2025 ಮೆಗಾ ಹರಾಜಿಗೆ ಶಾರ್ಟ್ ಲೀಸ್ಟ್ ಮಾಡಲಾಗಿದೆ. ಇದರಲ್ಲಿ 574 ಆಟಗಾರರನ್ನು ಶಾರ್ಟ್ ಲೀಸ್ಟ್ ಮಾಡಲಾಗಿದೆ. ಇದರಲ್ಲಿ 366 ದೇಶೀಯ ಆಟಗಾರರು ಇದ್ದು, 208 ವಿದೇಶಿ ಆಟಗಾರರು ಇದ್ದಾರೆ. ಅಸೋಸಿಯೇಟ್ ರಾಷ್ಟ್ರಗಳ ಮೂವರು ಆಟಗಾರರು ಕೂಡ ಈ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಈ ಹರಾಜಿನಲ್ಲಿ 318 ಭಾರತೀಯ ಅನ್ ಕ್ಯಾಪ್ಡ್ ಆಟಗಾರರು, 12 ವಿದೇಶಿ ಅನ್ ಕ್ಯಾಪ್ಡ್ ಆಟಗಾರರು ಭಾಗವಹಿಸಲಿದ್ದಾರೆ.
ಐಪಿಎಲ್ 10 ಮಾಲೀಕರು 204 ಸ್ಲಾಟ್‌ಗಳು ತುಂಬಿಕೊಳ್ಳಬೇಕಿದೆ. ಇದರಲ್ಲಿ 70 ವಿದೇಶಿ ಆಟಗಾರರು ಹರಾಜು ಆಗಬೇಕಿದೆ. ಹರಾಜು ಪಟ್ಟಿಯನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. 2 ಕೋಟಿ ರೂ. ಬೆಲೆಯ 81 ಆಟಗಾರರು, 27 ಆಟಗಾರರು 1.5 ಕೋಟಿ ರೂ., 18 ಆಟಗಾರರು 1.25 ಕೋಟಿ ರೂ., ಇನ್ನು 23 ಆಟಗಾರರ ಮುಖ ಬಲೆ 1 ಕೋಟಿ ಆಗಿರಲಿದೆ.
ಎಲ್ಲಿ ನೋಡಬಹುದು?
ಐಪಿಎಲ್ ಮೆಗಾ ಹರಾಜನ್ನು ಟಿವಿಯಲ್ಲಿ ಲೈವ್ ಆಗಿ ವೀಕ್ಷಿಸಲು ಬಯಸಿದರೆ, ಅದಕ್ಕಾಗಿ ನೀವು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೋಡಬಹುದು. ಮೊಬೈಲ್‌ನಲ್ಲಿ ಮೆಗಾ ಹರಾಜನ್ನು ಲೈವ್ ಆಗಿ ವೀಕ್ಷಿಸಲು, ನೀವು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ನೋಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications