ವಿಲ್ ಜಾಕ್ಸ್‌ಗೆ ಆರ್‌ಸಿಬಿ ಆರ್‌ಟಿಎಂ ಬಳಸದಕ್ಕೆ ಆಕಾಶ್ ಅಂಬಾನಿ ಫುಲ್ ಖುಷ್, ಏಕೆ?
ಸೌದಿ ಅರೆಬಿಯಾದಲ್ಲಿ ಐಪಿಎಲ್ ಮೆಗಾ ಹರಾಜಿನಲ್ಲಿ ಹಲವು ಸನ್ನಿವೇಶಗಳು ಕೆಲವೊಬ್ಬರ ಗಮನ ಸೆಳೆದವು. ಇದರಲ್ಲಿ ಎಲ್ಲರ ಗಮನ ಸೆಳೆದ ಒಂದು ದೃಶ್ಯ, ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಸಲಿಗೆ ಆರ್‌ಸಿಬಿ ತಂಡದ ಆಟಗಾರ ವಿಲ್ ಜಾಕ್ಸ್ ಹರಾಜು ಅಂಗಳ ಪ್ರವೇಶಿಸಿದ್ದಾಗ ಎಲ್ಲರೂ, ಇವರಿಗೆ ಆರ್‌ಸಿಬಿ ಪಕ್ಕಾ ಆರ್‌ಟಿಎಂ ಬಳಸುತ್ತದೇ ಎಂದೇ ಭಾವಿಸಿದ್ದರು.
ಅದೇ ಅಭಿಮಾನಿಗಳು ಅಂದುಕೊಳ್ಳುವುದೇ ಬೇರೆ. ಮ್ಯಾನೇಜ್ಮೆಂಟ್ ಲೆಕ್ಕಾಚಾರವೇ ಬೇರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವೇಳೆ ಆರ್‌ಸಿಬಿ ಆಟಗಾರನನ್ನು ಕೊಳ್ಳಲು ಹಲವು ಫ್ರಾಂಚೈಸಿಗಳು ಮುಂದೆ ಬಂದವು. ಈ ವೇಳೆ ಇವರಿಗೆ ಮುಂಬೈ ಆರಂಭದಲ್ಲೇ ಬಿಡ್ ಮಾಡಿತು. ಆದರೆ, ಇವರೊಂದಿಗೆ ಪಂಜಾಬ್ ಕಿಂಗ್ಸ್ ಸಹ ಜಿದ್ದಾ ಜಿದ್ದಿನ ಪೈಪೋಟಿ ನಡೆಸಿತು. ಈ ವೇಳೆ ನಡೆದ ಆ ಒಂದು ಸನ್ನಿವೇಶ ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿತು.

ಆಗಿದ್ದೇನು?
ವಿಲ್ ಜಾಕ್ಸ್ ಎಂತಹ ಸ್ಫೊಟಕ ಆಟಗಾರ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಆರ್‌ಸಿಬಿಗೆ ಇವರ ಕ್ಷಮತೆ ಇನ್ನು ಅರ್ಥ ಆಗಿಲ್ಲವಾ ಎಂಬ ಸಂಶಯ ಕಾಡುತ್ತಿದೆ. ಮುಂಬೈ ವಿಲ್ ಜಾಕ್ಸ್ ಅವರಿಗೆ 5 ಕೋಟಿ ಬಿಡ್ ಮಾಡಿದಾಗ, ಹರಾಜುಗಾರ್ತಿ ಆರ್‌ಸಿಬಿ ಆರ್‌ಟಿಎಂ ಬಳಸುತ್ತದಾ ಎಂದು ಕೇಳಿದರು. ಆಗ ಆರ್‌ಸಿಬಿ ಮ್ಯಾನೇಜ್ಮೆಂಟ್ ತಮ್ಮದೇ ನೈಜ ಶೈಲಿಯಲ್ಲಿ ಬಲಗೈ ಎತ್ತಿ ಅಡ್ಡ, ಅಡ್ಡ ಮಾಡಿದರು. ಆಗ ಮುಂಬೈ ಮ್ಯಾನೇಜ್ಮೆಂಟ್ ಪಾಳಯದಲ್ಲಿ ಸಂತಸ ಮುಗಿಲು ಮುಟ್ಟಿತು. ಈ ಕ್ಷಣಕ್ಕೆ ಸಹಾಯ ಮಾಡಿದ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ, ಮುಂಬೈ ಹರಾಜಿನ ಸಮಯದಲ್ಲೇ ವಿಶೇಷ ರೀತಿಯಲ್ಲಿ ಕೃತಜ್ಞತೆ ತಿಳಿಸಿತು.
ಆರ್‌ಟಿಎಂ ಬಳಸದ ಆರ್‌ಸಿಬಿ ನಡೆಯಿಂದ ತುಂಬಾ ಖುಷಿಯಾದ ಆಕಾಶ್ ಅಂಬಾನಿ ಎದ್ದು ಹೋಗಿ, ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ಥ್ಯಾಂಕ್ಸ್ ನೀಡಿದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದೆ.
ಐಪಿಎಲ್‌ನಲ್ಲಿ ಶತಕ ಸಿಡಿಸಿದ ವಿಲ್ ಜಾಕ್ವೆಸ್
ಜಾಕ್ಸ್ ಐಪಿಎಲ್‌ನಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿದ್ದು 230 ರನ್ ಗಳಿಸಿದ್ದಾರೆ. ಇದೇ ವೇಳೆ ಇವರು ಐಪಿಎಲ್‌ನಲ್ಲಿ ಒಂದು ಶತಕ, ಒಂದು ಅರ್ಧಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ಪರ ಅದ್ಭುತ ಪ್ರದರ್ಶನ ನೀಡಿರುವ ಅವರು 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 383 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications