IPL Auction 2025: ಮೆಗಾ ಹರಾಜು ಪ್ರಕ್ರಿಯೆಗೆ ತೆರೆ; ಯಾವೆಲ್ಲಾ ಆಟಗಾರರು ಶ್ರೀಮಂತರಾದರು?
ಕ್ರಿಕೆಟ್ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗೆ ತೆರೆ ಬಿದ್ದಿದೆ. ನವೆಂಬರ್ 24-25 ರಂದು ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಅದ್ಧೂರಿಯಾಗಿ ನಡೆಯಿತು. ಸ್ಟಾರ್ ಆಟಗಾರರಿಗಾಗಿ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ತೀವ್ರ ಪೈಪೋಟಿ ನಡೆಸಿದವು.
ಸತತ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಒಟ್ಟು 182 ಆಟಗಾರರು ವಿವಿಧ ತಂಡಗಳನ್ನು ಸೇರಿದರು. 10 ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟುವ ಸಲುವಾಗಿ ಎರಡು ದಿನಗಳ ಹರಾಜಿನಲ್ಲಿ ಬರೋಬ್ಬರಿ 639 ಕೋಟಿ ರೂಪಾಯಿ ಖರ್ಚು ಮಾಡಿವೆ.ಈ ಬಾರಿ ಮೆಗಾ ಹರಾಜಿನಲ್ಲಿ ಹಲವು ಆಟಗಾರರ ಅದೃಷ್ಟ ಬದಲಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತದ ಪರ ಟಿ20 ವಿಶ್ವಕಪ್ 2024ರಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿ ಗಮನ ಸೆಳೆದಿದ್ದ ಅರ್ಷದೀಪ್ ಸಿಂಗ್ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್‌ಗೆ ಹೋಗುವ ಮೂಲಕ ಐಪಿಎಲ್ 2025ರ ಮೆಗಾ ಹರಾಜು ಆರಂಭವಾಯಿತು. ಮೋಹಿತ್ ರಾಠೀ ಕೊನೆಯಲ್ಲಿ ಆರ್‌ಸಿಬಿ ಫ್ರಾಂಚೈಸಿಗೆ 30 ಲಕ್ಷ ರೂ.ಗೆ ಬಿಡ್ ಮೂಲಕ ಎರಡು ದಿನಗಳ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೆ ತೆರೆ ಎಳೆಯಲಾಯಿತು.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರಾದ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಹೊಸ ದಾಖಲೆ ಮಾಡಿದರು. ರಿಷಬ್ ಪಂತ್ 27 ಕೋಟಿ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗೆ ಬಿಡ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾದರು. ಶ್ರೇಯಸ್ ಅಯ್ಯರ್ ಕೂಡ 26.75 ಕೋಟಿ ರೂ. ಪಂಜಾಬ್ ಕಿಂಗ್ಸ್ ತಂಡ ಸೇರಿದ್ದು ಎರಡನೇ ದುಬಾರಿ ಆಟಗಾರರಾಗಿದ್ದಾರೆ.
ಭಾರೀ ಕುತೂಹಲ ಮೂಡಿಸಿದ ಕೆಎಲ್ ರಾಹುಲ್ ಅವರ ಹರಾಜು ನಿರೀಕ್ಷೆಗೆ ತಕ್ಕಂತೆ ನಡೆಯಲಿಲ್ಲ. ರಾಹುಲ್ ಕೇವಲ 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ 2 ಕೋಟಿ ರೂ.ಗೆ ಡೆಲ್ಲಿ ಸೇರಿಕೊಂಡರು. ಇನ್ನೂ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ ಎಂಬ ಎನಿಸಿಕೊಂಡಿರುವ 13 ವರ್ಷದ ಬಿಹಾರದ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು 1.1 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ಬಿಡ್ ಮಾಡಿತು.
ಇದಲ್ಲದೆ, ಮೆಗಾ ಹರಾಜಿನಲ್ಲಿ ಬಹುತೇಕ ಭಾರತೀಯ ಬ್ಯಾಟರ್, ಬೌಲರ್‌ಗಳಿಗಾಗಿ ಫ್ರಾಂಚೈಸಿಗಳು ಕೋಟಿ ಕೋಟಿ ಹಣ ಖರ್ಚು ಮಾಡಿದವು. ಸ್ಟಾರ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ 23.75 ಕೋಟಿ ರೂ. ಅನ್ನು ಕೆಕೆಆರ್ ನೀಡಿ ಮರಳಿ ಪಡೆಯಿತು. ಈ ಮೂಲಕ ವೆಂಕಟೇಶ್ ಅಯ್ಯರ್ ಮೊದಲ ದಿನದ ಮೆಗಾ ಹರಾಜಿನಲ್ಲಿ ಅಚ್ಚರಿ ಮೂಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications